ಮಲ್ಲಿಗೆ ಬೆಳೆಗಾರರಿಗೆ ಪ್ಯಾಕೇಜ್ ನೀಡುವಂತೆ ಮುಖ್ಯಮಂತ್ರಿಗಳಿಗೆ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಆಗ್ರಹ
ಉಡುಪಿ: ನಿನ್ನೆ ರಾಜ್ಯದ ಮುಖ್ಯಮಂತ್ರಿಗಳು ರೂ 1610 ಕೋಟಿ ನೆರವು ಘೋಷಣೆ ಮಾಡುವ ಮೂಲಕ ರಾಜ್ಯಸರ್ಕಾರದ ಕೋವಿಡ್ 19 ಲಾಕ್ ಡೌನ್ ನ ಪರಿಣಾಮವಾಗಿ ತೊಂದರೆಗೆ ಸಿಲುಕಿರುವ ಹಲವಾರು ವರ್ಗದ ಅಸಂಘಟಿತ ವಲಯದ ಕಾರ್ಮಿಕರಿಗೆ ಮತ್ತು ಹೂ ಬೆಳೆಗಾರರಿಗೆ ನೆರವು ನೀಡುವ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸುವ ಮೂಲಕ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಲ್ಲಿಗೆ ಹೂ ಬೆಳೆಯುವ ಬೆಳೆಗಾರರಿಗೂ ಪರಿಹಾರ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ. ಕುಯಿಲಾಡಿ ಸುರೇಶ ನಾಯಕ್ ಆಗ್ರಹಿಸಿದ್ದಾರೆ.
ಅವರು ಕೂಡಾ ಬಹಳ ವರ್ಷದಿಂದ ಮಲ್ಲಿಗೆ ಕೃಷಿಯನ್ನು ಸಾಂಪ್ರದಾಯಿಕಾಗಿ ಬಹಳ ಕಷ್ಟಪಟ್ಟು ಬೆಳೆಸುತ್ತಾರೆ ಮಲ್ಲಿಗೆಯನ್ನೇ ತಮ್ಮ ಬದುಕನ್ನಾಗಿಸಿಕೊಂಡಿದ್ದಾರೆ ಇವರೂ ಕೂಡ ಈ ಬಾರಿ ಸಭೆ ಸಮಾರಂಭಗಳಿಲ್ಲದೆ ಮಾರುಕಟ್ಟೆ ಇಲ್ಲದೆ. ಮತ್ತು ಸೂಕ್ತ ದರ ಸಿಗದೇ ಹೈರಾಣಾಗಿದ್ದಾರೆ ಆದುದರಿಂದ ಈ ಕೋವಿಡ್ ಪರಿಹಾರ ನಿಧಿಗೆ ಮಲ್ಲಿಗೆ ಬೆಳೆಗಾರರನ್ನು ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಇ ಮೇಲ್ ಕಳುಹಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ