ಬಿಟ್ ಕಾಯಿನ್: ಮಾಸ್ಟರ್ ಮೈಂಡ್ ಅರೆಸ್ಟ್
ಉಡುಪಿ:ಅಂತರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿಸಿರುವ ಬಿಟ್ ಕಾಯಿನ್ ಡೀಲ್ ದಂಧೆ ನಡೆಸುತ್ತಿದ್ದ ತಂಡದ ಮಾಸ್ಟರ್ ಮೈಂಡ್ ಕಾರ್ಕಳ ತಾಲೂಕಿನ ಅಜೆಕಾರು ಗ್ರಾಮದ ಕಾಡುಹೊಳೆ ಕವಿತಾ ಮೂಲ್ಯ ಸೇರಿದಂತೆ 13 ಜನರನ್ನು ಚಿಕ್ಕಮಗಳೂರು ಪೊಲೀಸರು ಬುಧವಾರ ಮುಂಜಾನೆ ಬಂಧಿಸಿದ್ದಾರೆ. ಸುಮಾರು 9 ರಿಂದ 10 ಕೋಟಿ ವ್ಯವಹಾರ ನಡೆಸಲಾಗಿದೆ ಎನ್ನುವ ಮಾಹಿತಿ ಲಭಿಸಿದ್ದು ,ಬಿಟ್ ಕಾಯಿನ್ ವ್ಯವಹಾರದಲ್ಲಿ ಲಾಭ ಗಳಿಸುವ ದಂಧೆಯಲ್ಲಿ ಲಕ್ಷಾಂತರ ರೂ ಹಣ ಹೂಡಿ ಬಳಿಕ ಹಣ ಕಳೆದುಕೊಂಡು ವಂಚನೆಗೊಳದಾವರು ಚಿಕ್ಕಮಗಳೂರು ನಗರ ಠಾಣೆಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ 30 ಜನ ಪೊಲೀಸರ ತಂಡ ಪ್ರಮುಖ ಆರೋಪಿಯೊಂದಿಗೆ ಕಾಡುಹೊಳೆಗೆ ಆಗಮಿಸಿ ಕವಿತಾಳನ್ನು ವಶಕ್ಕೆ ಪಡೆದು ಬಳಿಕ ಸುದೀರ್ಘ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಈಕೆಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೀಗ ಕವಿತಾ ಮೂಲ್ಯ ಚಿಕ್ಕಮಗಳೂರು ಜೈಲಿನಲ್ಲಿ ಬಂಧನದಲ್ಲಿದ್ದಾಳೆ ಎಂದು ಚಿಕ್ಕಮಗಳೂರು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ 4 ಕೋಟಿ ಮೌಲ್ಯದ 10 ಕಾರುಗಳು,5 ಲಕ್ಷ ಮೌಲ್ಯದ ಆಭರಣಗಳು ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.