ಕ್ಯಾನ್ಸರ್ ಪೀಡಿತ ಕಿಶೋರ್ ಗೆ ಭಾರತ್ ವಿಕಾಸ್ ಟ್ರಸ್ಟ್ ಸಹಾಯ
ಕಾಪು: ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಇಲ್ಲಿಗೆ ಸಮೀಪದ ತೆಂಕಎರ್ಮಾಳುವಿನ ಬೈಲುಮನೆಯ ನಿವಾಸಿ ಕಿಶೋರ್ ಶೆಟ್ಟಿ ಅವರಿಗೆ ವಿಕಾಸ್ ಭಾರತ್ ಟ್ರಸ್ಟ್ ನ ವತಿಯಿಂದ 30 ಸಾವಿರ ರು.ಗಳ ಧನಸಹಾಯವನ್ನು ಮಾಡಲಾಯಿತು. ವೃತ್ತಿಯಲ್ಲಿ ಪೈಂಟರ್ ಆಗಿರುವ ಅವರು ಕಳೆದ 4 ವರ್ಷಗಳಿಂದ ಅವರು ಈವರೆಗೆ ಸುಮಾರು 4 ಲಕ್ಷ ರು.ಗಳನ್ನು ತಮ್ಮ ಚಿಕಿತ್ಸೆಗೆ ವ್ಯಯಿಸಿದ್ದಾರೆ. ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳಿರುವ ಈ ಕುಟುಂಬಕ್ಕೆ ಅವರ ಸಂಪಾದನೆಯ ಆಧಾರವಾಗಿತ್ತು, ಈಗ ಅನಾರೋಗ್ಯದಿಂದ ಕೆಲಸಕ್ಕೂ ಹೋಗಲಾಗದೇ ಸಂಪಾದನೆ ಇಲ್ಲದೇ ತೀವ್ರ ಸಂಕಷ್ಟದಲ್ಲಿದ್ದಾರೆ.
ಪತ್ನಿ ಜ್ಯೋತಿ ಅವರು ಕಟ್ಟುವ ಬೀಡಿಯಿಂದ ಬರುವ ಆದಾಯದಿಂದ ಮನೆಯ ಖರ್ಚುವೆಚ್ಚಗಳನ್ನು ನಿರ್ವಹಿಸುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೇ ಅಸಹಾಯಕರಾಗಿದ್ದಾರೆ. ಅಲ್ಲದೆ ಅವರ ದೊಡ್ಡ ಮಗಳ ಮದುವೆಯ ಪ್ರಸ್ತಾಪಗಳು ಬರುತ್ತಿದು ಹಣಕಾಸಿನ ಸಮಸ್ಯೆಯಿಂದ ಮದುವೆನ್ನೂ ಮುಂದೂಡಿದ್ದಾರೆ.ಇದನ್ನು ತಿಳಿದು ವಿಕಾಸ್ ಭಾರತ್ ಟ್ರಸ್ಟ್ ಅವರ ಮನೆಗೆ ಹೋಗಿ ಪರಿಸ್ಥಿತಿಯನ್ನು ಪರಿಶೀಲಿಸಿ, ತನ್ನ ವಾಟ್ಸಾಪ್ ಗ್ರೂಪ್ ನ ಸದಸ್ಯರಿಂದ ಸುಮಾರು 30 ಸಾವಿರ ರು.ಗಳನ್ನು ಸಂಗ್ರಹಿಸಿ, ಕಿಶೋರ್ ಶೆಟ್ಟಿಅವರ ಮನೆಗೆ ತೆರಳಿ ಅದನ್ನು ಹಸ್ತಾಂತರಿಸಿದ್ದಾರೆ. ಬೇರೆಯವರು ಕೂಡ ಅವರಿಗೆ ಸಹಾಯ ಮಾಡುವಂತೆ ವಿನಂತಿಸಿದ್ದಾರೆ.
Thank you sur
Thank you sir