ಭಾಗವತ ಕೆ ಜೆ ಗಣೇಶ್ ಅಮೇರಿಕಾಕ್ಕೆ

ಉಡುಪಿ – ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಆಗಸ್ಟ್ 3 ಹಾಗು 4 ರಂದು ನಡೆಯುವ ಪ್ರಪ್ರಥಮ ಯಕ್ಷಗಾನದ ಸಮ್ಮೇಳನದಲ್ಲಿ ಬಡಗುತಿಟ್ಟಿನ ಖ್ಯಾತ ಭಾಗವತರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಕೆ .ಜೆ. ಗಣೇಶ್ ಕಿದಿಯೂರು ತಮ್ಮ ಪ್ರದರ್ಶನ ನೀಡಲಿದ್ದಾರೆ.
ಚಿಕ್ಕ ಪ್ರಾಯದಿಂದಲೇ ಯಕ್ಷಗಾನದ ಆಸಕ್ತಿಯಿರುವ ಇವರಿಗೆ ಕೆ ಬಾಬು ಶೆಟ್ಟಿಗಾರ್ ನಾಟ್ಯಾಭ್ಯಾಸದ ತರಬೇತಿ ನೀಡಿದ್ದರು ,ಯಕ್ಷಗಾನ ಪಾತ್ರ ನಿರ್ವಹಿಸುವ ಇವರಿಗೆ ಚಂಡೆ ವಾದಕರಾದ ಕೆಮಣ್ಣು ಆನಂದ್ ರವರು ಚಂಡೆ ಮದ್ದಳೆ ಯ ಗುರುಗಳಾಗಿದ್ದರೆ , ಶಿವ ಪ್ರಭಾ ಯಕ್ಷಗಾನದ ಕೇಂದ್ರದ ಗಣಪತಿ ಭಟ್ ರಿಂದ ಭಾಗವತಿಕೆ ಕಲಿತ ಇವರಿಗೆ ಗೋರ್ಪಾಡಿ ವಿಠ್ಠಲ ಪಾಟೀಲರಿಂದ ಪರಂಪರೆಯ ಪದ್ಯಗಳ ಮಟ್ಟುಗಳನ್ನು ಅರಿತುಕೊಂಡಿದ್ದಾರೆ. ಯಕ್ಷಗಾನದ ಛಂದಸ್ಸುಗಳನ್ನು ಗಣೇಶ್ ಕೊಲಕಾಡಿಯವರಿಂದ ಕಲಿತುಕೊಂಡಿದ್ದಾರೆ . ಪ್ರಸಂಗಗಳ ನಡೆಯನ್ನು ವೇಷಧಾರಿ ಎಂ ಕೆ ರಮೇಶ್ ಆಚಾರ್ಯ ಅವರ ಮಾರ್ಗದರ್ಶನದ ಮೂಲಕ ಕಲಿತರು

ಅಂಬಲ್ಪಾಡಿ ಶ್ರೀ ಲಕ್ಷ್ಮಿ ಜನಾರ್ಧನ ಯಕ್ಷಗಾನ ಕಲಾ ಮಂಡಳಿಯವ ಮುಖ್ಯ ಭಾಗವತರಾಗಿಯೂ, ಅನೇಕ ಸಂಘ ಸಂಸ್ಥೆಗಳಲ್ಲಿ ಯಕ್ಷಗುರುವಾಗಿ ನಿರ್ದೇಶನ ನೀಡುತ್ತಿದ್ದಾರೆ. ಆಕಾಶವಾಣಿಯಲ್ಲಿ ಯಕ್ಷಗಾನ ಹಾಡುಗಳು ಮತ್ತು ತಾಳಮದ್ದಲೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ, ವೃತ್ತಿಪರ ಮೇಳಗಳಲ್ಲಿ ಕಾರ್ಯಕ್ರಮ ನಿರ್ವಹಿಸುತ್ತಿದ್ದು , ಪ್ರಸಿದ್ಧ ಭಾಗವತಿಕೆ ಹಾಗೂ  ದ್ವಂದ್ವ ಭಾಗವತಿಕೆಯಲ್ಲಿ ಪ್ರಸಿದ್ಧರಾದ ಕೆ. ಜೆ. ಗಣೇಶ್ ಅವರಿಗೆ ಯಕ್ಷಕಲಾ ಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಹಲವಾರು ಪ್ರಶಸ್ತಿಗಳು ದೊರೆತಿದ

ಯಕ್ಷಗಾನ ಸಮ್ಮೇಳನದಲ್ಲಿ ಮೊದಲ ದಿನ  ಕೆ.ಜೆ. ಗಣೇಶ್ ಹಾಗೂ ಪಟ್ಲ ಸತೀಶ್ ಶೆಟ್ಟಿಯವರ ದ್ವಂದ್ವಗಾಯನ ನಡೆಯಲಿದೆ. ನಂತರ ಇವರ ನಿರ್ದೇಶನದಲ್ಲಿ ಭೀಷ್ಮ ವಿಜಯ ಎಂಬ ಬಡಗುತಿಟ್ಟು ಯಕ್ಷಗಾನ ಪ್ರದರ್ಶನವಾಗಲಿದೆ . ಎರಡನೇ ದಿನ ತೆಂಕುತ್ತಿಟ್ಟಿನ ನಾಟ್ಯ ವೈಭವ ಹಾಗು ನರಕಾಸುರ ವದೆ ಯಕ್ಷಗಾನ ಪ್ರದರ್ಶನ ವಾಗಲಿದೆ ,ಯಕ್ಷಾಭಿಮಾನಿಗಳಿಗೆ ನಾಟ್ಯಾಭ್ಯಾಸವನ್ನು ಮಾಡಿಸಿ, ಪ್ರಸಂಗವನ್ನು ನಿರ್ದೇಶಿಸುವ ತರಬೇತಿ 1 ತಿಂಗಳ ಕಾಲ ಯಕ್ಷಬಳಗದ ಸದ್ಯಸರಿಗೆ ನೀಡಲಿದ್ದಾರೆ. ಎಂದು ಉಡುಪಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ಜನಾರ್ಧನ ಯಕ್ಷಗಾನ ಕಲಾ ಮಂಡಳಿಯ ಉಪಾಧ್ಯಕ್ಷರಾದ ಕೆ ಅಜಿತ್ ಕುಮಾರ್,,,, ಕಾರ್ಯದರ್ಶಿ ಕೆ ಜೆ ಕೃಷ್ಣ , ನರಸಿಂಹ ಆಚಾರ್ಯ,ಕನ್ಯಾನ ಜನಾರ್ದನ್, ಉಡುಪಿ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಕಿಶೋರ್ ಆರ್ ಆಚಾರ್ಯ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!