ಬೆಂಗಳೂರು:ಭೀಕರ ಅಪಘಾತ ಕಲ್ಯಾಣಪುರದ ಮೆಕ್ಯಾನಿಕ್ ಇಂಜಿನಿಯರ್ ಸಾವು

ಬೆಂಗಳೂರು: ಏರ್ಪೋರ್ಟ್ ರೋಡ್ ನಲ್ಲಿ ನಡೆದ ಕಾರು ಮತ್ತು ಸ್ಕೂಟಿ ಅಪಘಾತದಲ್ಲಿ ಗಂಗೊಳ್ಳಿ ಮೂಲದ ಮೆಕ್ಯಾನಿಕ್ ಇಂಜಿನಿಯರ್ ಸಾವು.

ಶನಿವಾರ ರಾತ್ರಿ7.35ಸುಮಾರಿಗೆ ಏರ್ಪೋರ್ಟ್ ರೋಡ್ ನಲ್ಲಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರೊಂದು ಗ್ರೆಗ್ ಮೈಕಲ್ ಕಾರ್ಡಿನ್ (23)ಚಲಾಯಿಸುತ್ತಿದ್ದ ಹೊಂಡಾ ಆಕ್ಟಿವಾಕ್ಕೆ  ಡಿಕ್ಕಿಹೊಡೆದಿತ್ತು.

ಗ್ರೆಗ್ ರಸ್ತೆಗೆಸೆಯಲ್ಪಟ್ಟು ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ ಆರು ವರ್ಷಗಳಿಂದ ಕಲ್ಯಾಣಪುರ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಈತನ ಹೆತ್ತವರು ಗ್ರೇಟಾ ಮತ್ತು ಗ್ರೆಗರಿ ಕಾರ್ಡಿನ್ ಅವರ ಪುತ್ರನಾಗಿದ್ದಾನೆ . ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

1 thought on “ಬೆಂಗಳೂರು:ಭೀಕರ ಅಪಘಾತ ಕಲ್ಯಾಣಪುರದ ಮೆಕ್ಯಾನಿಕ್ ಇಂಜಿನಿಯರ್ ಸಾವು

Leave a Reply

Your email address will not be published. Required fields are marked *

error: Content is protected !!