ಬೆಳ್ಮಣ್: ಮಾ.8 ಸೂರಜ್ ಹಿಲ್ಸ್ ವಾಣಿಜ್ಯ ಮತ್ತು ವಸತಿ ಸಮುಚ್ಚಯ ಉದ್ಘಾಟನೆ

ಬೆಳ್ಮಣ್ : ಮಾನ್ಯ ಡೆವಲಪರ್ಸ್ ಅವರು ಬೆಳ್ಮಣ್ನಲ್ಲಿ ನಿರ್ಮಿಸಿರುವ ಸೂರಜ್ ಹಿಲ್ಸ್ ವನದುರ್ಗ ಬೆಳ್ಮಣ್ ವಾಣಿಜ್ಯ ಮತ್ತು ವಸತಿ ಸಮುಚ್ಚಯದ ಉದ್ಘಾಟನೆ ನಾಳೆ ಮಾರ್ಚ್ 8 ರಂದು ಸಂಜೆ 4.30 ಕ್ಕೆ ನಡೆಯಲಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ ಸುನೀಲ್ ಕುಮಾರ್ ನೂತನ ವಾಣಿಜ್ಯ ಮತ್ತು ವಸತಿ ಸಮುಚ್ಚಯವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ವಹಿಸಲಿದ್ದಾರೆ. ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರಿ ದೇಗುಲದ ಆಡಳಿತ ಮೊಕೇಸ್ತರ ಬಿ. ವಿಘ್ನೇಶ್ ಭಟ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬೇಲಾಡಿ ವಿಠಲ ಶೆಟ್ಟಿ ಶುಭಾಶಂಸನೆ ಗೈಯಲಿದ್ದಾರೆ ಎಂದು ಮಾನ್ಯ ಡೆವಲಪರ್ಸ್ ಶೋಧನ್ ಕುಮಾರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಬೆಳ್ಮಣ್ ಬಂಟರ ಸಂಘದ ಅಧ್ಯಕ್ಷ ಸುಹಾಸ್ ಹೆಗ್ಡೆ, ಉಜ್ವಲ್ ಡೆವಲಪರ್ಸ್ನ ಪುರುಷೋತ್ತಮ ಶೆಟ್ಟಿ, ಎಜಿ ಅಸೋಸಿಯೇಟ್ಸ್ನ ಎಂ ಗೋಪಾಲ ಭಟ್, ಉಡುಪಿ ಸಾಯಿರಾಧಾ ಡೆವಲಪರ್ಸ್ನ ಮನೋಹರ್ ಶೆಟ್ಟಿ, ಕಾರ್ಕಳದ ವಕೀಲ ಎಂ ಕೆ ವಿಜಯ್ ಕುಮಾರ್, ಮುಂಬಯಿ ಉದ್ಯಮಿಗಳಾದ ಬೋಳ ರಘುರಾಮ ಶೆಟ್ಟಿ ಪಂಜಿನಡ್ಕ, ಬೋಳ ರಘುರಾಮ ಶೆಟ್ಟಿ, ರಾಮ್ದೇವ್, ಕೃಷ್ಣ ಪ್ಯಾಲೇಸ್ನ ಕೃಷ್ಣ ಶೆಟ್ಟಿ, ಬೆಳ್ಮಣ್ ಉದ್ಯಮಿ ಎಸ್ ಕೆ ಸಾಲ್ಯಾನ್, ಶಿರ್ವಾ ಮುಂಬಯಿಯ ಯಶವಂತ ಶೆಟ್ಟಿ, ಬೆಂಗಳೂರಿನ ಉದ್ಯಮಿ ಸುರೇಂದ್ರ ಗಡಿಯಾರ್, ಮೂಡುಬಿದ್ರೆಯ ವಕೀಲ ಚೇತನ್ ಕುಮಾರ್, ಉಡುಪಿಯ ಹರ್ಷ ಡೆವಲಪರ್ಸ್ ನ ಸಾಯಿನಾಥ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಶಿರ್ವ ಕಾರ್ಪೋರೇಶನ್ ಬ್ಯಾಂಕ್ನ ನಿವೃತ್ತ ಮ್ಯಾನೇಜರ್ ಪ್ರೇಮಾನಂದ ಭಟ್, ಪಡು ಬೆಳ್ಮಣ್ ಶೆಟ್ಟಿಬೆಟ್ಟು ಸರೋಜಿನಯಮ್ಮ ಭಟ್, ಕೊಕ್ಕರ್ಣೆ ಸೂರಾಲು ಪಟೇಲರ ಮನೆ ಗೌರಮ್ಮ ಶೆಟ್ಟಿ, ಬೆಳ್ಮಣ್ ವರ್ತಲ ಬೆಟ್ಟು ವಿಠಲ ಶೆಟ್ಟಿ, ಬೋಳ ವಿಶ್ವನಾಥ ಅಡ್ಯಂತಾಯ, ನಿಕೋಲಾಸ್ ಡೇಸಾ ಹಾಗೂ ಸಿಲ್ವೆಸ್ಟರ್ ಡೇಸಾ, ಸೂಡಾ ತಬುರ ಶೆಟ್ಟಿ ಸಮ್ಮಾನ ಸ್ವೀಕರಿಸಲಿದ್ದಾರೆ.

ನಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾದ ರಾಮಶೆಟ್ಟಿ ಹಾಗೂ ಗೋವಿಂದ ದಾಸ್, ಪುರುಷೋತ್ತಮ ಬಂಗೇರ, ಬೆಳ್ಮಣ್ ಸರಕಾರಿ ಪದವಿ ಕಾಲೇಜು ರಾಜೀವ ಶೆಟ್ಟಿ, ಫಲಿಮಾರು ಯಕ್ಷಗಾನ ಶಿಕ್ಷಕ ಕೇಶವ ಬಡಾನಿಡಿಯೂರು, ಉಡುಪಿ ಎ.ಜೆ. ಅಸೋಸಿಯೇಟ್ಸ್ ನ ಎಂಜಿನಿಯರ್ ರಾಘವೇಂದ್ರ ಸೋಮಯಾಜಿ, ನಿವೃತ್ತ ಅಂಚೆ ಅಧಿಕಾರಿ ಗಣಪತಿ ಆಚಾರ್ಯ, ಮುಂಬಯಿಯ ವಾಸು ತಜ್ಞ ಜಿತೇಶ್ ಗುರು ವಂದನೆ ಸ್ವೀಕರಿಸಲಿದ್ದಾರೆ.

ಸೂರಜ್ ಹಿಲ್ಸ್ ವಾಣಿಜ್ಯ ವಸತಿ ಸಮುಚ್ಛಯವೂ ಕೈಗೆಟಕುವ ದರದಲ್ಲಿ ಲಭ್ಯವಿದೆ. ದಿನದ 24 ಗಂಟೆಯೂ ನೀರು, ತಡೆ ರಹಿತ ವಿದ್ಯುತ್, ಭದ್ರತೆ, ಸಿಸಿ ಕ್ಯಾಮೆರಾ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ಪ್ರತಿ ಅಡುಗೆ ಕೋಣೆಗಳಿಗೆ ಗ್ಯಾಸ್ ಸಂಪರ್ಕ, ನೀರು ಶುದ್ಧೀಕರಣ ಘಟಕ ವ್ಯವಸ್ಥೆ ಇದೆ. ಮಾರ್ಚ್ ಅಂತ್ಯದೊಳಗೆ ವಸತಿ ಅಥವಾ ವಾಣಿಜ್ಯ ಸಮುಚ್ಚಯವನ್ನು ಖರೀದಿಸುವವರಿಗೆ ವಿಶೇಷ ರಿಯಾಯಿತಿ ಇದೆ ಎಂದು ಶೋಧನ್ ಕುಮಾರ್ ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾನ್ಯ ಡೆವಲಪರ್ಸ್ನ ರೂಪಾ ರಾಣಿ ಶೆಟ್ಟಿ, ಸ್ವರೂಪ ಶೆಟ್ಟಿ, ಮಾನ್ಯ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!