ಬೇಕ್ ಸ್ಟುಡಿಯೋದಲ್ಲಿ ಕೇಕ್ ಮಿಕ್ಸಿಂಗ್ ಗೆ ಚಾಲನೆ
ಉಡುಪಿ: ಬೇಕರಿ ತಿನಿಸುಗಳಿಗೆ ಹೆಸರುವಾಸಿಯಾದ “ಬೇಕ್ ಸ್ಟುಡಿಯೋ” ವತಿಯಿಂದ ‘ಕೇಕ್ ಮಿಕ್ಸಿಂಗ್’ ಕಾರ್ಯಕ್ರಮಕ್ಕೆ ಖ್ಯಾತ ತುಳು ಚಲನಚಿತ್ರ ನಟ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಶನಿವಾರ ಚಾಲನೆ ನೀಡಿದರು. ಬೇಕ್ ಸ್ಟುಡಿಯೋ ಉಡುಪಿ-ಮಂಗಳೂರು ಭಾಗದಲ್ಲಿ ಬೇಕರಿ ತಿನಿಸುಗಳಿಗೆ ಹೆಸರುವಾಸಿಯಾಗಿದೆ. ತನ್ನ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ಕ್ಲಪ್ತ ಸಮಯದಲ್ಲಿ ನೀಡುವ ಮೂಲಕ ಗ್ರಾಹಕರ ಪ್ರೀತಿ ಪಾತ್ರವಾದ ಸಂಸ್ಥೆಯಾಗಿದೆ.
ಇವರ ವಿವಿಧ ಬಗೆಯ ತಿಂಡಿ ತಿನಿಸುಗಳು ಮತ್ತು ವಿಶೇಷವಾಗಿ ವಿಶೇಷ ವಿನ್ಯಾಸಗಳ ಕೇಕ್ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರನ್ನು ಮತ್ತಷ್ಟು ಸೆಳೆಯುವಲ್ಲಿ ಬೇಕ್ ಸ್ಟುಡಿಯೋ ಯಶಸ್ವಿಯಾಗಿದೆ.
ಕ್ರಿಸ್ಮಸ್ ಎಂದರೆ ಎಲ್ಲರಿಗೂ ನೆನಪಾಗುವುದು ಕೇಕ್ ತಯಾರಿಕೆ. 21 ದಿನಗಳ ಮುಂಚೆಯೇ ಅದಕ್ಕೆ ವಿಶೇಷ ರೀತಿಯ ಮುತುವರ್ಜಿ ವಹಿಸಿ ವಿವಿಧ ಬಗೆಯ ಡ್ರೈ ಫ್ರೂಟ್ಸ್ ಗಳನ್ನು ಉಪಯೋಗಿಸುವುದರಿಂದ ಕೇಕ್ ಗಳು ರುಚಿಯಾಗಿ ಬಹಳಷ್ಟು ದಿನಗಳವರೆಗೆ ಕೆಡದಂತೆ ಇರುತ್ತದೆ ಮತ್ತು ಸ್ವಾದಿಷ್ಟಕರವಾಗಿರುತ್ತದೆ . ಇದನ್ನು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಕೇಕ್ ಮಿಕ್ಸಿಂಗ್ ಕಾರ್ಯಕ್ರಮವನ್ನು ಹಮ್ಮಿಕೊಂಡು ಕೇಕ್ ತಯಾರಿಸುವುದರ ಬಗ್ಗೆ ಬೇಕ್ ಸ್ಟುಡಿಯೋ ಗ್ರಾಹಕರಿಗೆ ಜಾಗೃತಿಯನ್ನು ಮೂಡಿಸುತ್ತಿದೆ.
ಈ ಸಂದರ್ಭ ಬಲೇ ತೆಲಿಪಾಲೆ ಖ್ಯಾತಿಯ ಪ್ರಶಂಸ ಕಾಪು ತಂಡದ ಸಂದೀಪ್ ಶೆಟ್ಟಿ ಮಾಣಿಬೆಟ್ಟು , ಮರ್ವಿನ್ ಶಿರ್ವ, ಸಿಎಸ್ಐ ಚರ್ಚಿನ ಧರ್ಮಗುರು ಅಕ್ಷಯ್ ಅಮ್ಮನ್ನ, ಬೈಲೂರು ವಾರ್ಡಿನ ನಗರಸಭಾ ಸದಸ್ಯ ವಿಜಯ್ ಪೂಜಾರಿ, ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯ ಉದ್ಯಾವರ ಇದರ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹ, ಕಾರ್ಯದರ್ಶಿ ಮೈಕಲ್ ಡಿಸೋಜ, ಕಲಾರಾಧನ ಸಂಸ್ಥೆಯ ಅಧ್ಯಕ್ಷ ವಾಲ್ಸ್ಟಾನ್ ಡೇಸಾ ಶಂಕರಪುರ, ಬೆಲ್ ಒ ಸಿಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕಿ ಸಪ್ನ ಸಾಲಿನ್ಸ್ , ಸೌಹಾರ್ದ ಸಮಿತಿ ಉದ್ಯಾವರ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಅರುಣ್ ಶಿರ್ವ ,ಮಲಬಾರ್ ಗೋಲ್ಡ್ ಉಡುಪಿಯ ವ್ಯವಸ್ಥಾಪಕ ರಾಘವೇಂದ್ರ ನಾಯಕ್ ಬೇಕ್ ಸ್ಟುಡಿಯೋದ ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಸ್ಟೀವನ್ ಕುಲಾಸೊ ಉದ್ಯಾವರ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಪಾಲುದಾರರಾದ ದಿನೇಶ್ ಪೂಜಾರಿ, ಹೇಮಂತ್ ಪೂಜಾರಿ, ರಾಘವೇಂದ್ರ, ಮಂಜುನಾಥ್, ಡೋನ್ ಕರ್ಕಡ, ಸಚಿನ್, ದೀಪಕ್ , ಅಜಿತ್, ಪೃಥ್ವಿರಾಜ್ ಮತ್ತಿತರರು ಉಪಸ್ಥಿತರಿದ್ದರು.