ಉಡುಪಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಅಮ್ಮನಿಗೆ 5 ಕೋಟಿಯ ಸ್ವರ್ಣ ಪಲ್ಲಕಿ
ಉಡುಪಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸ್ವರ್ಣ ಜುವೆಲ್ಲರ್ಸ್ ತಯಾರಿಸಿದ 11 ಕೆ.ಜಿ ತೂಕ, ರೂ. 5 ಕೋಟಿ ವೆಚ್ಚದ ಚಿನ್ನದ ಪಲ್ಲಕಿಯನ್ನು ಮಂಗಳವಾರ ಹಸ್ತಾಂತರಿಸಲಾಯಿತು.
ಉಡುಪಿ ಹೆಸರಾಂತ ಸ್ವರ್ಣೋದ್ಯಮ ತಯಾರಿಕಾ ಸಂಸ್ಥೆ ಕೆಳಾರ್ಕಳಬೆಟ್ಟುವಿನ ಸ್ವರ್ಣ ಜುವೆಲ್ಲರಿ ತಯಾರಿಕ ಘಟಕದಲ್ಲಿ ಚಿನ್ನದ ಪಲ್ಲಕಿಯನ್ನು ಸುಮಾರು 2 ತಿಂಗಳ ಕಾಲದಲ್ಲಿ ಕಲಾತ್ಮಕವಾಗಿ ತಯಾರಿಸಲಾಗಿದೆ. ಬಿಎಸ್‌ಐ ಹಾಲ್ ಮಾರ್ಕ್ ಹೊಂದಿರುವ ಪಲ್ಲಕಿ, ಪ್ರತಿಯೊಂದು ಹಂತದಲ್ಲಿ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ವಿಡಿಯೋ ಚಿತ್ರೀಕರಣ ಮೂಲಕ ಈ ಪಲ್ಲಕಿ 95 ಶೇ. ಶುದ್ಧತೆ ಮತ್ತು ಕಲಾತ್ಮಕತೆಯಿಂದ ತಯಾರಿಸಲಾಗಿದೆ.
ಹಸ್ತಾಂತರ ಕಾರ್ಯಕ್ರಮದಲ್ಲಿ ಸ್ವರ್ಣ ಜುವೆಲ್ಲರ್ಸ್‌ನ ನಿರ್ದೇಶಕರಾದ ರಾಮದಾಸ್ ನಾಯಕ್, ಬಪ್ಪನಾಡು ದೇವಸ್ಥಾನದ ಅಧ್ಯಕ್ಷರಾದ ಎಂ. ನಾರಾಯಣಾ ಶೆಟ್ಟಿ, ಶೇಖರ್ ಶೆಟ್ಟಿ, ಅತುಲ್ ಕುಡ್ವ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ವೆಂಕಟೇಶ್, ಸಿಇಒ ಜಯಮ್ಮ , ಜಯಂತ್ ರೈ, ಅರ್ಚಕ ಶ್ರೀಪತಿ ಉಪಾಧ್ಯಾಯ ದೀಪಕ್ ನಾಯಕ್ ಉಪಸ್ಥಿತರಿದ್ದರು. ಇಂದು ತೆರೆದ ವಾಹನದಲ್ಲಿ ಬಪ್ಪನಾಡಿಗೆ ವಿಜೃಂಭಣೆಯಿಂದ ಸ್ವರ್ಣ ಪಲ್ಲಕಿಯನ್ನು ಕೊಂಡಯ್ಯಲಾಯಿತು.
ಫೆ.28 ರಂದು ಬಪ್ಪನಾಡು ಶ್ರೀದುರ್ಗಾದೇವಿಗೆ ಈ ಸ್ವರ್ಣ ಪಲ್ಲಕಿ ಸಮರ್ಪಿಸಲಾಗುವುದು.