ಬಂಟ್ವಾಳ: ಮೈನವೀರೆಳಿಸಿದ ‘ಆಟೋಕ್ರಾಸ್- 2020’ ಬೈಕ್ ರೇಸ್
ಬಂಟ್ವಾಳ: ಬಂಟ್ವಾಳದ ಟೀಮ್ ಗ್ಲೆಡಿಯೇಟರ್ಸ್‌ನ ಪ್ರಾಯೋಜಕತ್ವದಲ್ಲಿ ಭಾನುವಾರ ಬಿ.ಸಿ.ರೋಡಿಗೆ ಸಮೀಪದ ಬಸ್ತಿಪಡ್ಪು ಮೈದಾನದಲ್ಲಿ ಇದೇ ಮೊದಲ ಬಾರಿಗೆ ನಡೆದ ಆಟೋಕ್ರಾಸ್- 2020 ಬೈಕ್ ರೇಸ್‌ನಲ್ಲಿ ಸ್ಪರ್ಧಿಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ರಾಜ್ಯದ ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಂಗಳೂರು, ಮಂಗಳೂರು ಸೇರಿದಂತೆ ಕೇರಳದಿಂದಲೂ ಸ್ಪರ್ಧಿಗಳು ಭಾಗವಹಿಸಿ ಮೈನವೀರೆಳಿಸುವಂತ ಬೈಕ್ ರೈಡ್ ಸೇರಿದ್ದ ಯುವಕರನ್ನು ರೋಮಾಂಚನಗೊಳಿಸಿತು. 2 ಸ್ಟ್ರೋಕ್, 4ಸ್ಟ್ರೋಕ್, ಇಂಡಿಯನ್ ಓಪನ್, ಓಪನ್ ಕ್ಲಬ್ ಕ್ಲಾಸ್, ಎಕ್ಸ್‌ಪರ್ಟ್ ಕ್ಲಾಸ್, ನೋವೀಸ್, ಸ್ಥಳೀಯ ವಿಭಾಗ ಮತ್ತು ಬೆಸ್ಟ್ ರೈಡರ್ ಹೀಗೆ ಎಂಟು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.
ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ಬೈಕ್ ರೇಸ್‌ಗೆ ಚಾಲನೆ ನೀಡಿ ,ಪ್ರಯತ್ನ ವಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಾಧನೆಗೆ ಪ್ರೋತ್ಸಾಹ ನೀಡುವುದು ಎಲ್ಲರ ಧರ್ಮವಾಗಬೇಕು,
ಕ್ರೀಡೆ ಯಲ್ಲಿ ಭಾಗವಹಿಸುವಿಕೆ ಮುಖ್ಯವೇ ಹೊರತು ಬಹುಮಾನ ಮುಖ್ಯವಲ್ಲ ಎಂದು ಹೇಳಿ ಶುಭ ಹಾರೈಸಿದರು. ಬಿ.ಸಿ.ರೋಡಿನ ಖ್ಯಾತನ್ಯಾಯವಾದಿ ಅಶ್ವನಿ ಕುಮಾರ್ ರೈ, ಉದ್ಯಮಿ ಪಿಯೂಸ್ ಎಲ್.ರಾಡ್ರಿಗಸ್, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್, ತುಂಬೆ ಪಂಚಾಯತ್ ಸದಸ್ಯ ಮಹಮ್ಮದ್ ವಳವೂರು, ಅರುಣ್ ಮಾಡ್ತ, ಸುಕುಮಾರ್ ಬಂಟ್ವಾಳ್, ಶಿವಪ್ರಸಾದ್ ಬಂಟ್ವಾಳ, ಸುದರ್ಶನ್, ಮೊನೀಶ್ ಆಲಿ, ಜಯರಾಜ್, ಸತೀಶ್ ಬಿ.ಸಿ.ರೋಡು,ಎಲ್ಸನ್ ಮಿನೇಜಸ್,ಟೀಮ್‌ನ ಎಲ್ಸನ್ ಲಾಡ್ ಮೆನೇಜಸ್, ನವೀನ್‌ಕುಮಾರ್ ಮೈರಾನ್‌ಪಾದೆ, ಉದಯಕುಮಾರ್ ವಗ್ಗ, ಪ್ರಸಾದ್ ಮರ್ದೋಳಿ, ವಿಜಯ ಪಾಯಿಸ್, ಸದಾನಂದ, ಸ್ನೇಕ್ ಕಿರಣ್, ಅಝೀಝ್ ವಗ್ಗ ಮೊದಲಾದವರಿದ್ದರು.
ಇದೇ ವೇಳೆ ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ, ಬೈಕ್ ರೇಸ್ ನಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ವಿಶೇಷ ಚೇತನರ ಚೆಸ್ ಪಂದ್ಯಾಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಯಶಸ್ವಿ ಕೆ.ಯವರಿಗೆ ಸನ್ಮಾನಿಸಲಾಯಿತು. ಬೈಕ್ ರೈಡ್ ವಿಕ್ಷೀಸಲು ಸಾಕಷ್ಟು ಸಂಖ್ಯೆಯಲ್ಲಿ ಕುತೂಹಲಿಗರು ಜಮಾಯಿಸಿದ್ದರು