ಬೆಂಗಳೂರು:’ಕಾಶ್ಮೀರ ಮುಕ್ತ’ ಭಿತ್ತಿಪತ್ರ ಪ್ರದರ್ಶಿಸಿದ ಯುವತಿ ಪೊಲೀಸ್ ವಶಕ್ಕೆ

ಬೆಂಗಳೂರು: ನಗರದ ಪುರಭವನದ ಎದುರು ಕನ್ನಡ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಆರ್ದ್ರಾ ಎಂಬ ಯುವತಿ, ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದಾಳೆ.

ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರ್ದ್ರಾ ವಿರುದ್ಧ ಹಿಂದೂ ಪರ ಸಂಘಟನೆಗಳು ದೂರು ದಾಖಲಿಸಿವೆ. ಮುನ್ನೇಚ್ಚರಿಕೆ ಕ್ರಮವಾಗಿ ಆರ್ದ್ರಾಳನ್ನು ಪೊಲೀಸರು ಬಿಗಿ ಬಂದೋಬಸ್ತ್ ನಲ್ಲಿ ಇರಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ನಾರಾಯಣ ಎಂಬವರ ಪುತ್ರಿಯಾಗಿರುವ ಆರ್ದ್ರಾ ಆರ್ಕಿಟೆಕ್ ಆಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿವೆ

ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಅವರು ಎಸ್ ಜೆ ಪೊಲೀಸ್ ಠಾಣೆಗೆ ತೆರಳಿ, ಯುವತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ಈ ಕುರಿತು ಡಿಸಿಪಿ ಚೇತನ್ ಸಿಂಗ್ ರಾಥೋಡ್ ಸುದ್ದಿಗಾರರೊಂದಿಗೆ ಮಾತನಾಡಿ, ಯುವತಿ ಘೋಷಣೆ ಕೂಗಿರುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ತನಿಖೆ ನಂತರ ಆ ಬಗ್ಗೆ ಮಾಹಿತಿ ನೀಡುತ್ತೇನೆ ಎಂದರು.

12.15ರ ಸುಮಾರಿಗೆ ಯುವತಿ ಭಿತ್ತಿ ಪತ್ರ ತಂದಿದ್ದು, ಭಿತ್ತಿ ಪತ್ರದಲ್ಲಿ ಮುಕ್ತಿ ಕಾಶ್ಮೀರ, ಮುಕ್ತಿ ಮುಸ್ಲಿಂ, ಮುಕ್ತಿ ದಲಿತ್ ಎಂದು ಬರೆಯಲಾಗಿತ್ತು ಎಂದರು.

ಯುವತಿ ಮೇಲೆ ಯಾವುದೇ ರೀತಿಯ ಹಲ್ಲೆ ಆಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಆಕೆಯನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಪಾಕಿಸ್ತಾನ ಜಿಂದಾಬಾದ್ ಎಂದು ಯುವತಿ ಕೂಗಿದ್ದಾಳೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಘಟನೆಯ ಸಂಪೂರ್ಣ ದೃಶ್ಯಾವಳಿ ನಮ್ಮ ಬಳಿ ಇದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದರು.

ಯುವತಿಯ ಹೆಸರು, ವಿಳಾಸದ ಬಗ್ಗೆ ಮಾಹಿತಿ ಇಲ್ಲ. ತನಿಖೆಯ ನಂತರ ಸತ್ಯಾಂಶ ಹೊರಬರಲಿದೆ ಎಂದರು.
ಸದ್ಯ ಘೋಷಣೆ ಕೂಗಿದ್ದ ಯುವತಿ ಮಲ್ಲೇಶ್ವರಂ ನಿವಾಸಿ ಅರುದ್ರಾ ಎನ್ನಲಾಗಿದ್ದು, ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

.

Leave a Reply

Your email address will not be published. Required fields are marked *

error: Content is protected !!