ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾಗಿ ಮಾಲಾಡಿ ಅಜಿತ್ ರೈ ಆಯ್ಕೆ
ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘಕ್ಕೆ ಭಾನುವಾರ ನಡೆದ ಚುಣಾವಣೆಯಲ್ಲಿ ಅಧ್ಯಕ್ಷರಾಗಿ ಮಾಲಾಡಿ ಅಜಿತ್ ಕುಮಾರ್ ರೈ ಅವರು ಪುನರಾಯ್ಕೆಯಾಗಿದ್ದಾರೆ.ಜಿದ್ದಾ ಜಿದ್ದಿನ ಚುಣಾವಣೆಯಲ್ಲಿ ಅಜಿತ್ ಕುಮಾರ್ ಮಾಲಾಡಿ ಅವರು 4,791ಮತಗಳನ್ನು ಪಡೆದು ತನ್ನ ಪ್ರತಿಸ್ಪರ್ಧಿ ಅಭ್ಯರ್ಥಿ ಸುರೇಶ್ಚಂದ್ರ ಶೆಟ್ಟಿ ಅವರಿಗಿಂತ 2598 ಮತಗಳ ಅಂತರದ ಗಲುವು ಸಾಧಿಸಿದರು. ಸುರೇಶ್ಚಂದ್ರ ಶೆಟ್ಟಿ ಅವರು 2193 ಮತಗಳನಷ್ಟೇ ಪಡೆಯಲು ಶಕ್ತರಾದರು. ಬಂಟರ ಯಾನೆ ನಾಡವರ ಮಾತೃ ಸಂಘಕ್ಕೆ ದೇಶದ ಹಾಗೂ ವಿದೇಶದ ಬಂಟರ ಸಂಘದ ಶಾಖೆಗಳ ನೆಲೆಯಲ್ಲಿ 22,800 ಮತದಾರರಿದ್ದಾರೆ. ,ಈ ಬಾರಿ 7337 ಮತ ಚಲಾವಣೆಯಾಗಿತ್ತು. . ವಕೀಲ ಅರುಣ್ ಶೆಟ್ಟಿ ಅವರು ಚುಣಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು