ಬಜಪೆ ಪೋಲೀಸರ ಕ್ಷಿಪ್ರ ಕಾರ್ಯಚರಣೆ ಹಗಲು ದರೋಡೆ ಆರೋಪಿಗಳ ಬಂಧನ

ಬಜಪೆ – ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿಯಲ್ಲಿ ನಡೆದ ಹಗಲು ದರೋಡೆ ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂರು ದಿನದೊಳಗೆ ಬಜಪೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .

ಲೇವಾದೇವಿ ವ್ಯವಹಾರ ಮಾಡುತ್ತಿದ್ದ ಸೆಂಥಿಲ್ ಕುಮಾರ್ ರನ್ನು ಅಡ್ಡ ಗಟ್ಟಿ ಸುಮಾರು ರೂ 2,05,000/- ನಗದು ಲೂಟಿ ಮಾಡಿದ ಆರೋಪಿಗಳನ್ನ ಬಜ್ಪೆ ಠಾಣಾ ಪೊಲೀಸರು  ಕ್ಷಿಪ್ರ ಕಾರ್ಯಚರಣೆಯ ಮೂಲಕ ಬಂಧಿಸಿದ್ದಾರೆ

ಆರೋಪಿಗಳಾದ ಅಬ್ದುಲ್ ಅಜೀಜ್(19), ಮಹಮ್ಮದ್ ಮುಸ್ತಾಫ(23)ಆಶ್ಲೇಷ್ ಎ ಕೋಟ್ಯಾನ್(20) ಬಂಧಿಸಿ ಅವರ ಬಳಿ ಇದ್ದ  ರೂ 21,800/-  ದರೋಡೆ ಮಾಡಲು ಉಪಯೋಗಿಸಿದ  ಬೈಕ್ ,  ಮೂರು ಮೊಬೈಲ್. ಕ್ರತ್ಯಕ್ಕೆ ಬಳಸಿದ   ತಲವಾರು ಹಾಗು ಚೂರಿಯನ್ನ ವಶಪಡಿಸಿಕೊಂಡಿದ್ದಾರೆ

ಸೆಂಥಿಲ್ ಕುಮಾರ್  ಲೇವಾದೇವಿ ವ್ಯವಹಾರ  ಮಾಡುತ್ತಾ ಪ್ರತೀ ಆದಿತ್ಯವಾರದಂದು ಸಾಲ ವಸೂಲಿಗಾಗಿ  ಬಗ್ಗೆ ಬರುತ್ತಿದ್ದು ಜುಲಾಯಿ 14 ರಂದು ಬೆಳಿಗ್ಗೆ 10:00 ಗಂಟೆಗೆ ತನ್ನ ಮನೆಯಾದ ಮರೊಳಿಯಿಂದ ತನ್ನ ಬೈಕಿನಲ್ಲಿ ಹೊರಟಾಗ ಇವರನ್ನ ಹಿಂಬಾಲಿಸಿಕೊಂಡು  ಎರಡು ಬೈಕ್ ನಲ್ಲಿ ಬಂದ ನಾಲ್ಕು ಯುವಕರು  ಸೆಂಥಿಲ್ ಕುಮಾರ್ ರವರ ಬೈಕಿಗೆ ಅಡ್ಡ ಗಟ್ಟಿ   ನಗದು ರೂಪಾಯಿ 2,05.000/- ವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ  ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ   ತನಿಖೆ ಕೈಗೊಳ್ಳಲಾಗಿತ್ತು. ಬುಧವಾರದಂದು  ಖಚಿತ ಮಾಹಿತಿ ಮೇರೆಗೆ ಗುರುಪುರ ಕುಕ್ಕುದಕಟ್ಟೆ ಎಂಬಲ್ಲಿ ಉಳಾಯಿಬೆಟ್ಟು ಬಳಿ ಆರೋಪಿಗಳನ್ನು ಬಂಧಿಸಿದ್ದು ಒಟ್ಟು ಸುಮಾರು ರೂ 60,000/- ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ . ಅಪರಾಧ ನಡೆದ ಕೇವಲ ಮೂರು ದಿನದಲ್ಲಿ ಕಾರ್ಯಾಚರಣೆ ನಡೆಸಿ  ಆರೋಪಿಯನ್ನು ಪತ್ತೆ ಹಚ್ಚಲಾಗಿದ್ದು ಉಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ

Leave a Reply

Your email address will not be published. Required fields are marked *

error: Content is protected !!