ಕೋಟ ಡಬಲ್ ಮರ್ಡರ್ ಪ್ರಕರಣ, ರಾಘವೇಂದ್ರ ಕಾಂಚನ್ ಬಾರಿಕೆರೆಗೆ ಜಾಮೀನು ಮಂಜೂರು
ಕೋಟ: ಕೋಟದಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆಗೆ ಹೈಕೋರ್ಟ್ನಲ್ಲಿ ಜಾಮೀನು ಮಂಜೂರಾಗಿದೆ.
ಕಳೆದ ಜನವರಿಯಲ್ಲಿ ಟಾಯ್ಲೆಟ್ ಪಿಟ್ ಗಲಾಟೆಯಲ್ಲಿ ಕೋಟದ ನಿವಾಸಿಗಳಾದ ಭರತ್ ಹಾಗೂ ಯತೀಶ್ರನ್ನು ಕೋಟಾದ ರಾಜಲಕ್ಷ್ಮಿ ಸಭಾಂಗಣದ ಎದುರು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಪ್ರಕರಣದ ಜಾಡು ಹಿಡಿದ ಅವತ್ತಿನ ಎಸ್ಪಿ ಲಕ್ಷ್ಮಣ ನಿಂಬರ್ಗಿ ಹಾಗೂ ತಂಡ ರೌಡಿಶೀಟರ್ ಹರೀಶ್ ರೆಡ್ಡಿ, ರಾಜಶೇಖರ್ ರೆಡ್ಡಿ ಹಾಗೂ ಸಹಚರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣದಲ್ಲಿ ಕೋಟಾದ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಹಸ್ತಕ್ಷೇಪವಿದೆ ಎಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.
ಸದ್ಯ ಹೈಕೋರ್ಟ್ನಲ್ಲಿ ಪ್ರಕರಣದ ಇತ್ಯರ್ಥವಾಗುತ್ತಿದ್ದು ಇತರೆ ಆರೋಪಿಗಳು ಹಾಕಿದ ಜಾಮೀನು ಅರ್ಜಿಗಳು ತಿರಸ್ಕೃತಗೊಂಡಿದ್ದು,ರಾಘವೇಂದ್ರ ಕಾಂಚನ್ಗೆ ಇಂದು ಜಾಮೀನು ಮಂಜೂರಾಗಿದೆ. ಕೋಟಾ ಜಿಲ್ಲಾ ಪಂಚಾಯತ್ನಿಂದ ಆಯ್ಕೆಯಾಗಿರುವ ರಾಘವೇಂದ್ರ ಕಾಂಚನ್ ಆರು ತಿಂಗಳ ಸಜೆಯ ನಂತರ ನಾಳೆ ಬಿಡುಗಡೆಯಾಗುವ ಸಾಧ್ಯತೆ ಇದೆ.