“ ಬಹರೇನ್ ನಲ್ಲಿ ವಿಜೃಂಭಿಸಿದ ತುಳುವ ಸಂಭ್ರಮ 2019 ”


ಬಹರೇನ್- ಗುರು ಸೇವಾ ಸಮಿತಿ ಬಹರೇನ್ ಬಿಲ್ಲವಾಸ್ ತನ್ನ ತಾಯಿನಾಡಿನ ಸೊಬಗನ್ನು ಬಿಂಬಿಸುವ ಸಾಂಸ್ಕೃತಿಕ ಹಬ್ಬ “ತುಳುವ ಸಂಭ್ರಮ 2019” ಅತ್ಯಂತ ವಿಜೃಂಭಣೆಯಿಂದ ಇಂಡಿಯನ್ ಕ್ಲಬ್ ನ ಸಭಾಂಗಣದಲ್ಲಿ, ಬಹರೇನ್ ಬಿಲ್ಲವಾಸ್ ನ ಅದ್ಯಕ್ಷರಾದ ಸುರೇಂದ್ರ ಉದ್ಯಾವರ್ ಅವರ ನೇತೃತ್ವ ದಲ್ಲಿ ನೆರೆದ ಸಾವಿರಾರು ಕಲಾಭಿಮಾನಿ ಪ್ರೇಕ್ಷಕರ ಸಮ್ಮುಖದಲ್ಲಿ ಆಯೋಜಿಸಲ್ಪಟ್ಟಿತ್ತು.
ತಾಯಿನಾಡಿನಿಂದ ಆಗಮಿಸಿದ ಉಗ್ಗಪ್ಪ ಪೂಜಾರಿ,ಶೈಲೇಂದ್ರ ಸುವರ್ಣ, ಜಯಾನಂದ ಮುಗ್ಗ ಹಾಗು ಅರುಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ತಾಯಿನಾಡಿನ ಸುಪ್ರಸಿದ್ದ ತುಳು ರಂಗಭೂಮಿ ಹಾಗು ತುಳು ಚಲನಚಿತ್ರಗಳಲ್ಲಿ ಮಿಂಚಿ ಮನೆಮಾತಾಗಿರುವ ಹಾಸ್ಯ ಕಲಾವಿದರುಗಳಾದ ನವೀನ್ ಡಿ, ಪಡಿಲ್, ಭೋಜರಾಜ ವಾಮಂಜೂರ್, ಅರವಿಂದ ಬೋಳಾರ್, ಶೋಭರಾಜ್ ಪಾವೂರ್ ಹಾಗು ಸಂಗೀತ ನಿರ್ದೆಶಕರಾದ ಗುರು ಬಾಯರ್ ಈ ಹಾಸ್ಯ ಕಲಾವಿದರಿಂದ “ಆಲಿ ಬಾಬ v/s ಗೋಲಿ ಬಾಬ” ಎಂಬ ವಿನೂತನ ಶೈಲಿಯ ನೆಗೆಕಡಲಲ್ಲಿ ತೇಲಾಡಿಸುವ ಹಾಸ್ಯ ಕಾರ್ಯಕ್ರಮ. ಹಾಗು ಸ್ಥಳೀಯ ನೃತ್ಯ ನಿರ್ದೇಶಕರುಗಳಾದ ಶ್ರೀಮತಿ ಚಂದ್ರಕಲಾ ಮೋಹನ್, ಕುಮಾರಿ ನಮಿತ ಸಾಲಿಯಾನ್, ಶ್ರೀಮತಿ ನಿಶಿತಾ ಹರೀಶ್ ಹಾಗು ಸಂಪತ್ ಜತ್ತನ್ನ ಇವರ ದಕ್ಷ ಹಾಗು ನುರಿತ ನಿರ್ದೇಶನದಲ್ಲಿ ವಿವಿಧ ಜಾನಪದ ನೃತ್ಯ ರೂಪಕಗಳು ಹಾಗು ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ತುಳುವ ಸಂಭ್ರಮ ವೆಂಬ ಕಾರ್ಯಕ್ರಮವು ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿತ್ತು. ವಿದುಷಿ ಆಸ್ತಿಕ ಸುನಿಲ್ ಶೆಟ್ಟಿ ರಚಿಸಿ ನಿರ್ದೇಶಿಸಿದ ನೃತ್ಯ ರೂಪಕ “ತಾಯಿ ದೇಯಿ” ಅತ್ಯಂತ ಯಶಸ್ವೀಯಾಗಿ ಪ್ರದರ್ಶನ ಗೊಂಡು ಸಾಂಸ್ಕೃತಿಕ ಲೋಕದಲ್ಲಿ ಹೊಸ ಅಧ್ಯಾಯವನ್ನು ಬರೆಯಿತು.
ಬಹರೇನ್ ನ ಇತಿಹಾಸದಲ್ಲಿ ಪ್ರೇಕ್ಷಕರ ಮನಸೂರೆಗೊಂಡು ಅಚ್ಚುಕಟ್ಟಾಗಿ ನಡೆದ ಈ ತುಳುವ ಸಂಭ್ರಮದ ಮುಖ್ಯ ನಿರೂಪಕರಾಗಿ ಕಮಲಾಕ್ಷ ಅಮೀನ್ ಹಾಗು ನಿರೂಪಕಿಯಾಗಿ ಚಂದ್ರಕಲಾ ಮೋಹನ್ ಹಾಗು ಸಭಾ ಕಾರ್ಯಕ್ರಮವನ್ನು ಶ್ರೀಮತಿ ಲೋಲಾಕ್ಷಿ ರಾಜಾರಾಮ್ ಆತ್ಯಂತ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿದ್ದರು.

Leave a Reply

Your email address will not be published. Required fields are marked *

error: Content is protected !!