ಹಿಂದುಳಿದ ಮತ್ತು ಮಧ್ಯಮ ವರ್ಗದ ಬಜೆಟ್- ಕೆ. ಉದಯ ಕುಮಾರ್ ಶೆಟ್ಟಿ
ಈ ಬಾರಿಯ ಬಜೆಟ್ ಗ್ರಾಮೀಣ ಭಾಗದ ಜನಕ್ಕೆ ಭರಪೂರ ಲಾಭವನ್ನು ತಂದುಕೊಡಲಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1.95 ಕೋಟಿ ಮನೆಗಳ ನಿರ್ಮಾಣದ ಗುರಿ ಹೊಂದಿದ್ದು ಅಲ್ಲದೇ ಹಿಂದೆ ಇದ್ದ ೧೯೫ ದಿನಗಳಲ್ಲಿ ಮನೆ ನಿರ್ಮಾಣ ಮಾಡುವ ಗುರಿಯನ್ನು 114 ದಿನಕ್ಕೆ ಇಳಿಸಿರುವುದು ಮನೆ ನಿರ್ಮಾಣವು ಕ್ಷಿಪ್ತಗತಿಯಲ್ಲಿ ಮುಗಿಸಲು ಅನುಕೂಲವಾಗಲಿದೆ.
ಅದರೊಂದಿಗೆ ಆ ಮನೆಗಳಿಗೆ ನೀರು, ವಿದ್ಯುತ್ ಮತ್ತು ಎಲ್.ಪಿ.ಜಿ ಗ್ಯಾಸ್ ಕನೆಕ್ಷನ್ ಕೂಡಾ ಒದಗಿಸಲಾಗುತ್ತದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 1.5 ಕೋಟಿ ಮೀನುಗಾರರಿಗೆ ಪ್ರಯೋಜನವಾಗಲಿದೆ. ಸ್ವಸಹಾಯ ಸಂಘದ ಪ್ರತಿ ಸದಸ್ಯರಿಗೂ 1 ಲಕ್ಷ ರೂಪಾಯಿ ಸಾಲ ನೀಡುವುದು ಸ್ವಸಹಾಯ ಸಂಘದ ಸದಸ್ಯರಿಗೆ ಆರ್ಥಿಕ ಶಕ್ತಿ ನೀಡಿದಂತಾಗಿದೆ.
ಕೃತಕ ಕಿಡ್ನಿ, ಡಯಾಲಿಸಿಸ್, ಶಸ್ತ್ರಚಿಕಿತ್ಸೆಯ ಉಪಕರಣಗಳು ಈ ಬಜೆಟ್ನಲ್ಲಿ ಅಗ್ಗವಾಗಲಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ತುಂಬಾ ಲಾಭದಾಯಕವಾಗಿದೆ. ಪ್ರಧಾನಮಂತ್ರಿ ಮಾನ್ಧನ್ ಕರ್ಮಯೋಗಿ ಯೋಜನೆಯು ೩ ಕೋಟಿ ಸಣ್ಣ ವ್ಯಾಪಾರಿಯವರಿಗೆ ನೆರವಾಗಲಿದೆ.
ಈ ಬಾರಿಯ ಬಜೆಟ್ ಹಿಂದುಳಿದ ಮತ್ತು ಮಧ್ಯಮ ವರ್ಗದ ಜನರಿಗೆ ಪೂರಕವಾದ ಬಜೆಟ್ ಎಂದು ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ, ಮಂಗಳೂರು ವಿಭಾಗದ ಉಸ್ತುವಾರಿ ಶ್ರೀ ಕೆ. ಉದಯ ಕುಮಾರ್ ಶೆಟ್ಟಿ ಬಜೆಟ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.