ಆರೂರು:ಸರಕಾರಿ ಭೂಮಿಯಲ್ಲಿ ಅಕ್ರಮ ಕಲ್ಲುಕೋರೆ ಪಂಚಾಯತ್ ಗೆ ತಿಳಿದಿಲ್ಲವಂತೆ!
ಉಡುಪಿ: ಆರೂರು ಗ್ರಾಮದ ಅಡ್ಪು ಎಂಬಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ಅಕ್ರಮ ಕಲ್ಲು ಕೋರೆ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲವೆಂದು ಇಲ್ಲಿನ ನಾಗರೀಕರು ದೂರಿದ್ದಾರೆ.
ಆರೂರು ಪಂಚಾಯತ್ ಕಛೇರಿಯಿಂದ ಕೇವಲ ಎರಡು ಕಿ.ಮೀ.ದೂರದಲ್ಲಿ ಈ ಅಕ್ರಮ ಕಲ್ಲುಕೋರೆಯಲ್ಲಿ ಗಣಿಗಾರಿಕೆ ಅವ್ಯಹಾತವಾಗಿ ಪಂಚಾಯತ್‌ನ ಯಾವುದೇ ಪರಾವನಿಗೆ ಪಡೆಯದೆ ನಡೆಸಲಾಗುತ್ತುದೆಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.
ಈ ಭಾಗದಲ್ಲಿ ಸುಮಾರು 15 ಮನೆಗಳಿದ್ದು ನಿರಂತರ ಗಣಿಗಾರಿಕೆಯಿಂದ ಶಬ್ದ ಮಾಲಿನ್ಯ, ಭೂಮಿಯ ಕಂಪನದಿಂದ ಮನೆಯಲ್ಲಿ ವಾಸಿಸಿದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯ ನಾಗರಿಕರು ಸರಕಾರಿ ಭೂಮಿಯಲ್ಲಿ ಸಣ್ಣ ಗುಡಿಸಲು ಕಟ್ಟಿದರೆ ಕೆಡವಲು ಓಡೋಡಿ ಬರುವ ಪಂಚಾಯತ್ ಅಧಿಕಾರಿಗಳು ಈ ಅಕ್ರಮ ಕಲ್ಲು ಕೋರೆಗೆ ಬೆಂಗಾವಲಾಗಿ ನಿಂತು ಇದಕ್ಕೆ ಪ್ರೋತ್ಸಾಹಿಸುತ್ತಿದ್ದಾರ ಎಂದು ಇಲ್ಲಿನ ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ.
ಸರಕಾರಿ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಸರಕಾರ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ರಾಜಧನ ನಷ್ಟವಾಗಿದೆ , ಈ ಬಗ್ಗೆ ಗಣಿ ಇಲಾಖೆಗೆ ಮಾಹಿತಿ ಇದ್ದರೂ ಸುಮ್ಮನಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ ಎನ್ನುತ್ತಾರೆ.
ಹಲವಾರು ವರ್ಷಗಳಿಂದ ಈ ಅಕ್ರಮ ಕಲ್ಲುಕೋರೆ ಬಗ್ಗೆ ಆರೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ಅವರನ್ನು “ಉಡುಪಿ ಟ್ಯೆಮ್ಸ್” ಮಾತನಾಡಿದ ಅವರು ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ, ಮಾತ್ರವಲ್ಲದೆ ಪಂಚಾಯತ್‌ನಿಂದ ಈ ಭಾಗದಲ್ಲಿ ಕಲ್ಲುಕೋರೆ ನಡೆಸಲು ಯಾರು ಕೂಡ ಪರಾವನಿಗೆ ಪಡೆದಿಲ್ಲವೆಂದರು.
ಹಾಗಾದರೆ ಗಣಿ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಮಾಹಿತಿ ಇದ್ದರೂ ಯಾವ ಕಾರಣಕ್ಕೆ ಸುಮ್ಮನಿದ್ದಾರೆ ತಿಳಿದು ಬರಬೇಕಿದೆ.