ಆಗಸ್ಟ್ 17 : ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ – ಉದ್ಯಾವರ ಶಾಖೆಯ ಉದ್ಘಾಟನೆ
ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ನೂತನ ಶಾಖೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಬ್ಯಾಂಕಿಂಗ್ ವಿಭಾಗವನ್ನು ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ, ಉದ್ಯಮಿ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಗಣಕೀಕರಣದ ಉದ್ಘಾಟನೆ ಮಾಡಲಿದ್ದಾರೆ. ನೂತನ ಶಾಖೆಯ ಆಶೀರ್ವಚನವನ್ನು ಮದರ್ ಸಾರೋಸ್ ಚರ್ಚ್ ಉಡುಪಿಯ ಧರ್ಮ ಗುರುಗಳಾಗಿರುವ ಅತಿ ವಂದನೀಯ ವಲೇರಿಯನ್ ಮೆಂಡೋನ್ಸಾ ನಡೆಸಲಿದ್ದಾರೆ.
ಸಭಾ ಕಾರ್ಯಕ್ರಮವು ಉದ್ಯಾವರ ಮೀನು ಮಾರುಕಟ್ಟೆ ಬಳಿಯ ಸೌಂದರ್ಯ ಕಾಂಪ್ಲೆಕ್ಸ್ನಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಫೆಲಿಕ್ಸ್ ಪಿಂಟೊ ವಹಿಸಲಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕರಾದ ಪ್ರವೀಣ್ ಬಿ. ನಾಯಕ್, ಚಂದ್ರ ಪ್ರತಿಮಾ, ಗ್ರಾಮ ಪಂಚಾಯಿತ್ ಅಧ್ಯಕ್ಷೆ ಸುಗಂಧಿ ಶೇಖರ್, ಪಂಚಾಯತ್ ಸದಸ್ಯ ಲಾರೆನ್ಸ್ ಡೇಸಾ, ಕಟ್ಟಡದ ಮಾಲಕ ಸುರೇಂದ್ರ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಉಡುಪಿ ಕಥೋಲಿಕ್ ಕೋ- ಆಪರೇಟಿವ್ ಸೊಸೈಟಿಯ ಪ್ರಕಟಣೆ ತಿಳಿಸಿದೆ.
ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಉಡುಪಿ ಇದರ ಪ್ರಧಾನ ಕಚೇರಿ ಕ್ರಿಸ್ತಜ್ಯೋತಿ ಕಾಂಪ್ಲೆಕ್ಸ್ 1 ನೇ ಮಹಡಿ ಕೆಎಂ ಮಾರ್ಗ ಉಡುಪಿಯಲ್ಲಿ ಮತ್ತು ದ್ವಿತೀಯ ಶಾಖೆ ಸಿಟಿಜನ್ ಸೆಂಟರ್ ನ ಮೊದಲ ಮಹಡಿ ಮಲ್ಪೆಯಲ್ಲಿ ಕಾರ್ಯಾಚರಿಸುತ್ತಿದೆ.
ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಿರಖು ಠೇವಣಿ ಇಡುವವರಿಗೆ ವಿಶೇಷ ವಿನಾಯಿತಿ ಇದೆ. 15 ದಿನ ಮೇಲ್ಪಟ್ಟು 45 ದಿನಗಳವರೆಗೆ 5.50%, 46 ದಿನ ಮೇಲ್ಪಟ್ಟು 90 ದಿನಗಳವರೆಗೆ 7%, 91 ದಿನಗಳಿಂದ 364 ದಿನಗಳವರೆಗೆ 7.5% , 1 ವರ್ಷದ ಅವಧಿ 9%, 1 ವರ್ಷಕ್ಕೆ ಮೇಲ್ಪಟ್ಟು 3 ವರ್ಷದವರೆಗೆ 8.50%, ಸಮೃದ್ಧಿ ನಗದು ಪತ್ರ (1 ವರ್ಷದ ಅವಧಿ) 9.30% ಮತ್ತು ಹಿರಿಯ ನಾಗರಿಕ ಸದಸ್ಯರಿಗೆ 0.50% ಹೆಚ್ಚುವರಿ ಬಡ್ಡಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷ ಫೆಲಿಕ್ಸ್ ಪಿಂಟೊ, ಉಪಾಧ್ಯಕ್ಷ ಜೇಮ್ಸ್ ಡಿಸೋಜಾ, ಆಡಳಿತ ಮಂಡಳಿಯ ಸದಸ್ಯರಾಗಿ ಇಗ್ನೇಷಿಯಸ್ ಮೋನಿಸ್ ಮೂಡುಬೆಳ್ಳೆ , ಫ್ರಾಂಕ್ಲಿನ್ ಮಿನೇಜಸ್ ಕಲ್ಮಾಡಿ, ಪರ್ಸಿ ಜೆ ಡಿಸೋಜಾ ಕಲ್ಯಾಣಪುರ, ಆರ್ಚಿಬಾಲ್ಡ್ ಎಸ್ ಡಿಸೋಜಾ ತೊಟ್ಟ೦, ಅಲೋಶಿಯಸ್ ಡಿ ಅಲ್ಮೇಡಾ ಮಣಿಪಾಲ, ಲೂವಿಸ್ ಲೋಬೋ ಆದಿ ಉಡುಪಿ, ಕೆವಿನ್ ಪೆರೇರಾ ಉದ್ಯಾವರ , ಹಿಲ್ಡಾ ಸಲ್ದಾನ ಉದ್ಯಾವರ, ಜೆಸಿಂತಾ ಡಿಸೋಜ ಮೂಡುಬೆಳ್ಳೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫ್ರಾಂಕ್ ಪೀಟರ್ ಪಿ ಕಾರ್ಡೊಜ ಕಾರ್ಯನಿರ್ವಹಿಸುತ್ತಿದ್ದಾರೆ.