ಸರಕಾರದ ವಿಶೇಷ ಸೌಲಭ್ಯದಡಿ ಛಾಯಾಗ್ರಾಹಕರ ಸೇರ್ಪಡೆಗೆ ಪ್ರಯತ್ನ: ಕೋಟಾ ಶ್ರೀನಿವಾಸ

ಉಡುಪಿ: ಸೌತ್ ಕೆನರಾ  ಫೋಟೋಗ್ರಾಫರ್ಸ್  ಅಸೋಸಿಯೇಷನ್ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಪದಾಧಿಕಾರಿಗಳು ಇಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಭೇಟಿಯಾಗಿ ಸರಕಾರ ನೀಡುವ ವಿಶೇಷ ಸೌಲಭ್ಯದಡಿ ಛಾಯಾಗ್ರಾಹಕರನ್ನು ಸೇರ್ಪಡಿಸುವಂತೆ ವಿನಂತಿಸಲಾಯಿತು.

ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಆದಷ್ಟು ಶೀಘ್ರ ಸೇರ್ಪಡೆಗೆ ಪ್ರಯತ್ನಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ  ಎಸ್ ಕೆಪಿಎ  ಅಧ್ಯಕ್ಷ ಶ್ರೀಧರ್ ಶೆಟ್ಟಿಗಾರ್, ಸಂಚಾಲಕ ಅಶೋಕ್ ಕುಮಾರ್ ಶೆಟ್ಟಿ,ಉಪಾಧ್ಯಕ್ಷ ನಾಗರಾಜ ರಾಯಪ್ಪನ ಮಠ,    ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರ್, ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಲಗಿರಿ, ರಾಜಾ ಮಠದಬೆಟ್ಟು ,ಅಮೃತ್ ಬೀಜಾಡಿ , ಪುಂಡಲೀಕ್ ಶಾನುಭೋಗ್, ಸಂತೋಷ್ ಕಾಪು ಹಾಗು  ಸುಕೇಶ್  ಅಮೀನ್ ಉಪಸ್ಥಿತರಿದ್ದರು.

1 thought on “ಸರಕಾರದ ವಿಶೇಷ ಸೌಲಭ್ಯದಡಿ ಛಾಯಾಗ್ರಾಹಕರ ಸೇರ್ಪಡೆಗೆ ಪ್ರಯತ್ನ: ಕೋಟಾ ಶ್ರೀನಿವಾಸ

  1. I am Lawrence Pais.I am retired from union Bank and of 71 years of zge.I did my graduation from poorna prajna college in 1969.I came to Mumbai in 1969.I was a resident of kinnimulky udupi .I am proud oo Udupi and udupi times. Please mail me a copy of udupi times every day.Thank you

Leave a Reply

Your email address will not be published. Required fields are marked *

error: Content is protected !!