ಸರಕಾರಿ ಅಧಿಕಾರಿಗೆ ಹಲ್ಲೆ : ಬಿಜೆಪಿಯಿಂದ ಯೋಗೀಶ್‌ ಸಾಲಿಯ್ಯಾನ್ ಅಮಾನತು

ಉಡುಪಿ: ಕರ್ತವ್ಯನಿರತ ಆರೋಗ್ಯ ನಿರೀಕ್ಷಕ ಪ್ರಸನ್ನ ಕುಮಾರ್ ಮೇಲೆ ಹಲ್ಲೆ ನಡೆಸಿದ ನಗರಸಭಾ ಸದಸ್ಯ ಯೋಗೀಶ ಸಾಲಿಯನ್ ಪೊಲೀಸರ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾನೆ. ಘಟನೆ ನಡೆದು 48 ಗಂಟೆಯಾದರೂ ಬಂಧಿಸದಿರುವುದಕ್ಕೆ ನಗರ ಸಭೆಯ ಸಿಬ್ಬಂದಿಗಳು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ  11. 15ಕ್ಕೆ ನಡೆದ ಘಟನೆ ನಂತರ ಈತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪೊಲೀಸರಿಗೆ ಆತನ ಪತ್ತೆಗೆ ಹಿನ್ನಡೆಯಾಗಿದೆ ಎಂದು ತನಿಖಾಧಿಕಾರಿಯಾದ ನಗರ ಠಾಣಾಧಿಕಾರಿ  ಅನಂತ ಪದ್ಮನಾಭ ತಿಳಿಸಿದ್ದಾರೆ.ಯೋಗೀಶ
ಮಂಗಳೂರಿನಲ್ಲಿರುವ ತನ್ನ ಆಪ್ತರೊಂದಿಗೆ ಇರುವ ಮಾಹಿತಿ ಪಡೆದ ಉಡುಪಿ ಪೊಲೀಸರು ಬಂಧನಕ್ಕಾಗಿ ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.
ಈ ನಡುವೆ ಘಟನೆಗೆ ಸಂಬಂಧಿಸಿ ಉಡುಪಿ ನಗರದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಶಿಸ್ತಿನ ಪಕ್ಷವಾದ ಬಿಜೆಪಿಗೆ ಇದೊಂದು ತೀವ್ರ ಹಿನ್ನಡೆಯಾಗಿದೆ. ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅವರದೇ ಪಕ್ಷದ  ಸದಸ್ಯೆಯ ಆಹ್ವಾನದ ಮೇರೆಗೆ ಆಗಮಿಸಿದ ಸಾರ್ವಜನಿಕರೊಬ್ಬರಿಗೆ ಕಾಂಗ್ರೆಸ್‌  ನಗರಸಭಾ ಸದಸ್ಯರು  ಸಭಾಂಗಣದಲ್ಲಿಯೇ ಹಲ್ಲೆ ನಡೆಸಿ ಹೊರಗೆ ಹಾಕಿದ್ದರು ಇದು ರಾಜ್ಯಾದ್ಯಂತ ಸುದ್ದಿಯಾಗಿತ್ತು ಮಾತ್ರವಲ್ಲದೆ ನಂತರ ನಡೆದ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ‌ ಹೀನಾಯ ಸೋಲಿಗೆ ಮತ್ರವಲ್ಲದೆ  ಅಧಿಕಾರವೂ ಅವರ  ಕೈಯಿಂದ ತಪ್ಪುವಂತಾಯಿತು.
ಈ ಘಟನೆ ಹಲವಾರು ವರ್ಷಗಳಿಂದ ಆಡಳಿತ ನಡೆಸಿದ ಬಿಜೆಪಿಗೆ ಮತ್ತೆ ಗದ್ದುಗೆಯೇರಲು ಸಾಧ್ಯವಾಯಿತು ಎಂದರೆ ತಪ್ಪಾಗಲಾರದು, ಆದರೆ ಮೊನ್ನೆಯ ಘಟನೆ ಮಾತ್ರ ಕರ್ತವ್ಯನಿರತ ಆರೋಗ್ಯ ನಿರೀಕ್ಷಕನ ಮೇಲೆ ಹಲ್ಲೆ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಗಣಿಸುವುದು ಬಹುತೇಕ ಖಚಿತ. ಇನ್ನೇನು ಆಡಳಿತದ ಚುಕ್ಕಾಣಿ ಹಿಡಿಯಬೇಕು ಎನ್ನುವಷ್ಟರಲ್ಲಿ ವಿಪಕ್ಷಕ್ಕೆ ಆಹಾರವಾಗಿದೆ.
ಬಿಜೆಪಿಯು ಸದಸ್ಯ ಯೋಗೀಶನ ಗೂಂಡ ವರ್ತನೆಯನ್ನು  ಗಂಭೀರವಾಗಿ ಪರಿಗಣಿಸಿದ್ದು ಪಕ್ಷದಿಂದ ಅಮಾನತು ಮಾಡಲಾಗಿದೆಂದು ಬಿಜೆಪಿ   ಜಿಲ್ಲಾಧ್ಯಕ್ಷ   ಮಟ್ಟಾರು ರತ್ನಾಕರ ಹೆಗ್ಡೆ ‘ಉಡುಪಿ  ಟೈಮ್ಸ್’ ಗೆ ತಿಳಿಸಿದ್ದಾರೆ. ಈ  ಘಟನೆಯ ಬಗ್ಗೆ ಸ್ಪಷ್ಟನೆ‌ ಕೇಳಿ ನೋಟಿಸು ಮಾಡಲಾಗಿದೆಂದು ಈ ಸಂದರ್ಭ ಹೇಳಿದರು.

Leave a Reply

Your email address will not be published. Required fields are marked *

error: Content is protected !!