ಸಗ್ರಿ ಗೋಪಾಲಕೃಷ್ಣ ಸಾಮಗರಿಗೆ “ಆಸ್ತಿಕ ರತ್ನ” ಪ್ರಶಸ್ತಿ
ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರ ಷಷ್ಟ್ಯಾಬ್ಧಿ ಪ್ರಯುಕ್ತ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸಾಮಗರಿಗೆ “ಆಸ್ತಿಕ ರತ್ನ” ಎಂಬ ಬಿರುದು ನೀಡಿ ದಂಪತಿಗಳನ್ನು ಅನುಗ್ರಹಿಸಿದರು ನಾಸ್ತಿಕರನ್ನು ಆಸ್ತಿಕರನ್ನಾಗಿ ರೂಪಿಸಿದ ಸಗ್ರಿ ಸಾಮಗರು , ಶ್ರೀ ಕೃಷ್ಣ ಮಠದ ಗೋಶಾಲೆ ಸ್ಥಾಪನೆಗೆ ಅನಂತ ಸಾಮಗರು ಪ್ರೇರಣೆ ನೀಡಿದರು . ಅವರಿಗೆ ವಾದಿರಾಜ ಗುರುಗಳಿಂದ ಸ್ವರ್ಣ ನಾಗನ ಮೂರ್ತಿಯನ್ನು ಪಡೆದ ಕೀರ್ತಿ ಲಭಿಸಿದೆ.
ಶ್ರೀ ಮಠ ಹಾಗು ಕರ್ನಾಟಕದ ನಾನಾ ಭಾಗಗಳಲ್ಲಿ ಸಾವಿರಾರು ನಾಗ ಮಂಡಲದಲ್ಲಿ ದರ್ಶನ ಪಾತ್ರಿಯಾಗಿ ಸರಳ ಪರಿಹಾರ ನೀಡಿ , ಜನರ ಮೆಚ್ಚುಗೆಪಾತ್ರರಾಗಿದ್ದು ಉತ್ತಮ ಜ್ಯೋತಿಷಿಯಾಗಿ ಹಲವು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಲಹೆನೀಡಿ , ಸಗ್ರಿ ಯಲ್ಲಿ ನಾಗ ದೇವರ ದೇವಸ್ಥಾನವನ್ನು ನಿರ್ಮಿಸಿ , ನಿತ್ಯ ನಾಗಾರಾಧನೆ ಮಾಡುವುದರೊಂದಿಗೆ ,ಇವರ ಧಾರ್ಮಿಕ ಕ್ಷೇತ್ರ ದಲ್ಲಿ ಸಾಧನೆ ಮಾಡಿದ ಕೀರ್ತಿ ಸಾಮಗ ಕುಂಟುಭ ದಾಗಿದೆ .ಈ ಸಂದರ್ಭದಲ್ಲಿ ವಿದ್ವಾಂಸರಾದ ಸಗ್ರಿ ರಾಘವೇಂದ್ರ ಆಚಾರ್ಯ ಅಭಿನಂದನಾ ಭಾಷಣ ಮಾಡಿ, ಪರ್ಯಾಯ ಮಠದ ಗಿರೀಶ ಆಚಾರ್ಯ ಅನುಗ್ರಹ ಪತ್ರ ವಾಚನ ಮಾಡಿ, ಮೋಹನ ಆಚಾರ್ಯ ಕಾರ್ಯಕ್ರಮ ನಿರ್ವಹಣೆ ಮಾಡಿದರು.ಸಾಮಗರ ಪುತ್ರ ಅನಂತ ಸಾಮಗ, ಏಕವಾಡಿ ಅರವಿಂದ ,ಮತ್ತು ನೂರಾರು ಭಕ್ತರೂ ಉಪಸ್ಥಿತರಿದ್ದರು.