ಎರಡು ದಿನದಲ್ಲಿ ಬಂಧಿಸಿ, ಇಲ್ಲವಾದರೆ ಗುಂಡಿಕ್ಕಿ

ಬೆಂಗಳೂರು:ಬಂಡೀಪುರ ಹುಲಿ ಸಂರಕ್ಷಣಾ ವಲಯ ವ್ಯಾಪ್ತಿಯ, ಗುಂಡ್ಲುಪೇಟೆ ತಾಲ್ಲೂಕಿನ ಚೌಡಹಳ್ಳಿ, ಹುಂಡಿಪುರ ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ಹುಲಿಯನ್ನು ಇನ್ನೆರಡು ದಿನಗಳಲ್ಲಿ ಸೆರೆ ಹಿಡಿಲು ಅಥವಾ ಕುಂಡಿಕ್ಕಿ ಕೊಲ್ಲಲು ಅರಣ್ಯ ಇಲಾಖೆ ನಿರ್ಧರಿಸಿದೆ. 


ಈ ಕುರಿತು ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅರಣ್ಯ ಇಲಾಖೆ
‘ಬಂಡಿಪುರ ಹುಲಿ ಸಂರಕ್ಷಣಾ ವಲಯ ವ್ಯಾಪ್ತಿಯ ಚೌಡಹಳ್ಳಿ ಮತ್ತು ಹುಂಡಿಪುರ ಗ್ರಾಮಗಳಲ್ಲಿ ಎದುರಾಗಿರುವ ಹುಲಿ ದಾಳಿ ಮತ್ತು ಅದರಿಂದಾಗುತ್ತಿರುವ ಗ್ರಾಮಸ್ಥರ ಬಲಿ ಕುರಿತು ಇಂದು ಮುಖ್ಯ ಪ್ರಧಾನ ಅರಣ್ಯ ಸರಂಕ್ಷಣಾಧಿಕಾರಿ ಮತ್ತು ವನ್ಯಜೀವಿ ಮುಖ್ಯ ವಾರ್ಡನ್‌ ಅವರ ನೇತೃತ್ವದ ಸಭೆಯಲ್ಲಿ ಚರ್ಚಿಸಲಾಯಿತು. ಇನ್ನು 24ರಿಂದ 48 ಗಂಟೆಯ ಒಳಗಾಗಿ ಹುಲಿಯನ್ನು ಸೆರೆ ಹಿಡಿಯಲು ಅಥವಾ ಕುಂಡಿಕ್ಕಿ ಕೊಲ್ಲಲ್ಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಕಾರ್ಯಾಚರಣೆಗೆ ಸಾರ್ವನಿಕರ ಸಹಕಾರ ಅತ್ಯಂತ ಮುಖ್ಯ ಎಂದು,’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ತಿಂಗಳ ಹಿಂದೆ ಚೌಡಹಳ್ಳಿ ಗ್ರಾಮದಲ್ಲಿ ರೈತರೊಬ್ಬರನ್ನು ಹುಲಿ ಕೊಂದಿತ್ತು. ಅಂದಿನಿಂದ ಹುಂಡಿಪುರ, ಮೇಲುಕಾಮನಹಳ್ಳಿ, ಮಂಗಲ, ಚೌಡಹಳ್ಳಿ, ಶಿವಪುರ ಭಾಗದಲ್ಲಿ ಹುಲಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಲೇ ಇದೆ. ಹುಲಿಯನ್ನು ಸೆರೆ ಹಿಡಿಯುವುದಕ್ಕಾಗಿ ಅದು ಕಂಡು ಬಂದ ಜಾಗಗಳಲ್ಲಿ ಸಿಬ್ಬಂದಿ ಬೋನನ್ನೂ ಇರಿಸಿದ್ದಾರೆ. ಆದರೆ, ಈ ವರೆಗೆ ಸೆರೆ ಸಾಧ್ಯವಾಗಿಲ್ಲ.

ಕಳೆದ ವಾರ ಹುಂಡಿಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಹುಲಿ ಕಂಡಿತ್ತು. ಆದರೆ, ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ.

Leave a Reply

Your email address will not be published. Required fields are marked *

error: Content is protected !!