ಒಂಟಿ ಮಹಿಳೆಯ ಕೊಲೆ ಪ್ರಕರಣ; ಆರೋಪಿಗಳು ಅಂದರ್

ಉಡುಪಿ – ಇಲ್ಲಿಗೆ ಸಮೀಪದ ಪುತ್ತೂರು ಗ್ರಾಮದ ಶಾಂತಿ ನಗರ ನಿವಾಸಿ ಒಂಟಿ ವೃದ್ದೆ ಮಾಲತಿ ಕಾಮತ್ (68 ) ರನ್ನು ಕೊಲೆಮಾಡಿ ಚಿನ್ನಾಭರಣಗಳನ್ನ ದೋಚಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ ಬಂಧಿತ ಆರೋಪಿಗಳನ್ನ ಹೊರ ಜಿಲ್ಲೆಯ ಆನಂದ (28 ) ಹಾಗು ಅಶೋಕ (38 ) ಎಂಬುದಾಗಿ ಗುರುತಿಸಲಾಗಿದೆ

ಪ್ರಕರಣದ ವಿವರ
ಉಡುಪಿ ಸಮೀಪದ ಶಾಂತಿ ನಗರ ಎಂಬಲ್ಲಿ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ದೆ ಮಾಲತಿ ಕಾಮತ್ ರನ್ನು ತಲೆ ದಿಂಬಿನಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ವೃದ್ಧೆಯ ಮೈ ಮೇಲಿದ್ದ ಹಾಗು ಮನೆಯಲ್ಲಿದ್ದ ಆಭರಣಗಳನ್ನು, ಮನೆಯಲ್ಲಿದ್ದ ನಗದು ಸುಮಾರು 60 ,000 ನಷ್ಟು ದೋಚಿ ಪರಾರಿಯಾಗಿದ್ದರು. ಆದರೆ ಘಟನೆ ನಡೆದ ಕೆಲವೇ ದಿನಗಳಲ್ಲಿ ಉಡುಪಿ ವೃತ್ತ ನಿರೀಕ್ಷಕರಾದ ಮಂಜುನಾಥ್ ಹಾಗು ಡಿಸಿಐಬಿ ಘಟಕದ ಪೊಲೀಸ್ ನಿರೀಕ್ಷಕರಾದ ಮಂಜಪ್ಪರನ್ನ ಒಳಗೊಂಡ ತಂಡ ಪ್ರಕರಣವನ್ನ ಭೇದಿಸಿ ಆರೋಪಿಗಳನ್ನ ಬಂಧಿಸಿದ್ದಾರೆ ಹಾಗು ಬೆಳಗಾವಿಯಲ್ಲಿ ಆರೋಪಿಗಳು ನೀಡಿದ ಸುಳಿವಿನಂತೆ ಸುಲಿಗೆ ಮಾಡಿದ 7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು.


ಈ ಕಾರ್ಯಚರಣೆಯಲ್ಲಿ ಉಡುಪಿ ಜಿಲ್ಲೆ ಪೊಲೀಸ್ ಅಧೀಕ್ಷಕರಾದ ಏನ್ ವಿಷ್ಣುವರ್ಧನ್ ಆದೇಶದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ, ಟಿ ಆರ್ ಜೈ ಶಂಕರ್ , ಉಡುಪಿ ನಗರ ವೃತ್ತದ ಸಿ ಪಿ ಐ ಮಂಜುನಾಥ್ , ಚಾಲಕ ಏ ಎಚ್ ಸಿ ಅಶೋಕ್ ಕಚೇರಿ ಸಿಬ್ಬಂದಿಗಳಾದ ಮಾಲತಿ, ಬಾಲಕೃಷ್ಣ , ಪ್ರದೀಪ್, ರೇವತಿ, ಡಿ ಸಿ ಐ ಬಿ ಘಟಕದ ಪೊಲೀಸ್ ನಿರೀಕ್ಷಕರಾದ ಮಂಜಪ್ಪ ಆರ್ ಸಿಬ್ಬಂದಿಗಳಾದ ಎ ಎಸ್ ಐ ರವಿಚಂದ್ರ, ಎಚ್ ಸಿ ರಾಮು ಹೆಗ್ಡೆ ಮುಂತಾದವರು ಭಾಗವಸಿದ್ದರು

Leave a Reply

Your email address will not be published. Required fields are marked *

error: Content is protected !!