ಅಕ್ರಮವಾಗಿ ಸಾಗುವಾನಿ ಮರಗಳ ಸಾಗಾಟ ಮೂವರ ಬಂಧನ

ಕೊಲ್ಲೂರು ವನ್ಯಜೀವಿ ವಲಯದ ವ್ಯಾಪ್ತಿಯ ಮಾದಿಬರೆ ಮೀಸಲು ಅರಣ್ಯದ ಒಳಗೆ ಸಾಗುವಾನಿ ನೆಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿದ ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಮಾವಿನಕಾರು ನಿವಾಸಿಗಳಾದ ಉದಯ ನಾಯ್ಕ, ಪ್ರಶಾಂತ ನಾಯಕ, ಹುಲಿಪಾರೆ‌ ನಿವಾಸಿ ನಾರಾಯಣ ಶೆಟ್ಟಿ ಬಂಧಿತರು. ಹೊಸ ಮನೆಯ ದೇವರ ಕೋಣೆಗಾಗಿ ನಾರಾಯಣ ಶೆಟ್ಟಿ ಅವರು ಉದಯ ಮತ್ತು ಪ್ರಶಾಂತ್ ಅವರಲ್ಲಿ ಸಾಗವಾನಿ‌ ಮರಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆ ಯಲ್ಲಿ ಅಕ್ರಮವಾಗಿ ಮರ ಕಡಿದು ಸಾಗಿಸಿರುವುದಾಗಿ ವಿಚಾರ ವೇಳೆ ಆರೋಪಿತರು ಒಪ್ಪಿಕೊಂಡಿದ್ದಾರೆ.

ಕೊಲ್ಲೂರು ವಲಯದ ವಲಯ ಮಹಿಳಾ ಅರಣ್ಯ ಅಧಿಕಾರಿ ಸವಿತಾ ದೇವಾಡಿಗ ಅವರ ಮುಂದಾಳತ್ವದಲ್ಲಿ ಕಾರ್ಯಾಚರಣೆ‌ ನಡೆದಿದ್ದು ಆರೋಪಿಗಳ‌ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!