ಅನರ್ಹಗೊಂಡಿರುವ ಕಾಂಗ್ರೆಸ್, ಜೆಡಿಎಸ್‌ನ 17 ಕ್ಷೇತ್ರಗಳಿಗೆ ವೀಕ್ಷಕರ ನೇಮಕ

ಬೆಂಗಳೂರು: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್, ಜೆಡಿಎಸ್‌ನ 17 ಕ್ಷೇತ್ರಗಳಲ್ಲೂ ಪಕ್ಷ ಬಲಪಡಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ಕೈಹಾಕಿದ್ದು, ಪ್ರತಿ ಕ್ಷೇತ್ರಕ್ಕೂ ಹಿರಿಯ ಮುಖಂಡರ ನೇತೃತ್ವದಲ್ಲಿ ತಂಡ ರಚಿಸಿದೆ.

ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಡಿ.ಕೆ.ಸುರೇಶ್, ಕೆ.ಆರ್.ಪುರಂಕ್ಕೆ ಜಾರ್ಜ್, ಯಶವಂತಪುರಕ್ಕೆ ಜಮೀರ್ ಅಹ್ಮದ್, ಎಂ.ಕೃಷ್ಣಪ್ಪ, ಹೊಸಕೋಟೆಗೆ ಕೃಷ್ಣಭೈರೇಗೌಡ, ಉಗ್ರಪ್ಪ, ಮಹಾಲಕ್ಷ್ಮಿ ಲೇಔಟ್‌ಗೆ ಮಾಗಡಿ ಬಾಲಕೃಷ್ಣ, ನಜೀರ್‌ ಅಹ್ಮದ್, ಕೆ.ಆರ್.ಪೇಟೆಗೆ ಚೆಲುವರಾಯ ಸ್ವಾಮಿ, ಗೋಕಾಕ್‌ ಕ್ಷೇತ್ರಕ್ಕೆ ಶಿವಾನಂದ ಪಾಟೀಲ್, ಹುಣಸೂರಿಗೆ  ಎಚ್.ಸಿ.ಮಹದೇವಪ್ಪ, ರಾಣೆಬೆನ್ನೂರು ಕ್ಷೇತ್ರಕ್ಕೆ ಎಚ್.ಎಂ.ರೇವಣ್ಣ, ಹಾವೇರಿಗೆ ಎಚ್.ಕೆ.ಪಾಟೀಲ್, ಅಥಣಿ ಕ್ಷೇತ್ರಕ್ಕೆ ಈಶ್ವರ್ ಖಂಡ್ರೆ ಅವರು ವೀಕ್ಷಕರನ್ನಾಗಿ ಕಾಂಗ್ರೆಸ್‌ ನೇಮಿಸಿದೆ.

ಈ ತಂಡ ಭೇಟಿ ನೀಡಿ, ಪಕ್ಷ ಬಲಪಡಿಸುವ ಕುರಿತು ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಜತೆಗೆ ಚರ್ಚೆ ನಡೆಸಲಿದೆ. ನಂತರ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಲಿದೆ. ಈ ವರದಿ ಆಧರಿಸಿ ಪಕ್ಷಕ್ಕೆ ಶಕ್ತಿ ತುಂಬಲು ನಾಯಕರು ಮುಂದಾಗಿದ್ದಾರೆ.

ಅನರ್ಹರಿಗೆ ಕೋರ್ಟ್ ತಡೆಯಾಜ್ಞೆ ನೀಡುವ ಸಾಧ್ಯತೆಗಳು ಕಡಿಮೆ ಇರುವುದರಿಂದ ಉಪಚುನಾವಣೆಗೆ ಸಜ್ಜಾಗುವುದು, ಎಲ್ಲ 17 ಕ್ಷೇತ್ರಗಳನ್ನು ಕೇಂದ್ರೀಕರಿಸಿ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಬಗ್ಗೆ ಗಂಟೆ ಹಿರಿಯ ಮುಖಂಡರು ಸುದೀರ್ಘ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ಜೆಡಿಎಸ್‌ನಿಂದ ಆಯ್ಕೆಯಾಗಿ ಆ ಪಕ್ಷ ತೊರೆದವರ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಬಲಪಡಿಸುವ ಕೆಲಸ ಆಗಬೇಕು. ಆ ಮೂರು ಕ್ಷೇತ್ರಗಳಲ್ಲಿ ಹಿಂದೆ ಸ್ಪರ್ಧಿಸಿ ಪರಾಭವಗೊಂಡಿರುವವರನ್ನೇ ಮತ್ತೆ ನಿಲ್ಲಿಸಬೇಕೆ, ಇಲ್ಲವೆ ಪರ್ಯಾಯ ನಾಯಕರ ಅಗತ್ಯವಿದೆಯೆ ಎಂಬ ಬಗ್ಗೆ ಕ್ಷೇತ್ರಕ್ಕೆ ಭೇಟಿ ನೀಡುವ ತಂಡ ಅಧ್ಯಯನ ನಡೆಸಲಿದೆ.

Leave a Reply

Your email address will not be published. Required fields are marked *

error: Content is protected !!