ದೇವಸ್ಥಾನಗಳಲ್ಲಿ ದಲಿತ ಅರ್ಚಕರನ್ನು ನೇಮಿಸಿ: ಜಯನ್ ಮಲ್ಪೆ

ಉಡುಪಿ : ರಾಜ್ಯ ಸರಕಾರದ ಮುಜರಾಯಿ ದೇವಸ್ಥಾನಗಳಲ್ಲಿ ಪೌರೋಹಿತ್ಯ ಕಲಿತ ದಲಿತ ಅರ್ಚಕರನ್ನು ನೇವಿಸಬೇಕು ಮತ್ತು ಕುಮ್ಕಿ ಹಕ್ಕು ರದ್ದುಪಡಿಸಬೇಕು ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.ಅವರು ಗುರುವಾರ ಉಡುಪಿ ಜಿಲ್ಲಾಧಿಕಾರಿ ಕಛೇರಿ ಎದುರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಡೆಸಿದ ನಮ್ಮ ಭೂಮಿ-ನಮ್ಮಹಕ್ಕು ಹಾಗೂ ವಿವಿಧ ಬೇಡಿಕೆಯನ್ನು ಒತ್ತಾಯಿಸಿ ನಡೆಸಿದ ಬೃಹತ್ ಪ್ರತಿಭಟನಾ ಧರಣಿಯನ್ನು ಉದೇಶಿಸಿ ಮಾತನಾಡುತ್ತಾ,
ಭೂಮಿ ಒಡೆತನದಲ್ಲಿ ಚಾರಿತ್ರಿಕ ಅನ್ಯಾಯವನ್ನು ಸರಿಪಡಿಸಿ ಉಳುವವರಿಗೆ ಮತ್ತು ಭೂ ವಂಚಿತ ದಲಿತರಿಗೆ ಭೂಮಿಯನ್ನು ಹಂಚುವಲ್ಲಿ ಸರಕಾರಗಳು ಯಾವುದೇ ಪ್ರಮಾಣಿಕ ಪ್ರಯತ್ನ ಮಾಡಿಲ್ಲ.

ಉಡುಪಿ ಜಿಲ್ಲೆಯಲ್ಲೇ ಲಕ್ಷಾಂತರ ದಲಿತರಿಗೆ ಡಿ.ಸಿ ಮನ್ನಾ ಭೂಮಿಯನ್ನೇ ನೀಡಿಲ್ಲ.ಬದಲಾಗಿ ದಲಿತರ ಮೀಸಲು ಭೂಮಿಯನ್ನೇ ಕಾರ್ಪೊರೇಟ್ ಉದ್ಯಮಿಗಳಿಗೆ ನೀಡುತ್ತಿದ್ದಾರೆ ಎಂದು ಜಯನ್ ಮಲ್ಪೆ ಆರೋಪಿಸಿದರು.

ಪ್ರತಿಭಟನಾ ಧರಣಿಯನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಹೂ ಹಾರ ಹಾಕಿ ಉದ್ಘಾಟಿಸಿದ ಕೇಮಾರು ಸ್ವಾಮೀಜಿ ಮಾತನಾಡಿ ದಲಿರಿಗೆ ಹೆಂಡ ಬೇಡ ಸರಾಯಿ ಬೇಡ ಭೂಮಿಕೊಡಿ,ಅವರಿಗೆ ಶಿಕ್ಷಣ ಕೊಡಿ ಎಂದರು. ಸಿಐಯುಟಿನ ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ ಭೂಮಿ ಮತ್ತು ವಸತಿಯಿಂದ ದಲಿತರನ್ನು ವಂಚಿತರನ್ನಾಗಿ ಮಾಡಿರುವ ಸರಕಾರ ಕೇವಲ ಗಿಮಿಕ್ ಮತ್ತು ಅಂಕಿಸಂಖ್ಯೆಗಳ ಕಸರತ್ತು ಮಾಡುತ್ತಿದೆ,ಬಡವರು ಅಲ್ಲಿಇಲ್ಲಿ ಸರ್ಕಾರಿ ಭೂಮಿಯಲ್ಲಿ ಮನೆಕಟ್ಟಿಕೊಂಡರೂ ಹಕ್ಕುಪತ್ರದಿಂದ ವಂಚಿಸಲಾಗಿದೆ ಎಂದು ಆರೋಪಿಸಿದರು.
ದಲಿತ ಮುಖಂಡ ಮಂಜುನಾಥ ಗಿಳಿಯಾರು ,ವಾಸುದೇವ ಮುದೂರು,ರಾಜು ಬೇಟ್ಟಿನಮನೆ ಹಾಗೂ ಚಂದ್ರಹಳಗೇರಿ ಮುಂತ್ತಾದವರು ಪ್ರತಿಭಟನಾ ಧರಣಿ ನಿರತರನ್ನು ಉದೇಶಿಸಿ ಮಾತನಾಡಿದರು.


ದಲಿತ ನಾಯಕರಾದ ಗಣೇಶ್ ನೆರ್ಗಿ,ಯುವರಾಜ್ ಪುತ್ತೂರು, ಗೀತಾ ಸುರೇಶ್,ಗುಣಪಾಲ್ ತೊಟ್ಟಂ,ಹರೀಶ್ ಸಾಲ್ಯಾನ್,ಮೋಹನ್‌ದಾಸ್ ಚಿಟ್ಪಾಡಿ,ರವಿ ಕುಂದಾಪುರ ಭಗವಾನ್ ಮಲ್ಪೆ,ಶಂಕರ್ ಗುಜ್ಜರಬೆಟ್ಟು,ಸಿತಾ ಕುಂದಾಪುರ,ಸುರೇಶ್ ಹಕ್ಲಡಿ,ಭಾಸ್ಕರ ಕೆರಗಾಳು,ರಂಜೀತ್ ಯಂ.ವಿ, ಮುಂತ್ತಾದ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!