“ನಾರಾಯಣ ಗುರು” ನಿಗಮ ರಚನೆಯ ಕುರಿತು ಮುಖ್ಯಮಂತ್ರಿಗಳಿಗೆ ಮನವಿ

ಸಾಮಾಜಿಕ ನ್ಯಾಯದ ಹರಿಕಾರ, ಶತಮಾನದ ಶಾಂತಿ ದೂತ, ದುರ್ಬಲ ವರ್ಗದವರಿಗೆ ಬದುಕು ಕಲ್ಪಿಸಿಕೊಟ್ಟ, ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮವೊಂದನ್ನು ಸ್ಥಾಪಿಸಿ, ಮುಂದಿನ ಬಜೆಟ್ ಅಲ್ಲಿ 100 ಕೋಟಿ ರೂಪಾಯಿ ಅನುದಾನವನ್ನು ತೆಗೆದಿರಿಸಿ ಹಿಂದುಳಿದ ವರ್ಗದವರಿಗೆ ಆರ್ಥಿಕ ಸಹಾಯ ಒದಗಿಸ ಬೇಕೆಂದು, ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಯಿತು.

ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿಯವರು, ಶಾಸಕರಾದ  ಹರತಾಳು ಹಾಲಪ್ಪ,  ಸುನೀಲ್ ಕುಮಾರ್ ಕಾರ್ಕಳ, ಉಮಾನಾಥ ಕೊಟ್ಯಾನ್ ಮೂಡುಬಿದಿರೆ,  ಸುನೀಲ್ ನಾಯ್ಕ್ ಭಟ್ಕಳ,ಕುಮಾರ್  ಬಂಗಾರಪ್ಪ ಸೊರಬ,  ಸುಭಾಷ್ ಗುತ್ತೇದಾರ್ ಅಳಂದ, ಮುಂತಾದವರು ನೀಡಿದ ಮನವಿಯಲ್ಲಿ ನಾರಾಯಣ ಗುರುಗಳನ್ನು ಆದರ್ಶವಾಗಿ ಇಟ್ಟುಕೊಂಡು ಬದುಕುತ್ತಿರುವ ಈಡಿಗರು, ನಾಮಧಾರಿ, ಬಿಲ್ಲವರು, ದೀಯರು, ತೀಯಾ ಸಮಾಜದವರು ಸೇರಿದಂತೆ, ಅನೇಕ ಜನರು ನಿಗಮದ ನಿರೀಕ್ಷೆಯಲ್ಲಿ ಇದ್ದಾರೆಂದು ಉಲ್ಲೇಖಿಸಲಾಗಿದೆ.

ಮನವಿ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪನವರು  ಪರಿಶೀಲಿಸುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!