ಮೇ ತಿಂಗಳಲ್ಲಿ`ಅನುಷ್ಕ’ ಚಿತ್ರ ತೆರೆಗೆ
ಶ್ರೀನಂಜುಂಡೇಶ್ವರ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ಎಸ್.ಕೆ.ಗಂಗಾಧರ್ ಅವರು ನಿರ್ಮಿಸಿರುವ ಅನುಷ್ಕ
ಚಿತ್ರ ಮೇ 10ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಮೇ 3ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ದೇವರಾಜ್ ಕುಮಾರ್ ತಿಳಿಸಿದ್ದಾರೆ.
ದೇವರಾಜ್ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು, ಅರಸಿಕೆರೆ ಹಾಗೂ ಬ್ಯಾಂಕಾಕ್ನಲ್ಲಿ ಚಿತ್ರಕ್ಕೆ 72ದಿನಗಳ ಚಿತ್ರೀಕರಣ ನಡೆದಿದೆ.
ವೀನಸ್ ಮೂರ್ತಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿಕ್ರಂ ಸೆಲ್ವ ಸಂಗೀತ ನಿರ್ದೇಶನವಿದೆ. ಶ್ರೀಧರ್ ಸಂಕಲನ, ಅಶೋಕ್, ಸಿದ್ದಾರಾಜು, ನರಸಿಂಹ, ಚಂದ್ರು ಸಾಹಸ ನಿರ್ದೇಶನ, ಅವಿನ್ ನೃತ್ಯ ನಿರ್ದೇಶನ ಹಾಗೂ ಬಾಬುಖಾನ್ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಾಧುಕೋಕಿಲ, ರೂಪೇಶ್ ಶೆಟ್ಟಿ, ಅಮೃತ, ರೂಪ ಶರ್ಮ, ಬಾಲರಾಜ್, ಆದಿಲೋಕೇಶ್ ಮುಂತಾದವರಿದ್ದಾರೆ.