ಯೋಗ ಬಾಲೆಯ ಮುಡಿಗೆ ಮತ್ತೊಂದು ವಿಶ್ವದಾಖಲೆಯ ಗರಿ
ಉಡುಪಿ: ಯೋಗಾಸನದ ಮೂಲಕ ಈಗಾಗಲೇ 4 ವಿಶ್ವ ದಾಖಲೆಗಳನ್ನು ಹೊಂದಿರುವ ಉಡುಪಿಯ ಬಾಲೆ ತನುಶ್ರೀ ಪಿತ್ರೋಡಿ, ಈಗ ಅತ್ಯಂತ ವೇಗದ 100 ಮೀಟರ್ ಚಕ್ರಾಸನ ರೇಸ್ ವಿಭಾಗದ ದಾಖಲೆಯನ್ನು ಕೂಡಾ ತನ್ನ ಮುಡಿಗೇರಿಸಿಕೊಂಡಿದ್ದಾಳೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ನ ವಿಶ್ವದಾಖಲೆಗೆ ಸೇರ್ಪಡೆಗೊಂಡಿದ್ದಾರೆ.
ಕೇವಲ 1 ನಿಮಿಷ 14 ಸೆಕೆಂಡ್ 48 ಮಿಲಿ ಸೆಕೆಂಡನಲ್ಲಿ ಈ ಯೋಗ ಪ್ರಕಾರದ ಓಟವನ್ನು ಪೂರ್ತಿಗೊಳಿಸಿರುವ 10 ವರ್ಷ ವಯಸ್ಸಿನ ಈ ಪೋರಿ ಈ ಹಿಂದೆ ಹಿಮಾಚಲ ಪ್ರದೇಶದ ಸಮೀಕ್ಷಾ ಡೋಗ್ರಾ ಎಂಬವಳ ಹೆಸರಿನಲ್ಲಿದ್ದ 6 ನಿಮಿಷ ಅವಧಿಯ ದಾಖಲೆಯನ್ನ ಮುರಿದಿದ್ದಾರೆ.
ಪಿತ್ರೋಡಿಯ ವೆಂಕಟರಮಣ ಸ್ಪೋಟ್ರ್ಸ್ ಆ್ಯಂಡ್ ಕಲ್ಚರಲ್ಸ್ ಕ್ಲಬ್‍ನ ಸಹಕಾರದಲ್ಲಿ ಶನಿವಾರ ಸಂಜೆ ಉದ್ಯಾವರ ಗ್ರಾಮ ಪಂಚಾಯಿತಿ ಮೈದಾನದಲ್ಲಿ ಈ ಓಟವನ್ನು ಪೂರ್ತಿಗೊಳಿಸಿದ ತನುಶ್ರೀ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ನ ಡಾ. ಮಹೇಶ್ ವೈಷ್ಣೋಯಿ ಅವರಿಂದ ದಾಖಲೆಯ ಪ್ರಮಾಣ ಪತ್ರವನ್ನು ಸ್ವೀಕರಿಸಿದರು.
ಹೆಚ್ಚು ಅಂತರದಲ್ಲಿ ದಾಖಲೆ: ಕೇವಲ 1.14 ನಿಮಿಷದಲ್ಲಿ ಪೂರ್ತಿಗಳಿಸಿರುವ ಈ ಸಾಧನೆ ಬಹಳ ಕಾಲ ಉಳಿದುಬಿಡುವ ಸಾಧ್ಯತೆಯಿದೆ. ಈ ಹಿಂದಿನ ದಾಖಲೆಗೆ 6 ನಿಮಿಷ ಹೆಚ್ಚು ಅಂತರದಲ್ಲಿ ದಾಖಲೆ: ಕೇವಲ 1.14 ನಿಮಿಷದಲ್ಲಿ ಪೂರ್ತಿಗಳಿಸಿರುವ ಈ ಸಾಧನೆ ಬಹಳ ಕಾಲ ಉಳಿದುಬಿಡುವ ಸಾಧ್ಯತೆಯಿದೆ. ಈ ಹಿಂದಿನ ದಾಖಲೆಗೆ 6 ನಿಮಿಷ ತಗಲಿರುವುದ್ನು ಗಣನೆಗೆ ತೆಗೆದುಕೊಂಡರೆ ಇಂದಿನ ದಾಖಲೆಗೂ ಅದಕ್ಕೂ ಅಜಗಜಾಂತರವಿರುವುದರಿಂದ ಈ ಸಾಧನೆ ಬಹಳಷ್ಟು ಕಾಲ ಉಳಿದು ಬಿಡುವ ಸಾಧ್ಯತೆ ಹೆಚ್ಚಿದೆ. ಸತತ ಮೂರು ವರ್ಷಗಳಲ್ಲಿ ಮೂರು ವಿಶ್ವ ದಾಖಲೆಯನ್ನು ಬರೆದಿರುವ ತನುಶ್ರೀಯನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ನ ಡಾ. ಮಹೇಶ್ ವೈಷ್ಣೋಯಿ ಅರ್ಹವಾಗಿಯೇ ಗೋಲ್ಡನ್ ಗರ್ಲ್ ಎಂದು ಕರೆದು ಗೌರವಿಸಿದರು.
ಯೋಗರತ್ನ ಪುರಸ್ಕೃತಗೊಂಡ ಉಡುಪಿ ರತ್ನ
ಪಿತ್ರೋಡಿಯ ಸಂಧ್ಯಾ ಹಾಗೂ ಉದಯ ಕುಮಾರ್ ದಂಪತಿಯ ಪುತ್ರಿಯಾಗಿರುವ ತನುಶ್ರೀ ತನ್ನ ಅನನ್ಯ ಯೋಗ ಸಾಧನೆಯಿಂದ ಪ್ರಖ್ಯಾತಿಗೆ ಬಂದಿರುವ ಗ್ರಾಮೀಣ ಪ್ರತಿಭೆ ಈಗಾಗಲೇ ಸುಮಾರ 400 ಯೋಗ ಪ್ರದರ್ಶನಗಳನ್ನು ನೀಡಿ ಜನಮನಗೆದ್ದಿದ್ದಾಳೆ. ಉಡುಪಿ ಸೈಂಟ್ ಸಿಸಿಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿವ ಈ ಪ್ರತಿಭೆಗೆ 2019ರ 5ನೇ ವಿಶ್ವಯೋಗ ದಿನಾಚರಣೆಯಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಯೋಗ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್.
ಚಕ್ರಾಸನ ಯೋಗದ ಕಠಿಣ ಭಂಗಿಯಾಗಿದ್ದು ಚಕ್ರಾಸನದ ಮೂಲಕ 1 ನಿಮಿಷದಲ್ಲಿ ನೂರು ಮೀಟರ್ ಓಡುವುದು ಸಾಮಾನ್ಯರು ಕಲ್ಪಿಸಲೂ ಸಾಧ್ಯವಿಲ್ಲ. ನಮ್ಮಂತವರಿಗೆ ನಡೆದು ಬರಲೂ ಸಾಧ್ಯವಿಲ್ಲದ ಈ ಸಾಧನೆ ಮಾಡಿದ ತನಶ್ರೀ ಸಾಧನೆಗಳಿಗೆ ಆಕಾಶವೇ ಮಿತಿ.” ಎಂದರು
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಗ್ರಾ.ಪಂ ಅಧ್ಯಕ್ಷೆ ಸುಗಂಧಿ ಶೇಖರ್, ಜಿ.ಪಂ ಸದಸ್ಯೆ ಗೀತಾಂಜಲಿ ಸುವರ್ಣ, ತಾ.ಪಂ ಸದಸ್ಯೆ ರಜನಿ ಅಂಚನ್, ತನುಶ್ರೀ ಅವರ ಯೋಗಗುರು ರಾಮಕೃಷ್ಣ ಕೊಡಂಚ, ಆಕೆಯ ಶಾಲಾ ಶಿಕ್ಷಕಿ ಸಿಸ್ಟರ್ ಪ್ರೀತಿ, ಗಣ್ಯರಾದ ಜಯಕರ ಶೆಟ್ಟಿ ಇಂದ್ರಾಳಿ, ವಿ,ಜೆ ಶೆಟ್ಟಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪ್ರವೀಣ್ ಕುಮಾರ್, ಉದ್ಯಾವರ ನಾಗೇಶ್ ಕುಮಾರ್, ನಯನಾ ಗಣೇಶ್, ಜಿತೇಂದ್ರ ಶೆಟ್ಟಿ, ದಿವಾಕರ್ ಸನಿಲ್, ಅನಂತ್ರಾಯ್ ಶೆಣೈ ಶಿರ್ವ, ನಾಗರಾಜ್ ರಾವ್, ತನುಶ್ರೀ ಪಿತ್ರೋಡಿಯ ತಾಯಿ ಸಂಧ್ಯಾ, ತಂದೆ ಉದಯ ಕುಮಾರ್, ಸಹೋದರಿ ರಿತುಶ್ರೀ ಮೊದಲಾದವರ ಉಪಸ್ಥಿತಿಯಲ್ಲಿ ದಾಖಲೆಯ ಪ್ರಮಾಣ ಪತ್ರ ಮತ್ತು ಪದಕನ್ನು ತನುಶ್ರೀಗೆ ಹಸ್ತಾಂತರಿಸಲಾಯಿತು. ಆರ್.ಜೆ ಎರೋಲ್ ಕಾರ್ಯಕ್ರಮ ನಿರೂಪಿಸಿದರು. ರಾಕೇಶ್ ಕಟಪಾಡಿ ಮತ್ತು ವಿಜಯ ಕುಮಾರ್ ಸಹಕರಿಸಿದರು
ಇಂದಿನದು ತನುಶ್ರೀಯದ್ದು 5 ವಿಶ್ವದಾಖಲೆಯಾಗಿ ಮೂಡಿ ಬಂದಿದೆ. ತನುಶ್ರೀ 2017ರ ನ.11ರಂದು ನಿರಾಲಾಂಭ ಪೂರ್ಣ ಚಕ್ರಾಸನ ಎಂಬ ಕಠಿಣ ಯೋಗಾಸನವನ್ನು 1 ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ವಿಶ್ವ ದಾಖಲೆ, 2018ರ ಏ.7 ರಂದು ಮೋಸ್ಟ್ ಫುಲ್ ಬಾಡಿ ರೆವಲ್ಯೂಶನ್ ಮೈಂಟೈನಿಂಗ್ ಎ ಚೆಸ್ಟ್ ಸ್ಟ್ಯಾಂಡ್ ಪೆಸಿಶನ್ ಭಂಗಿಯನ್ನು 1 ನಿಮಿಷದಲ್ಲಿ 42 ಬಾರಿ ಮಾಡಿ ವಿಶ್ವ ದಾಖಲೆ , 2019ರಲ್ಲಿ ಮಾ. 21ರಂದು ಇದೇ ಭಂಗಿಯಲ್ಲಿ ತನ್ನ ಹಿಂದಿನ ದಾಖಲೆಯನ್ನು ಮುರಿದು ಹೊಸ ದಾಖಲೆ (ಒಂದು ನಿಮಿಷದಲ್ಲಿ 44 ಬಾರಿ) ಹಾಗೂ 2019ರ ಫೆ.23 ರಂದು ಮೋಸ್ಟ್ ನಂಬರ್ ಆಫ್ ರೋಲ್ಸ್ ಇನ್ ವನ್ ಮಿನಿಟ್ಸ್ ಇನ್ ಧನುರ್ವಾಸನ ಎಂಬ ಭಂಗಿಯನ್ನು 1.40 ನಿಮಿಷದಲ್ಲಿ 96 ಬಾರಿ ಮಾಡಿ ವಿಶ್ವ ದಾಖಲೆಯನ್ನು ಮಾಡಿದ್ದಾಳೆ.