ದೇಶದ ಮೊದಲ ಸಂಪೂರ್ಣ BS 6 ವಾಹನದ ಬಿಡುಗಡೆ ದಿನಾಂಕ ಘೋಷಣೆ..!!

ಹೊಂಡಾ ಮೋಟಾರ್ ಸೈಕಲ್ ಮತ್ತು ಸ್ಕ್ಯೂಟರ್ ಇಂಡಿಯಾ ( HMSI) ಬಿಎಸ್6 ಬಿಡುಗಡೆಯ ದಿನಾಂಕ ಅಧಿಕೃತವಾಗಿ ಘೋಷಿಸಿದೆ..

ಹೌದು ಹೊಂಡಾ ಸಂಸ್ಥೆಯು ತನ್ನ ಮೊದಲ ಬಿಎಸ್ VI (BS6) ವಾಹನದ ಬಿಡುಗಡೆಯ ದಿನಾಂಕ ಅದಿಕೃತಗೊಳಿಸಿದೆ. ಹೊಂಡಾ ಆಕ್ಟಿವಾ 125 ಬಿಡುಗಡೆಯ ದಿನಾಂಕ ಇದೆ ಸೆಪ್ಟೆಂಬರ್ ತಿಂಗಳ 11 ರಂದು. ಇದು ದೇಶದ ಮೊದಲ ಸಂಪೂರ್ಣ BS 6 ವಾಹನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಏಪ್ರಿಲ್ 1, 2020 ತನಕ ಗಡುವಿನ ದಿನಾಂಕ ಇದ್ದರೂ ಸುಮಾರು 7 ತಿಂಗಳ ಮೊದಲೇ ತನ್ನ ಗ್ರಾಹಕರಿಗೆ ವಾಹನವನ್ನು ನೀಡಲಿದೆ.

ಕೆಲವೊಂದು ಹೊಸತನ ಎಂದರೆ ಟ್ರಿಪ್ ಮೀಟರ್, ಸ್ಪೀಡೋಮಿಟರ್,ಕ್ಲಾಕ್, ಫ್ಯೂಲ್ ಗೇಜ್, ರಿಯಲ್ ಟೈಂ ಫಿಯೆಲ್ ಕನ್ಸಪ್ಷನ್, ಡಿಸ್ಟೆನ್ಸ್ ಎಮ್ಟಿ ರೀಡಿಂಗ್ ಎಲ್ ಇ ಡಿ ಸಹಿತ 6 ವರ್ಷಗಳ ಕಾಲ ವಾರಂಟಿ ಅಥವ ಮೂರು ವರ್ಷಗಳ ಕಾಲ ಸ್ಟ್ಯಾಂಡರ್ಡ್ ವಾರೆಂಟಿ , ಒಪ್ಷನಲ್ ವಾರೆಂಟಿಯ ಆಯ್ಕೆಯನ್ನು ನೀಡಲಿದೆ.
ಸದ್ಯ ಬಿಡುಗಡೆ ಗೊಳಿಸಲಿರುವ BS 6 ಆಕ್ಟಿವಾ ದ ಬೆಲೆ ಈಗಿನ ಸದ್ಯ ಮಾರುಕಟ್ಟೆಯಲ್ಲಿ ಇರುವ ಹೊಂಡಾ ಆಕ್ಟಿವಾ(BS 4) ಗಿಂತ ಶೇ 5 – 12 ರಷ್ಟು ಹೆಚ್ಚಳ ಆಗುವ ಸಾದ್ಯತೆ ಇದೆ.

ರೆಬೆಲ್ ರೆಡ್ ಮೇಟಲಿಕ್,ಕಪ್ಪು, ಹ್ಯಾವಿ ಗ್ರೇ ಮೆಟಲಿಕ್, ಮಿಡ್ ನೈಟ್ ಬ್ಲೂ ಮೇಟಲಿಕ್, ಬಿಳಿ ಮತ್ತು ಮಜೆಸ್ಟಿಕ್ ಬ್ರೌನ್ ಮೇಟಲಿಕ್ ಸಹಿತ ಆರು ಬಣ್ಣಗಳಲ್ಲಿ ಲಭ್ಯವಾಗಲಿದೆ..

Leave a Reply

Your email address will not be published. Required fields are marked *

error: Content is protected !!