ಬಡ ದಲಿತ ಕುಟುಂಬದ ಅಳಲಿಗೆ ಸ್ಪಂದಿಸದ ಅಂಬಲಪಾಡಿ ಗ್ರಾಮಾಡಳಿತ
ಉಡುಪಿ: ಗ್ರಾಮದ ನಾಗರೀಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಂಬಲಪಾಡಿಯ ಗ್ರಾಮಾಡಳಿತವು ಕೈ ಕಟ್ಟಿ ಕೂತಿದೆ. ಸೀತು ದಲಿತ ಬಡ ಕುಟುಂಬದ ಅಳಲಿಗೆ ಸ್ಪಂದಿಸದೆ ಬಡ ಕುಟುಂಬ ಅಸಹಾಯಕ ಪರಿಸ್ಥಿತಿಯಲ್ಲಿದೆ. ನಾಗರಿಕ ವಲಯದಲ್ಲೂ ಗ್ರಾಮಾಡಳಿತ ಕಾರ್ಯವೈಖರಿಯ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.
ಅಂಬಲಪಾಡಿ ಗ್ರಾಮದ ನಿವಾಸಿಯಾದ ಸೀತು ಅವರ ಮನೆಯಂಗಳದಲ್ಲಿ ಬಾವಿಯೊಂದಿದೆ. ಆ ಬಾವಿಯ ನೀರನ್ನು ಅವರು ಕುಡಿಯಲು ನಿತ್ಯವು ಉಪಯೋಗಿಸುತ್ತಿದ್ದಾರೆ. ಮಳೆಗಾಲದ ಸಂದರ್ಭ ಹರಿದು ಬರುವ ತ್ಯಾಜ್ಯ ನೀರು ಇವರ ಮನೆಯ ಬಾವಿ ಸೇರುತ್ತಿದೆ. ಊರ ತ್ಯಾಜ್ಯದ ಕೊಳಕು ನೀರು ಕುಡಿಯಬೇಕಾದ ಪರಿಸ್ಥಿತಿ ಇವರದ್ದಾಗಿದೆ. ಜಾಗದ ಕಂಪೌಂಡಿನ ಸುತ್ತಲು ನೀರು ಹರಿಯಲು ಅಡೆ ತಡೆಗಳಿದ್ದ ಕಾರಣ ಇವರ ಮನೆಯ ಸುತ್ತಮುತ್ತಲು ಕೊಳದಂತೆ ನೀರು ಸಂಗ್ರಹಗೊಳ್ಳುತ್ತಿದೆ.
ಈಗಾಗ್ಲೇ ಬಾವಿಯ ಕಲುಶಿತ ನೀರು ಕುಡಿದು ಕುಟುಂಬದ ಸದಸ್ಯರು ಅನಾರೋಗ್ಯ ಪೀಡಿತರಾಗಿದ್ದು ಇದೆ. ಕಳೆದ ಬಾರಿಯ ಮಳೆಗಾಲದ ಸಂದರ್ಭ ಮನೆಯ ಇಬ್ಬರು ಸದಸ್ಯರು ಡೆಂಗ್ಯೋ ಜ್ವರ ಬಾಧಿತರಾಗಿದ್ದರು. ಮನೆ ಬಾವಿಯ ಅಶುದ್ಧ ನೀರು ಸೇವೆನೆ ಮಾಡಿ ಮತ್ತಷ್ಟು ಅವರ ಆರೋಗ್ಯ ಹದಗೆಟ್ಟಿತು.
ತಮಗಾಗಿರುವ ಸಮಸ್ಯೆಯ ಕುರಿತು ಈ ಬಡ ಕುಟುಂಬವು ಸ್ಥಳಿಯ ಜನಪ್ರತಿನಿಧಿ ಅಧಿಕಾರಿಗಳಲ್ಲಿ ಅಳಲನ್ನು ಹೇಳಿಕೊಂಡಿದ್ದರು. ಯಾರೊಬ್ಬರು ಇವರ ಅಳಲಿಗೆ ಸ್ಪಂದಿಸುವ ಮನಸ್ಸು ಮಾಡಲಿಲ್ಲ. ಈ ಪ್ರಕ್ರಿಯೆ ದಲಿತ ಬಡ ಕುಟುಂಬದ ಮೇಲೆ ನಡೆಸಿದ ಮಾನಸಿಕ ಹಲ್ಲೆ ಎಂದು ಹೇಳಬಹುದು.
ಸ್ಥಳಿಯಾಡಳಿತ ವ್ಯವಸ್ಥೆಗಳು ಸಮಸ್ಯೆಗೆ ಸ್ಪಂದಿಸದ ಸಮಯದಲ್ಲಿ ಈ ಹಿಂದಿನ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಪ್ರಾನ್ಸಿಸ್ ಬಳಿ ಸಮಸ್ಯೆಗೆ ಸ್ಪಂದಿಸುವಂತೆ ಈ ಕುಟುಂಬವು ಹೇಳಿಕೊಂಡಿತ್ತು. ಅಂದು ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ ತಕ್ಷಣ ಬಡ ದಲಿತ ಕುಟುಂಬದ ನೆರವಿಗೆ ಬಂದಿದ್ದರು. ತ್ಯಾಜ್ಯ ನೀರು ಹರಿಯುವಿಕೆಗೆ ಸೂಕ್ತವಾದ ವ್ಯವಸ್ಥೆಯನ್ನು ಸಂಬಂಧಪಟ್ಟವರ ಮೂಲಕವಾಗಿ ಮಾಡಿಸಿದ್ದರು. ಆದರೆ ಈ ಬಾರಿಯ ಮಳೆಗಾಲದಲ್ಲಿ ಅವರು ಮಾಡಿದ ವ್ಯವಸ್ಥೆಗೆ ತಡೆಯೊಡ್ಡಲಾಗಿದೆ.
ಸ್ಥಳಿಯ ಜನಪ್ರತಿನಿಧಿ, ಗ್ರಾಮ ಪಂಚಾಯತಿಗೆ ದೂರು ನೀಡಿ ಕುಟುಂಬದವರಿಗೆ ಸಾಕಾಗಿದೆ. ಸಮಸ್ಯೆ ಆಲಿಸ ಬೇಕಾದವರು ಕಿವುಡರಾಗಿದ್ದಾರೆ. ಆಲಿಸಿ ಪರಿಸ್ಥಿತಿ ಪರಿಶೀಲಿಸಲು ಬರಬೇಕಾದವರು ಕುರುಡರಾಗಿದ್ದಾರೆ. ಹಾಗಾಗಿ ಸೀತು ಹರಿಜನ ಅವರ ಕುಟುಂಬವು ಜಿಲ್ಲಾಡಳಿತದ ಮೊರೆ ಹೊಕ್ಕಿದ್ದಾರೆ. ಜಿಲ್ಲಾಧಿಕಾರಿ ಅವರು ತ್ಯಾಜ್ಯ ನೀರು ಸೇವೆನೆಗೆ ಮುಕ್ತಿ ದೊರಕಿಸಬೇಕಾಗಿದೆ. ಮನೆ ಪರಿಸರದದಲ್ಲಿ ನೀರು ಹರಿಯುವಂತೆ ಸೂಕ್ತ ಕ್ರಮ ದೊರಕಿಸಬೇಕೆಂಬುವುದು ಕುಟಂಬದ ಕಳಕಳಿಯ ಮನವಿಯಾಗಿದೆ. ನ್ಯಾಯ ದೊರಕದಿದಲ್ಲಿ ದಲಿತ ಕುಟುಂಬವು ಗ್ರಾಮ ಪಂಚಾಯತ್ ಕಛೇರಿ ಮುಂಭಾಗ ಸುರಿಯುವ ಮಳೆಯಲ್ಲಿಯೇ ಉಪವಾಸ ಕುಳಿತುಕೊಳ್ಳವ ಎಚ್ಚರಿಕೆ ನೀಡಿದ್ದಾರೆ.