ದ.ಕ.ಡಿಸಿಯಾಗಿದ್ದ ಸಸಿಕಾಂತ್ ವಿರುದ್ದ ಭ್ರಷ್ಟಾಚಾರದ ಆರೋಪ
ಮಂಗಳೂರು: ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ, ದ.ಕ ಲಾರಿ ಮಾಲಕರ ಸಂಘ ಮತ್ತು ಮರಳು ಗುತ್ತಿಗೆದಾರ ಸಂಘವು ಸಸಿಕಾಂತ್ ಸೆಂಥಿಲ್ ವಿರುದ್ದ ಗಂಭೀರ ಭ್ರಷ್ಟಾಚಾರದ ಆರೋಪವನ್ನು ಹೊರಿಸಿದೆ.
ದ.ಕ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ವಿರುದ್ದ, ಮಂಗಳೂರಿನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿ ಲಾರಿ ಮಾಲಕರ ಸಂಘದ ಅಧ್ಯಕ್ಷ ಜೈರಾಜ್ ಶೆಟ್ಟಿ, ಮರಳುಗಾರಿಕೆ ವಿಚಾರದಲ್ಲಿ ಸಸಿಕಾಂತ್ ಸೆಂಥಿಲ್ ಮಾಡಿರುವ ಹಲವಾರು ಹಗರಣಗಳ ಬಗ್ಗೆ ಆರೋಪ ವ್ಯಕ್ತಪಡಿಸಿದರು.
ಹಳೆಯಂಗಡಿ ಮೀನುಗಾರಿಕಾ ಬಂದರಿನ ಹೂಳೆತ್ತಿ ಸಂಗ್ರಹಿಸಿದ ೧೦ ಸಾವಿರ ಮೆಟ್ರಿಕ್ ಟನ್ ಮರಳು ಅಕ್ರಮ ವಿಲೇವಾರಿಮಾಡಿದ್ದು, ಮರಳು ಲಾರಿಗೆ ಜಿಪಿಎಸ್ ಅಳವಡಿಸಲು ಕಪ್ಪು ಪಟ್ಟಿಗೆ ಸೇರಿದ ಸಂಸ್ಥೆಗೆ ಟೆಂಡರ್ ನೀಡಲಾಗಿದೆ, ಸರಕಾರದ ಅಧಿಕೃತ ಅದೇಶವಿಲ್ಲದೇ ಸ್ಯಾಂಡ್ ಬಜಾರ್ ಆಪ್ ತಯಾರಿಸಿದು, ತುಂಬೆ ಡ್ಯಾಂನಲ್ಲಿ ಹೂಳೆತ್ತುವಿಕೆಯ ಟೆಂಡರ್ ಅಕ್ರಮ, ಅಕ್ರಮ ಮರಳು ಎಂದು ವಶಕ್ಕೆ ಪಡೆದ ಮರಳು ವಿತರಣೆಯಲ್ಲೂ ಅಕ್ರಮ, ಮರಳು ವಿತರಣೆಯಲ್ಲಿ ರಾಜಕೀಯ ವ್ಯಕ್ತಿಗೆ ಡಿಸಿ ಬೆಂಬಲ ಆರೋಪ, ಜಿಲ್ಲಾಧಿಕಾರಿ ಮತ್ತು ಮಾಜಿ ಸಚಿವರ ಹಸ್ತಕ್ಷೇಪದ ಆರೋಪ, ಮಾಜಿ ಸಚಿವ ಯು.ಟಿ.ಖಾದರ್ ವಿರುದ್ದವೂ ಪರೋಕ್ಷ ಆರೋಪ, ೩ ಸಾವಿರ ಮೌಲ್ಯದ ಮರಳು ೧೪ ಸಾವಿರಕ್ಕೆ ಏರಿಕೆಯಾಗುವುದಕ್ಕೆ ಡಿಸಿ ಸೆಂಥಿಲ್ ಎಂದು ಪರೋಕ್ಷವಾಗಿ ಆರೋಪ ಮಾಡಿದರು . ಈ ಎಲ್ಲಾ ಹಗರಣಗಳ ಬಗ್ಗೆ ಲೋಕಾಯುಕ್ತ ದೂರು ಸಲ್ಲಿಕೆಗೆ ಸಂಘ ನಿರ್ಧರಿಸಿದೆಂದು ಗೋಷ್ಠಿಯಲ್ಲಿ ಹೇಳಿದರು.