ಮಂಗಳೂರು ದೇವಾಲಯದ ಎಲ್ಲಾ ಸೇವೆಗಳೂ ರದ್ದು: ಶ್ರೀರಾಮುಲು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಎಲ್ಲಾ ದೇವಾಲಯಗಳು, ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲಾ ಬಗೆಯ ಸೇವೆಗಳನ್ನು ರದ್ದುಗೊಳಿಸಿ ಜಿಲ್ಲಾಡಳಿತ ಆದೇಶಿಸಿದೆ. ಆರೋಗ್ಯ ಸಚಿವ ಬಿ. ಶ್ರೀರಾಮುಲು ನೇತೃತ್ವದ ಸಭೆಯಲ್ಲಿ ಜಿಲ್ಲಾಡಲಿತ ಈ ಘೋಷಣೆ ಮಾಡಿದೆ.
ದೇವಾಲಯಗಳಲ್ಲಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಮಾತ್ರವೇ ಅವಕಾಶವಿರಲಿದೆ, ಸೇವೆಗಳೆಲ್ಲವೂ ರದ್ದುಗೊಳಿಸಲ್ಪಟ್ಟಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಮಂಗಳವಾರದಿಂದ ದೇವಾಲಯ, ದೈವಸ್ಥಾನ, ಉತ್ಸವಾದಿಗಳಲ್ಲಿ ಆಯಾ ಸ್ಥಳದ ಸಿಬ್ಬಂದಿಗಳು ಮಾತ್ರವೇ ಭಾಗವಹಿಸಬೇಕು. ಅಲ್ಲದೆ ದೇವಾಲಯದಲ್ಲಿ ನಡೆಯುವ ಎಲ್ಲಾ ಸೇವೆಗಳೂ ಬಂದ್ ಆಗಲಿದೆ. ಬೀಚ್ ಪ್ರದೇಶಗಳಿಗೆ ನಿರ್ಬಂಧ ವಿಧಿಸಲು ಚಿಂತನೆ ನಡೆದಿದೆ. ರೈಲ್ವೆ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಅಳವಡಿಸಲಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಲಾಗಿದೆ.
ಕೊರೋನಾ ಸೋಂಕಿನ ಪತ್ತೆಗೆ ನೆರವಾಗುವಂತೆ ಮಂಗಳೂರಿನಲ್ಲಿ ಶೀಘ್ರವೇ ಟೆಸ್ಟಿಂಗ್ ಲ್ಯಾಬ್ ಪ್ರಾರಂಭ ಮಾಡಲಾಗುತ್ತದೆ ಶೀಘ್ರದಲ್ಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಯಲ್ಲಿ ಒಂದು ಲ್ಯಾಬ್ ತೆರೆಯಲಾಗುವುದು ಎಂದು ಸಚಿವ ಬಿ ಶ್ರೀರಾಮುಲು ಮಾಹಿತಿ ನೀಡಿದರು.