ಪುತ್ತೂರು ಸಾಮೂಹಿಕ ಅತ್ಯಾಚಾರ ಪ್ರಕರಣ ಎಲ್ಲ ಆರೋಪಿಗಳ ಬಂಧನ

ಮಂಗಳೂರು:ಕಾಲೇಜ್ ವಿದ್ಯಾರ್ಥಿನಿಯನ್ನು ತನ್ನ ಐವರು ಸಹಪಾಠಿಗಳೇ ಅತ್ಯಾಚಾರ ನಡೆಸಿ ಅದರ ವಿಡಿಯೋ ಚಿತ್ರೀರಕರಣ ಮಾಡಿ ವೈರಲ್ ಮಾಡಿದ ಘಟನೆಗೆ ಸಂಬಂಧಿಸಿ ಮಂಗಳೂರು ಪೊಲೀಸರ ಕ್ಷೀಪ್ರ ಕಾರ್ಯಚಾರಣೆಯಲ್ಲಿ ಬಂಧಿಸಲಾಗಿದೆ.

ಪ್ರಕರಣದಲ್ಲಿ ಭಾಗಿಯಾದ ಪುತ್ತೂರಿನ ಬಜತ್ತೂರು ಗುರುನಂದನ್ (19), ಬಂಟ್ವಾಳದ ಪೆರ್ನೆ ಗ್ರಾಮ ಪ್ರಜ್ವಲ್ (19), ಬಂಟ್ವಾಳದ ಪೆರ್ನೆ ಗ್ರಾಮದ ಕಡಂಬು ಮನೆಯ ಕಿಶನ್ (19), ಪುತ್ತೂರಿನ ಆರ್ಯಾಪು ಗ್ರಾಮದ ಪಿಲಿಗುಂಡ ಮನೆಯ ಸುನಿಲ್ (19) , ಬಂಟ್ವಾಳದ ಬರಿಮಾರು ಬಲ್ಯ ಮನೆ ಪ್ರಖ್ಯಾತ್ (19) ಇವರನ್ನು ಬಂಧಿಸಿ ತೀವ್ರವಿಚಾರಣೆಗೆ ಒಳಪಡಿಸಿದ್ದಾರೆ.

“ಮಾರ್ಚ್ ತಿಂಗಳ ಕೊನೆಯ ವಾರ ಮಧ್ಯಾಹ್ನ ಸುನಿಲ್ ನಿನ್ನಲ್ಲಿ ಮಾತನಾಡಲಿಕ್ಕೆ ಇದೆ ಎಂದು ಹೇಳಿ ಸಂತ್ರಸ್ಥೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ, ಈ ಸಂಧರ್ಭ ತನ್ನ ಸಹಪಾಠಿಗಳಾದ ಪ್ರಜ್ವಲ್, ಪ್ರಖ್ಯಾತ್ ಎಂಬವರನ್ನು ಕೂಡಿಕೊಂಡು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸದರಿ 4 ರಿಂದ 5 ಜನ ಆರೋಪಿಗಳು ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುತ್ತಾರೆ.

ಹಾಗೂ ಈ ವಿಚಾರವನ್ನು ಮುಂದಕ್ಕೆ ಯಾರಲ್ಲಿಯೂ ಹೇಳದಂತೆ ಜೀವ ಬೆದರಿಕೆ ಒಡ್ಡಿರುತ್ತಾರೆ ಮತ್ತು ಈ ಬಗ್ಗೆ ಬೇರೆಯವರಿಗೆ ತಿಳಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಪಡಿಸುವುದಾಗಿ ಬೆದರಿಸಿರುತ್ತಾರೆ ” ಎಂದು ಸಂತ್ರಸ್ತೆ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದಕ್ಕೂ ಮೊದಲು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ದಕ್ಷಿಣ ಕನ್ನಡದ ಎಸ್?ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!