‘ಅಳಬೇಡ ನನ್ನಕ್ಕ’ ಕನ್ನಡ ಆಲ್ಬಂ ಸಾಂಗ್ ಪೋಸ್ಟರ್ ಅನಾವರಣ

ವಕ್ವಾಡಿ, ಸೆಪ್ಟೆಂಬರ್ 3 ಮಂಗಳವಾರ – ವರ್ಲ್ಡ್ ಕುಂದಾಪುರಿಯನ್ ಪೇಜ್ ಇದರ ಸಹಭಾಗಿತ್ವದಲ್ಲಿ ಮೂಡಿಬರುತ್ತಿರುವ, ಶಿವಪ್ರಸಾದ್ ವಕ್ವಾಡಿ ಸಾಹಿತ್ಯ ರಚಿಸಿ, ಹಾಡಿರುವ, ಉತ್ತಮ್ ಸಾರಂಗ್ ಸಂಗೀತ ಸಂಯೋಜನೆ ಯುಳ್ಳ, ‘ಅಳಬೇಡ ನನ್ನಕ್ಕ’ ಕನ್ನಡ ಆಲ್ಬಂ ಸಾಂಗ್ ನ ಪೋಸ್ಟರನ್ನು, ವಕ್ವಾಡಿ ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಸಾಂಸ್ಕ್ರತಿಕ ವೇದಿಕೆಯಲ್ಲಿ ಅನಾವರಣ ಗೊಳಿಸಲಾಯಿತು.

ಕಲಾಪೋಷಕರಾದ ವಕ್ವಾಡಿ ಶ್ರೀ ಗಣೇಶ್ ಆಚಾರ್ಯ ಸಾಗರ ಇವರು ಪೋಸ್ಟರ್ ಅನಾವರಗೊಳಿಸಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಸಂಗೀತ ನಿರ್ದೇಶಕರಾದ ಶ್ರೀ ಉತ್ತಮ್ ಸಾಂರಗ್ ಇವರನ್ನು ವರ್ಲ್ಡ್ ಕುಂದಾಪುರಿಯನ್ ಪೇಜ್ ಹಾಗು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಕ್ವಾಡಿ ಇವರ ಪರವಾಗಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಕ್ವಾಡಿ ಇದರ ಅಧ್ಯಕ್ಷ ರಾದ ಶ್ರೀ ಮನೋಹರ್ ಆಚಾರ್ಯ ವಕ್ವಾಡಿ, ವರ್ಲ್ಡ್ ಕುಂದಾಪುರಿಯನ್ ತಂಡದ ಶ್ರೀ ಪ್ರಸನ್ನ ಆಚಾರ್ಯ, ಆರ್ಟ್ ಬಾಕ್ಸ್ ಡಿಸೈನ್ ಸ್ಟುಡಿಯೋ ಇದರ ಸ್ಥಾಪಕರಾದ ವಕ್ವಾಡಿ ಮಹೇಂದ್ರ ಆಚಾರ್ಯ, ಸಾಹಿತ್ಯಕಾರರಾದ ಸಿದ್ದೇಶ್ ಉಪಸ್ಥಿತರಿದ್ದರು.

ಶಿವಪ್ರಸಾದ್ ವಕ್ವಾಡಿ ಅತಿಥಿ ಗಳನ್ನು ಸ್ವಾಗತಿಸಿ, ವಂದಿಸಿದರು. ಅಕ್ಷತಾ ಗಿರೀಶ್ ಐತಾಳ್ ಕಾರ್ಯಕ್ರಮ ವನ್ನು ನಿರೂಪಿಸಿದರು

Leave a Reply

Your email address will not be published. Required fields are marked *

error: Content is protected !!