ಅಖಂಡ ಹರಿನಾಮ ಸಂಕೀರ್ತನ ಮಂಗಲ

ಉಡುಪಿ – ಪಲಿಮಾರು ಮಠದ ಪರ್ಯಾಯದ ಸಂದರ್ಭದಲ್ಲಿ ಶ್ರೀಗಳು ತೆಗೆದುಕೊಂಡ ಸಂಕಲ್ಪದಲ್ಲಿ ಒಂದು ಹರಿನಾಮ ಸಂಕೀರ್ತನೆ . ಸುಮಾರು 2 ವರ್ಷಗಳ ಕಾಲ ಬೇರೆ ಬೇರೆ ಊರು , ರಾಜ್ಯ ಗಳಿಂದ ಭಜನಾ ತಂಡಗಳು ಆಗಮಿಸಿ ತಮ್ಮ ಸೇವೆಯನ್ನ ನೀಡಿರುವುದು ಇಲ್ಲಿಯ ವಿಶೇಷ. ಸುಮಾರು 2 ವರ್ಷಗಳ ಕಾಲ ನಿರಂತರವಾಗಿ ನಡೆದ ಈ ಹರಿನಾಮ ಸಂಕೀರ್ತನೆ ಇಂದು ಮುಂಜಾನೆ ಹರಿನಾಮ ಸಂಕೀರ್ತನೆ ಮಂಗಳ ಪದ ಹಾಡುವುದರ ಮೂಲಕ ಸಮಾಪ್ತಿಗೊಂಡಿತು.

ಶ್ರೀ ಕೃಷ್ಣ ಮಠದ ಅಖಂಡ ಹರಿನಾಮ ಸಂಕೀರ್ತನ ಮಂಟಪದಲ್ಲಿ , ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಪರ್ಯಾಯಾವಧಿಯಲ್ಲಿ ಸಂಕಲ್ಪಿಸಿದ 2018 ಜನವರಿ 18 ರಂದು ಸೂರ್ಯೋದಯದಲ್ಲಿ ಆರಂಭವಾದ ಹರಿನಾಮ ಸಂಕೀರ್ತನೆಯ 2 ವರ್ಷಗಳಲ್ಲಿ ನಿರಂತರ ನಡೆದು ಇಂದು ಸೂರ್ಯೋದಯದ ಸಮಯದಲ್ಲಿ ಮಂಗಲ ಪದವನ್ನು ಹಾಡಿ ಪಲಿಮಾರು ಮಠದ ಪಟ್ಟದ ದೇವರಾದ ಶ್ರೀರಾಮಚಂದ್ರ ದೇವರಿಗೆ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮಂಗಳಾರತಿ ಮಾಡುವುದರ ಮೂಲಕ ಮುಕ್ತಾಯವಾಯಿತು.ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!