ಏ. 30ರವರೆಗೆ ಏರ್‌ಇಂಡಿಯಾ ಟಿಕೆಟ್ ಬುಕ್ಕಿಂಗ್ ರದ್ದು
ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮತ್ತು ದೇಶಿಯ ವಿಮಾನಗಳ ಹಾರಾಟವನ್ನು ನಿಷೇಧ ಮಾಡಲಾಗಿತ್ತು. ಇದೀಗ ಏರ್‌ಇಂಡಿಯಾ ತನ್ನ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಯಾದ ಟಿಕೆಟ್ ಬುಕ್ಕಿಂಗ್ ನಿಷೇಧವನ್ನು ವಿಸ್ತರಿಸಿದೆ.
ಏಪ್ರಿಲ್ 14ರವರೆಗೂ ಲಾಕ್‍ಡೌನ್ ಇರುವುದರಿಂದ ಏಪ್ರಿಲ್ 30ರವರೆಗೂ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಟಿಕೆಟ್ ಬುಕ್ಕಿಂಗ್ ಅನ್ನು ನಿಲ್ಲಿಸಲು ಏರ್ ಇಂಡಿಯಾ ತೀರ್ಮಾನಿಸಿದೆ. ಏಪ್ರಿಲ್ 3 ರಿಂದ ಏಪ್ರಿಲ್ 30 ರವರೆಗೂ ಎಲ್ಲಾ ವಿಮಾನ ಬುಕ್ಕಿಂಗ್‍ಗಳನ್ನು ನಿಷೇಧಿಸಲಾಗಿದೆ. ಏಪ್ರಿಲ್ 15ರ ನಂತರ ನಾವು ಟಿಕೆಟ್ ಬುಕ್ಕಿಂಗ್ ಮುಂದುವರಿಸುತ್ತೇವೆ. ಒಂದು ವೇಳೆ ಸಚಿವಾಲಯದಿಂದ ಯಾವುದೇ ಸೂಚನೆ ಬಂದರೂ ತಕ್ಷಣ ನಾನು ಕ್ರಮ ಕೈಗೊಳ್ಳುತ್ತೇವೆ. ಹೀಗಾಗಿ ಏ. 14ರ ಬಳಿಕ ವಿಮಾನಯಾನ ಸಚಿವಾಲಯದ ನಿರ್ಧಾರದ ಕುರಿತು ಕಾಯುತ್ತಿದ್ದೇವೆ ಎಂದು ಏರ್‌ಇಂಡಿಯಾ ವಕ್ತಾರರು ತಿಳಿಸಿದ್ದಾರೆ.