ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಕಂಪೆನಿಯಿಂದ ನೆರೆ ಸಂತ್ರಸ್ತರಿಗೆ ನೆರವು

ರಾಜ್ಯದಲ್ಲಿ ವರುಣನ ರುದ್ರನರ್ತನ ಮುಂದುವರಿದಿದ್ದು, ಬಹುತೇಕ ಎಲ್ಲ ಭಾಗದಲ್ಲಿ ಪ್ರವಾಹ  ಉಕ್ಕಿ ಹರಿಯುತ್ತಿದೆ. ಲಕ್ಷಾಂತರ ಜನರ ಜನಜೀವನ ಅಸ್ತವ್ಯಸ್ತವಾಗಿದ್ದು ಸಾವಿರಾರು ಕೋಟಿ ನಷ್ಟಗೊಂಡಿದೆ. ನೆರೆ ಸಂತ್ರಸ್ತರಿಗೆ ರಾಜ್ಯದ ವಿವಿಧ ಭಾಗಗಳಿಂದ ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ಉದ್ಯಮಿಗಳಿಂದ ತುರ್ತು ಸನ್ನಿವೇಶಕ್ಕೆ ನೆರವು ದೊರಕುತ್ತಿದೆ. ಬಹಳಷ್ಟು ಕಡೆ ರೈಲು ರಸ್ತೆ ಸಂಪರ್ಕ ಕಡಿತಗೊಂಡಿದ್ದು,  ಕೆಲವೊಂದು ರಸ್ತೆಗಳಲ್ಲಿ ಮಣ್ಣು ಕುಸಿದು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ನೀರಿನ ಮಟ್ಟ ಏರುತ್ತಿದ್ದು ನೆರೆ ಪೀಡಿತ ಪ್ರದೇಶಗಳಲ್ಲಿ ನೂರಾರು ಜನ ಸಿಲುಕಿಕೊಂಡಿದ್ದಾರೆ. ಸೇನಾ ಸಿಬ್ಬಂದಿ ಸಹಿತ ವಿವಿಧ ಸಂಘ ಸಂಸ್ಥೆಗಳು ಮಾನವೀಯತೆಯ ನೆರವು ನೀಡುತ್ತಿದ್ದಾರೆ. ದೇಶದಲ್ಲಿ 2200 ಕ್ಕೂ ಅಧಿಕ ಮತ್ತು ರಾಜ್ಯದಲ್ಲಿ 210 ಕ್ಕೂ ಅಧಿಕ  ಶಾಖೆಗಳನ್ನು ಹೊಂದಿರುವ ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಕಂಪನಿ ಕೇರಳ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತನ್ನ ಸಿಬ್ಬಂದಿಗಳನ್ನು ನೆರವು ಪರಿಹಾರಕ್ಕೆ ಕಳೆದ 4 ದಿನಗಳಿಂದ ತೊಡಗಿಸಿಕೊಂಡಿದೆ.

ರಾಜ್ಯದ ಕುಮಟಾ, ಕಾರವಾರ, ಯಲ್ಲಾಪುರ, ಬೆಳ್ತಂಗಡಿ, ಹುಬ್ಬಳ್ಳಿ, ಯಾದಗಿರಿ, ಗೋಕಾಕ್ ಸೇರಿದಂತೆ ಬಹುತೇಕ ಎಲ್ಲಾ ಭಾಗದಲ್ಲಿ  ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಕಂಪೆನಿಯ ಸಿಬ್ಬಂದಿಗಳು ಪ್ರವಾಹ ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ. ದಿನಬಳಕೆಯ ವಸ್ತುಗಳು ಸೇರಿದಂತೆ ಬೆಡ್ ಶೀಟ್, ಚಾಪೆ, ಕುಡಿಯುವ ನೀರು, ಊಟದ ವ್ಯವಸ್ಥೆ, ಉಪಹಾರದ ವ್ಯವಸ್ಥೆ ಸಹಿತ ಸಂತ್ರಸ್ತರಿಗೆ ತುರ್ತು ಸಹಾಯವನ್ನು ಸಿಬ್ಬಂದಿಗಳು ನೀಡುತ್ತಿದ್ದಾರೆ ಎಂದು ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಕಂಪನಿಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!