ಹಿರಿಯ ವಕೀಲ ವಾರ್ವಡಿ ಪ್ರಭಾಕರ್ ಹೆಗ್ಡೆ ಇನ್ನಿಲ್ಲ

ಉಡುಪಿ – ಉಡುಪಿಯ ಹಿರಿಯ ವಕೀಲ ವಾರ್ವಡಿ ಪ್ರಭಾಕರ್ ಹೆಗ್ಡೆ (78 ) ಇಂದು (ಮಂಗಳವಾರ ) ರಾತ್ರಿ ಸ್ವರ್ಗಸ್ತರಾದರು , ಅವಿಭಜಿತ ದಕ್ಷಿಣ ಕನ್ನಡದ ಜಿಲ್ಲೆಯ ವಿಶ್ವ ಹಿಂದೂ ಪರಿಷದ್ ನ ಅಧ್ಯಕ್ಷರಾಗಿದ್ದು ಕುಂಜಿಬೆಟ್ಟು ವೈಕುಂಠ ಬಾಳಿಗಾ ಲಾ ಕಾಲೇಜಿನ ಪ್ರೊಫೆಸರ್ ಆಗಿದ್ದರು, 40 ವರ್ಷಕ್ಕೂ ಹೆಚ್ಚು ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದ ಇವರು ಅಲ್ಪ ಕಾಲದ ಅನಾರೋಗ್ಯದಿಂದ ಕೆ ಎಂ ಸಿ ಆಸ್ಪತ್ರೆಗೆ ದಾಖಲಾಗಿದ್ದು , ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ನಿಧನರಾದರು. ಇವರು ಪತ್ನಿ , ಇಬ್ಬರು ಪುತ್ರಿಯರು , ಓರ್ವ ಪುತ್ರನನ್ನ ಅಗಲಿದ್ದಾರೆ, ಹಲವಾರು ಯುವ ವಕೀಲರು ಇವರ ಮಾರ್ಗದರ್ಶನದಲ್ಲಿ ಬೆಳೆದಿದ್ದಾರೆ

Leave a Reply

Your email address will not be published. Required fields are marked *

error: Content is protected !!