ಉಸ್ತುವಾರಿ ತಪ್ಪಿಸಿದ ಹೇಳಿಕೆ ನೀಡಿದ ಬಿಜೆಪಿ ಮುಖಂಡರ ವಿರುದ್ಧ ಕ್ರಮ?
ಉಡುಪಿ:ಕೋಟ ಶ್ರೀನಿವಾಸ ಪೂಜಾರಿಯವರಿಗೆ ಉಡುಪಿ ಜಿಲ್ಲಾ ಉಸ್ತುವಾರಿಯನ್ನು ಜಿಲ್ಲೆಯ ಐವರು ಶಾಸಕರು ತಪ್ಪಿಸಿದರು ಎಂದು ಬಹಿರಂಗ ಹೇಳಿಕೆ ನೀಡಿದ ಪಕ್ಷದ ಮುಖಂಡರ ಮೇಲೆ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಹೇಳಿದರು.
ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಟ್ಟಾರು, ಶ್ರೀನಿವಾಸ ಪೂಜಾರಿಯವರಿಗೆ ಉಡುಪಿ ಜಿಲ್ಲಾ ಉಸ್ತುವಾರಿ
ನೀಡಿಲ್ಲವೆನ್ನುವುದು ಚರ್ಚಿಸುವ ವಿಷಯವಲ್ಲ, ಭಾರತೀಯ ಜನತಾ ಪಾರ್ಟಿಗೆ ಶೇ.70ರಷ್ಟು ಮತದಾರರು ಬೆಂಬಲ ವ್ಯಕ್ತಪಡಿಸಿ ಜಿಲ್ಲೆಯ ಐದು ಶಾಸಕರನ್ನು ಗೆಲ್ಲಿಸಿ ಕೊಟ್ಟಿದ್ದಾರೆ.
ಪೂಜಾರಿಯವರನ್ನು ಹಿರಿಯ ನಾಯಕರು ಗುರುತಿಸಿ ಈಗಾಗಲೇ 3 ಬಾರಿ ವಿಧಾನ ಪರಿಷತ್ತು ಸದಸ್ಯ, ಸಚಿವ ಸ್ಥಾನ, ವಿಧಾನ ಪರಿಷತ್ತಿನ ವಿರೋಧ ವಿಪಕ್ಷ ನಾಯಕ ನೀಡಿದ್ದರು. ಈಗ ಮತ್ತೆ ವಿಧಾನ ಪರಿಷತ್ತಿನ ಸಭಾ ನಾಯಕ ಹುದ್ದೆ ನೀಡುವುವವರಿದ್ದಾರೆ. ಇವರಿಗೆ ಮಂತ್ರಿ ಸ್ಥಾನ ನೀಡುವುದಕ್ಕೆ ಜಿಲ್ಲೆಯ ಎಲ್ಲಾ ಶಾಸಕರ ಒಪ್ಪಿದ್ದಾರೆ, ಇದರಲ್ಲಿ ಯಾವುದೇ ಭಿನ್ನಮತವಿಲ್ಲವೆಂದು ಸ್ಪಷ್ಟಪಡಿಸಿದರು.
ಕೋಟಾ ಎರಡು ಜಿಲ್ಲೆಯ ವಿಧಾನ ಪರಿಷತ್ತು ಸದಸ್ಯರು ಹಾಗಾಗೀ ಪಕ್ಕದ ಮಂಗಳೂರು ಜಿಲ್ಲೆಯ ಉಸ್ತುವಾರಿಯನ್ನಾಗಿ ಮುಖ್ಯಮಂತ್ರಿ ಬಿ.ಎಸ್.ಯೂಡಿಯೂರಪ್ಪ ಮಾಡಿದ್ದಾಗಿ ತಿಳಿದರು. 15 ಜಿಲ್ಲೆಗಳಲ್ಲಿ ಅವರವರ ತವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಮಾಡಿಲ್ಲ, ಇದೆಲ್ಲ ಮುಖ್ಯ ಮಂತ್ರಿಗಳ ವಿವೇಚನೆ ಬಿಟ್ಟದ್ದು ಎಂದರು. ಕೋಟಾ ಶ್ರೀನಿವಾಸ್ ಪೂಜಾರಿಯವರಿಗೆ ಉಡುಪಿ ಜಿಲ್ಲಾ ಉಸ್ತುವಾರಿಯನ್ನು ಜಿಲ್ಲೆಯ ಐವರು ಶಾಸಕರು ತಪ್ಪಿಸಿದ ಗುಮಾನಿ ಇದೆ ಎಂದು ಬಹಿರಂಗ ಹೇಳಿಕೆ ನೀಡಿದ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಮತ್ತು ಮಾಜಿ ನಗರ ಸಭಾಧ್ಯಕ್ಷ ,ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಕಿರಣ್ ಕುಮಾರ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚಿಸು ವುದಾಗಿ ಮಟ್ಟಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಮೋರ್ಚಾ ಅಧ್ಯಕ್ಷ ಪ್ರಭಾಕರ್ ಪೂಜಾರಿ , ಪೂರ್ಣಿಮ ಸುರೇಶ ನಾಯಕ್, ಸಾಣೂರು ನರಸಿಂಹ ನಾಯಕ್,ಶಿವಕುಮಾರ್ ಉಪಸ್ಥಿತರಿದ್ದರು.