ಯಾವುದೇ ಪ್ರಚಾರವಿಲ್ಲದೆ ಉಡುಪಿಯ ಋಣ ತೀರಿಸುತ್ತಿರುವ ತರಕಾರಿ ವ್ಯಾಪಾರಿ!

ಉಡುಪಿ: ಕೊರೋನಾ ವಿರುದ್ದದ ಹೋರಾಟಕ್ಕೆ ಹಲವು ಮಂದಿ ವಿವಿಧ ರೀತಿಯಲ್ಲಿ ಕೈಜೋಡಿಸುತ್ತಿದ್ದಾರೆ , ಈ ಹೋರಾಟದ ಹಿಂದೆ ನೆರವು ನೀಡುವ ಕೈಗಳು , ಯಾವುದೇ ಪ್ರಚಾರಕ್ಕೆ ಹಾತೊರೆಯದೇ ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಒಬ್ಬರು ಬೀಡಿನಗುಡ್ಡೆಯಲ್ಲಿ ತರಕಾರಿ ಮಾರಾಟ ಮಾಡುವ ರಾಣೆಬೆವೆನ್ನೂರಿನ ಬಸವರಾಜ್ …


ಜಿಲ್ಲೆಯಲ್ಲಿ ಕೊರೋನಾದಿಂದ ಸಂಕಷ್ಟಕ್ಕೀಡಾಗಿರುವ ನಿರಾಶ್ರಿತರು, ವಲಸೆ ಕಾರ್ಮಿಕರಿಗೆ ಹಲವು ಸಂಘ ಸಂಸ್ಥೆಗಳು ಹಲವು ದಿನಗಳಿಂದ ಉಚಿತ ಊಟದ ವ್ಯವಸ್ಥೆ ಮಾಡಿವೆ, ಈ ಊಟ ತಯಾರಿಸಲು ಅಗತ್ಯವಿರುವ ತರಕಾರಿಗಳನ್ನು ಹಲವು ದಿನಗಳಿಂದ ಉಚಿತವಾಗಿ ನೀಡುತ್ತಿದ್ದಾರೆ ತರಕಾರಿ ವ್ಯಾಪಾರಿ ಬಸವರಾಜ್.

ಸುಮಾರು 25 ವರ್ಷಗಳಿಂದ ಉಡುಪಿಯಲ್ಲಿ ನೆಲೆಸಿರುವ ಬಸವರಾಜ್ , ಪ್ರತಿದಿನ ಬೆಳಗ್ಗೆ 4.30 ಕ್ಕೆ ಶಿವಮೊಗ್ಗದಿಂದ ಬರುವ ತರಕಾರಿಗಳನ್ನು ಖರೀದಿಸಿ, ಬೀಡಿನಗುಡ್ಡೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ, ಉಚಿತವಾಗಿ ತರಕಾರಿ ನೀಡುತ್ತಿರುವ ಬಗ್ಗೆ ಕೇಳಿದರೆ…
ಪ್ರತಿದಿನದ ವ್ಯಾಪಾರದಲ್ಲಿ ಹಾಕಿದ ಹಣದ ಅಸಲು ಬಂದ ಬಳಿಕ, ತನ್ನಲ್ಲಿರುವ ತರಕಾರಿಯನ್ನು ಹಸಿದ ಹೊಟ್ಟೆಗಳಿಗೆ ಊಟ ತಯಾರಿಸುವ ಸಂಘ ಸಂಸ್ಥೆಗಳಿಗೆ ನೀಡುತ್ತಿದ್ದೇನೆ,.

ಇದುವರೆಗೆ ನೀಡಿದ ತರಕಾರಿಯ ಮೊತ್ತದ ಬಗ್ಗೆ ಲೆಕ್ಕ ಹಾಕಿಲ್ಲ ಸಾರ್, ನನಗೆ ದೇವರು ಕೊಡುತ್ತಾನೆ , ಅದರಲ್ಲೇ ನಾನು ಕೊಡುತ್ತೇನೆ, ಇದರಲ್ಲಿ ನನ್ನ ದೊಡ್ಡಸ್ತನ ಏನೂ ಇಲ್ಲ, ಪ್ರತಿದಿನ ಟಿವಿಯಲ್ಲಿ ನೋಡುವ ನಿರಾಶ್ರಿತರ , ಕಾರ್ಮಿಕರ ಕಷ್ಟಕ್ಕೆ ತನ್ನಿಂದ ಏನಾದರೂ ಅಳಿಲು ಸೇವೆ ಆದರೆ ಸಾಕು , ಎಲ್ಲಾ ಮೇಲಿರುವ ಭಗವಂತನ ಇಚ್ಚೆಯಂತೆ ನಡೆಯುತ್ತದೆ ಸಾರ್, ಪ್ರತಿದಿನದ ವ್ಯಾಪಾರದಲ್ಲಿ ಸಿಗುವ ಅಲ್ಪ ಆದಾಯದಲ್ಲಿ ನಾನು
ನೆಮ್ಮದಿಯಾಗಿದ್ದೇನೆ, ಇನ್ನೂ ನನ್ನಿಂದ ಸಾಧ್ಯವಿದ್ದಷ್ಟು ದಿನ ಉಚಿತವಾಗಿ ತರಕಾರಿ ನೀಡುತ್ತೇನೆ , ಒಟ್ಟಿನಲ್ಲಿ ಈ ಕೊರೋನಾ ಹಾವಳಿ ಬೇಗ ಮುಗಿದು ಎಲ್ಲರೂ ನಿತ್ಯದಂತೆ ಜೀವನ ನಡೆಸಿದರೆ ಸಾಕು ಸಾರ್ ಎನ್ನುತ್ತಾರೆ ಬಸವರಾಜ್.


ಬೀಡಿನಗುಡ್ಡಯಲ್ಲಿ ನಡೆಯುವ ತರಕಾರಿ ಮಾರಾಟ ಸ್ಥಳದಲ್ಲಿ , ಪ್ರತಿದಿನ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಲು ಸಹಕರಿಸುತ್ತಿರುವ , ಉಡುಪಿ ಜಿಲ್ಲೆಯ ಕೊರೋನಾ ಸೈನಿಕರ ಮೂಲಕ ಬಸವರಾಜ್ ನೀಡುವ ಉಚಿತ ತರಕಾರಿಗಳು , ಆಹಾರ ತಯಾರಿಸುವ ವಿವಿಧ ಸಂಘ ಸಂಸ್ಥೆಗಳಿಗೆ ರವಾನೆಯಾಗುತ್ತಿದೆ.. ಬಸವರಾಜ್ ಸಂಪರ್ಕ ಸಂಖ್ಯೆ . 99867 78893


Leave a Reply

Your email address will not be published. Required fields are marked *

error: Content is protected !!