ರಿಕ್ಷಾ ಚಾಲಕನಿಗೆ ರಿಕ್ಷಾ ಚಾಲಕರಿಂದಲೇ ಹಲ್ಲೆ ,ನಗದು ಲೂಟಿ
ಉಡುಪಿ: ರಿಕ್ಷಾ ಚಾಲಕನಿಗೆ ರಿಕ್ಷಾ ಚಾಲಕರಿಂದಲೇ ಹಲ್ಲೆ ,ನಗದು ದೊಚಿದ ಘಟನೆ ನಿನ್ನೆ ನಡೆದಿದೆ.
ಇಲ್ಲಿನ ಸಿಟಿ ಬಸ್ ನಿಲ್ದಾಣದ ಬಳಿಯ ರಿಕ್ಷಾ ನಿಲ್ದಾಣ ಕ್ಕೆ ಬನ್ನಂಜೆ ನಿವಾಸಿ ನಂದೀಶ ( 24) ನಿನ್ನೆ ಮಧ್ಯಾಹ್ನ 1 ಗಂಟೆಗೆ ಬಾಡಿಗೆ ಮಾಡಲೆಂದು ಸರದಿ ಸಾಲಲ್ಲಿ ರಿಕ್ಷಾವನ್ನು ನಿಲ್ಲಿಸಿದ್ದರು,ಆಗ ಆತನ ರಿಕ್ಷಾ ದಲ್ಲಿ ಪ್ರಯಾಣ ಮಾಡಲು ಪ್ರಯಾಣಿಕರು ಹತ್ತಿದಾಗ ಸಂದರ್ಭ ಇದೇ ನಿಲ್ದಾಣದಲ್ಲಿ ಖಾಯಂ ಆಗಿ ಬಾಡಿಗೆ ಮಾಡುವ ನವಾಜ್ ಎಂಬಾತ ಏಕಾಏಕಿ ರಿಕ್ಷಾವನ್ನು ಅಡ್ಡಗಟ್ಟಿ ತಡೆದು ನಂದೀಶನನ್ನು ರಿಕ್ಷಾ ದಿಂದ ಹೊರಗೆಳೆದು ಹಲ್ಲೆ ಮಾಡಿದಿದ್ದು ಆಗ ಅಲ್ಲೆ ಇದ್ದ ಇತರ ರಿಕ್ಷಾ ಚಾಲಕರಾದ ಸುಧಾಕರ್ ,ಗಣೇಶ ಮೂಡುಬೆಟ್ಟು ಸಹಿತ ಇತರ 3 ಸೇರಿ ಹಲ್ಲೆ ಮಾಡಿದ್ದಾರೆಂದು ಉಡುಪಿ ಜಿಲ್ಲಾಸ್ಪತ್ರೆಗೆ ಒಳರೋಗಿಯಾಗಿ ದಾಖಲಾದ ನಂದೀಶ ಆರೋಪಿಸಿದ್ದಾರೆ.
ಹಲ್ಲೆ ಮಾಡುವಾಗ ನನ್ನ ಜೇಬಿನಲ್ಲಿ ದ್ದ 2500 ನಗದನ್ನು ದೊಚಿದ್ದಾಗಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ನಮಗೂ ವಲಯ ೧ ಬ್ಯಾಡ್ಜ್ ಇದೆ ಇದರಿಂದ ನಾವೂ ನಗರ ವ್ಯಾಪ್ತಿಯಲ್ಲಿ ಎಲ್ಲೂ ಬಾಡಿಗೆ ಮಾಡಬಹುದು ,ಆದರೆ ಸಿಟಿಬಸ್ ,ಸರ್ವೀಸ್ ,ಜೋಡುಕಟ್ಟೆ ರಿಕ್ಷಾ ನಿಲ್ದಾಣದ ಲ್ಲಿ ಮಾತ್ರ ವಲಯ 1ಬ್ಯಾಡ್ಜ್ ಇರು ರಿಕ್ಷಾ ಚಾಲಕರು ದುಡಿಯುವಂತಿಲ್ಲ ,ಈ ಬಗ್ಗೆ ಪೊಲೀಸರು ಕೂಡ ವಲಯ ೧ ಬ್ಯಾಡ್ಜ್ ಇರುವ ಚಾಲಕರು ನಗರ ಸಭಾ ವ್ಯಾಪ್ತಿಯಲ್ಲಿ ದುಡಿಯಬಹುದೆಂಬ ನ್ಯಾಯಲದ ಆದೇಶ ವಿದೆ ಎನ್ನುತ್ತಾರೆ ಅಶ್ವಿನ್ ಇಂದಿರನಗರದ ರಿಕ್ಷಾ ಚಾಲಕ.
ಇದೇ ರೀತಿ ಅವರು ಕಾನೂನು ಉಲ್ಲಂಘಿಸಿ ನಮಗೆ ತೊಂದರೆ ಕೊಟ್ಟರೆ ನಾವೂ ಕೂಡ ಕಾನೂನುಕ್ರಮ ಮೀರಿ ವರ್ತಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ಯನ್ನು ನಗರ ಪರಾವನಿಗೆ ರಿಕ್ಷಾ ಚಾಲಕರ ಸಂಘದ ಕಾರ್ಯದರ್ಶಿ ವಿಠಲ್ ಜತ್ತನ್ನ ಎಚ್ಚರಿಕೆ ನೀಡಿದ್ದಾರೆ.