ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಪರಿಹಾರಕ್ಕೆ ಶೀಘ್ರವೇ ಮಾರ್ಗಸೂಚಿ: ಸಾರಿಗೆ ಸಚಿವ
ಬೆಂಗಳೂರು: ರಾಜ್ಯದಲ್ಲಿರುವ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಉಂಟಾದ ಸಮಸ್ಯೆಗೆ ಸ್ಪಂದಿಸಿ ಸರಕಾರ ನೀಡಲು ಉದ್ದೇಶಿಸಿರುವ ಪರಿಹಾರಕ್ಕೆ ಶೀಘ್ರವೇ ಮಾರ್ಗಸೂಚಿ ಮಾಡಲಾಗುವುದೆಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ರಾಜ್ಯದಲ್ಲಿರುವ 7,75,000 ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಉಂಟಾದ ಸಮಸ್ಯೆಗೆ ಸ್ಪಂದಿಸಿ ಅವರಿಗೆ ನಮ್ಮ ಸರ್ಕಾರ ರೂ.5000 ಪರಿಹಾರ ನೀಡುವ ನಿರ್ಧಾರ ಮಾಡಿದೆ. ಈ ಪರಿಹಾರವನ್ನು ಅರ್ಹ ಚಾಲಕರಿಗೆ ತಲುಪಿಸುವ ಕ್ರಮಗಳ ಬಗ್ಗೆ ಸೂಕ್ತ ಮಾರ್ಗಸೂಚಿಯನ್ನು ಪ್ರಕಟಿಸಲಾಗುವುದು.
ಕೆಲವು ಚಾಲಕರು ಪರಿಹಾರ ಪಡೆಯಲು ಅರ್ಜಿ ಸಲ್ಲಿಸುವ ಉದ್ದೇಶದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಮತ್ತು ಕೆಲವರು ಅಂಚೆಯ ಮೂಲಕ ನಮ್ಮ ಕಛೇರಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ, ಆದರೆ ಈ ರೀತಿ ಅವರು ಹಣ ಮತ್ತು ಶ್ರಮ ವ್ಯಯ ಮಾಡುವುದು ಅನಗತ್ಯ. ಪರಿಹಾರ ತಲುಪಿಸಲು ವ್ಯವಸ್ಥೆ ಮಾಡಲಾಗುತ್ತಿರುವದರಿಂದ ಈ ಬಗ್ಗೆ ಯಾರೂ ಕೂಡಾ ಆತಂಕಕ್ಕೊಳಗಾಗದೇ ಸಹಕರಿಸಬೇಕೆಂದು ಸಚಿವರು ಮನವಿ ಮಾಡಿದ್ದಾರೆ.
Thanks to government for dission
Thanks to government for dission For helping use
Thanku