ಹರ್ಷನ ಮೊಬೈಲ್‌ನಿಂದಲೇ ಒದ್ದಾಡುತ್ತಿದ್ದ ದೃಶ್ಯ ಕುಟುಂಬಕ್ಕೆ ರವಾನಿಸಿದ್ದ ಹಂತಕರು
ಶಿವಮೊಗ್ಗ: ಸೀಗೆಹಟ್ಟಿಯ ಭಾರತಿ ಕಾಲೊನಿ ಬಳಿ ಹತ್ಯೆ ಮಾಡಿದ ಆರೋಪಿಗಳು ಹರ್ಷನ ಮೊಬೈಲ್‌ನಿಂದಲೇ ಆತನ ಸ್ನೇಹಿತರಿಗೆ ವಿಷಯ ಮುಟ್ಟಿಸಿದ್ದರು. ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ದೃಶ್ಯಗಳನ್ನು ಅವರ ಕುಟುಂಬದವರಿಗೆ ರವಾನಿಸಿದ್ದರು ಎನ್ನುವುದನ್ನು ಅವರ ಸಂಬಂಧಿಕರು ದೃಢಪಡಿಸಿದ್ದಾರೆ.
ಕುಟುಂಬಕ್ಕೆ ರೂ. 50 ಲಕ್ಷಕ್ಕೂ ಹೆಚ್ಚು ನೆರವು: ಮೃತ ಹರ್ಷ ಅವರ ಕುಟುಂಬಕ್ಕೆ ರಾಜ್ಯದ ವಿವಿಧೆಡೆಯಿಂದ ಸಾಕಷ್ಟು ನೆರವು ಹರಿದುಬರುತ್ತಿದೆ. ಬಹುತೇಕರು ಮೃತರ ತಾಯಿ ಪದ್ಮಾ ಅವರ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಖಾತೆಗೆ ಹಣ ನೀಡುತ್ತಿದ್ದಾರೆ. ಕೆಲವರು ಹರ್ಷ ಅವರ ಖಾತೆಗೆ ಜಮೆ ಮಾಡಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ರೂ 10 ಲಕ್ಷ, ಬಿಜೆಪಿ ಯುವ ಮೋರ್ಚಾ ರೂ 5 ಲಕ್ಷ, ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಅವರು ತಮ್ಮ ಫೌಂಡೇಷನ್‌ನಿಂದ ರೂ 10 ಲಕ್ಷ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ರೂ 6 ಲಕ್ಷ ಸೇರಿ ಹಲವರು ನೆರವು ನೀಡಿದ್ದಾರೆ.
ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ತಲಾ ರೂ 2 ಲಕ್ಷ ಸೇರಿದಂತೆ ಇದುವರೆಗೂ ರೂ 50 ಲಕ್ಷಕ್ಕೂ ಹೆಚ್ಚು ನೆರವು ಹರಿದುಬಂದಿದೆ. ಇನ್ನಷ್ಟು ನೆರವು ದೊರಕುವ ನಿರೀಕ್ಷೆ ಇದೆ. ಹರ್ಷ ಅವರ ತಂದೆ ನಾಗರಾಜ್ ಟೈಲರಿಂಗ್ ವೃತ್ತಿ ಮಾಡುತ್ತಿದ್ದಾರೆ. ತಾಯಿ ಗೃಹಿಣಿ. ಇಬ್ಬರೂ ಸಹೋದರಿಯರ ಮದುವೆಯಾಗಿದೆ.
ಕೋಮು ದ್ವೇಷವೇ ಕಾರಣ: ಹತ್ಯೆ ಪ್ರಕರಣದ ಮುಖ್ಯ ಆರೋಪಿ ಖಾಸಿಫ್ ಹಾಗೂ ಹರ್ಷ ಮಧ್ಯೆ ಹಲವು ಬಾರಿ ಸಣ್ಣಪುಟ್ಟ ಸಂಘರ್ಷಗಳು ನಡೆದಿದ್ದವು. ಪ್ರಖರ ಹಿಂದುತ್ವವಾದಿಯಾಗಿದ್ದ ಹರ್ಷ ಸದಾ ಅವರ ಜತೆ ದ್ವೇಷ ಸಾಧಿಸುತ್ತಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ. ಈಚೆಗೆ ನಡೆದ ಹಿಜಾಬ್, ಕೇಸರಿ ಶಾಲು ವಿವಾದದ ಸಮಯದಲ್ಲಿ ಸ್ವತಃ ಮುಂದೆ ನಿಂತು ವಿದ್ಯಾರ್ಥಿಗಳಿಗೆ ಕೇಸರಿಶಾಲು ಹಂಚಿದ್ದ ಎನ್ನಲಾಗಿದೆ. ಈ ಎಲ್ಲ ಅಂಶಗಳಿಂದ ಅವರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು. ಕೋಮು ಸಂಘರ್ಷದ ಆರೋಪದಲ್ಲಿ ಜೈಲು ಸೇರಿದ್ದ ಆಸೀಫ್ ಉಲ್ಲಾಖಾನ್ ವಾರದ ಹಿಂದಷ್ಟೆ ಜಾಮೀನಿನ ಮೇಲೆ ಹೊರಬಂದಿದ್ದ. ಅವನ ನೆರವು ಪಡೆದು ಖಾಸಿಫ್ ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕರ್ಫ್ಯೂ ವಿಸ್ತರಣೆ: ನಗರದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಆದರೂ, ಮುಂಜಾಗ್ರತಾ ಕ್ರಮವಾಗಿ ಫೆ.26ರವರೆಗೂ ಕರ್ಫ್ಯೂ ಮುಂದುವರಿಸಲಾಗಿದೆ. ಶಾಲಾ–ಕಾಲೇಜುಗಳಿಗೂ ಶನಿವಾರದವರೆಗೆ ರಜೆ ನೀಡಲಾಗಿದೆ.
ಡ್ರೋನ್ ಕಣ್ಗಾವಲು: ಹರ್ಷ ಹತ್ಯೆಯ ನಂತರ ನಗರದ ಅಪರಾಧ ಚಟುವಟಿಕೆಯ ಮೇಲೆ ಕಣ್ಗಾವಲು ಇಡಲು ನಕ್ಸಲ್ ನಿಗ್ರಹ ಪಡೆ ಹಾಗೂ ಕಾರವಾರ, ಮಂಡ್ಯದಿಂದ 6 ಡ್ರೋನ್ ಕ್ಯಾಮೆರಾ ತರಿಸಲಾಗಿದೆ.
ಅಪರಾಧ ಪತ್ತೆಗೆ ಡ್ರೋನ್ ಕಣ್ಗಾವಲು: ಹರ್ಷ ಹತ್ಯೆಯ ನಂತರ ನಗರದ ಅಪರಾಧ ಚಟುವಟಿಕೆಯ ಮೇಲೆ ಕಣ್ಗಾವಲು ಇಡಲು ನಕ್ಸಲ್ ನಿಗ್ರಹ ಪಡೆ ಹಾಗೂ ಕಾರವಾರ, ಮಂಡ್ಯದಿಂದ 6 ಡ್ರೋನ್ ಕ್ಯಾಮೆರಾ ತರಿಸಲಾಗಿದೆ. ಪ್ರತಿಯೊಂದು ಡ್ರೋನ್ 5 ಕಿ.ಮೀ ವ್ಯಾಪ್ತಿಯಲ್ಲಿನ ಚಲನವಲನ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. ಮೂರು ಬ್ಯಾಟರಿ ಸಾಮರ್ಥ್ಯದ ಉನ್ನತ ತಂತ್ರಜ್ಞಾನದ ಡ್ರೋನ್‌ಗಳಿವು.
ಫೆ.26ರವರೆಗೂ ಕರ್ಫೂ ವಿಸ್ತರಣೆ: ನಗರದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಆದರೂ, ಮುಂಜಾಗ್ರತಾ ಕ್ರಮವಾಗಿ ಫೆ.26ರವರೆಗೂ ಕರ್ಫ್ಯೂ ಮುಂದುವರಿಸಲಾಗಿದೆ. ಶಾಲಾ–ಕಾಲೇಜುಗಳಿಗೂ ಶನಿವಾರದವರೆಗೆ ರಜೆ ನೀಡಲಾಗಿದೆ.