ಜಿಲ್ಲೆಯಾದ್ಯಂತ ಸಂಭ್ರಮದ 73 ನೇ ಸ್ವಾತಂತ್ರ್ಯೋತ್ಸವ ಆಚರಣೆ
ಜಿಲ್ಲಾ ಬಿಜೆಪಿ ವತಿಯಿಂದ ಉಪಾಧ್ಯಕ್ಷ ಸುರೇಶ ಶೆಟ್ಟಿ ಗುರ್ಮೆ ಧ್ವಜಾರೋಹರೋಹಣ ನೇರವೆರಿಸಿದರು.
ಈ ಸಂದರ್ಭ ಹಿರಿಯರಾದ ರವಿ ಅಮೀನ್,ರಾಘವೇಂದ್ರ ಕಿಣಿ,ಪ್ರಭಾಕರ ಪೂಜಾರಿ, ಶ್ರೀಶ ನಾಯಕ್,ಕಿರಣ್ ಕುಮಾರ್,ಸಂಧ್ಯಾ ರಮೇಶ್ ಉಪಸ್ಥಿತರಿದ್ದರು.
ಭಾರತ್ ಸೇವಾದಳದ ವತಿಯಿಂದ ಉಡುಪಿ ನಗರದ ಸರ್ವಿಸ್ ಬಸ್ ಸ್ಟ್ಯಾಂಡ್‌ನಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣವನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇರವೆರಿಸಿದರು.
ಮುಖಂಡರಾದ ದಿನೇಶ್ ಪುತ್ರನ್, ಬಿ. ನರಸಿಂಹ ಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ರಘುಪತಿ ಬಲ್ಲಾಳ್, ಭಾಸ್ಕರ್ ರಾವ್ ಕಿದಿಯೂರು, ಪ್ರಖ್ಯಾತ್ ಶೆಟ್ಟಿ, ಮಹಾಬಲ ಕುಂದರ್, ಹರೀಶ್ ಕಿಣಿ, ಯತೀಶ್ ಕರ್ಕೇರ, ಶಬ್ಬೀರ್ ಅಹ್ಮದ್, ಸದಾಶಿವ ಕಟ್ಟೆಗುಡ್ಡೆ, ಜನಾರ್ದನ ಭಂಡಾರ್ಕಾರ್, ಶಾಂತಾರಾಮ್ ಸಾಲ್ವಂಕರ್, ಆನಂದ ಪೂಜಾರಿ, ಸುರೇಂದ್ರ ಆಚಾರ್ಯ, ಸೇವಾದಳದ ಕಿಶೋರ್, ಗೀತಾ ವಾಗ್ಳೆ, ಜ್ಯೋತಿ ಹೆಬ್ಬಾರ್, ಚಂದ್ರಿಕಾ ಶೆಟ್ಟಿ ಉಪಸ್ಥಿತರಿದ್ದರು.
ಚಿತ್ತರಂಜನ್ ಸರ್ಕಲ್ ಬಳಿ ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ವನ್ನು ಅಲೆವೂರು ಯೋಗೀಶ್ ಆಚಾರ್ಯ ನೇರವೆರಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಕಿಶೋರ್ ಆಚಾರ್ಯ,ಸುಂದರ್ ಆಚಾರ್ಯ,ಬಾಲಕೃಷ್ಣ ಆಚಾರ್ಯ ಉಸಪ್ಥಿತರಿದ್ದರು.
ಸ್ವಚ್ಛ ಉಡುಪಿ ಬ್ರಿಗೇಡ್ ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾಬಂಧನ ಪ್ರಯುಕ್ತ ಉಡುಪಿ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಬಳಿ ಗಿಡ ನೆಟ್ಟು ಗಿಡಗಳಿಗೆ ರಕ್ಷಾ ಬಂಧನ ಕಟ್ಟಿ ಆಚರಿಸಲಾಯಿತು.
ಶಾಸಕರಾದ ಕೆ ರಘುಪತಿ ಭಟ್ ರತ್ನಾಕರ್ ಇಂದ್ರಾಳಿ ಹಾಗು ಮಂಜುನಾಥ್ ಮಣಿಪಾಲ ಉಪಸ್ಥಿತರಿದ್ದರು.
ಉಡುಪಿ ರಥಬೀದಿಯ ರಿಕ್ಷಾ ಮಾಲಕರ ಮತ್ತು ಚಾಲಕರ ವತಿಯಿಂದ ನಡೆದ 73 ನೇ ಸ್ವಾತಂತ್ರ್ಯೋತ್ಸವದಲ್ಲಿ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಧ್ವಜಾರೋಹಣ ಮಾಡಿ ಧ್ವಜವು ಯಾವಾಗಲು ನಮ್ಮ ಶಿರದ ಮೇಲೆ ಹಾರಾಡ ಬೇಕು ನಮಗೆ ಸ್ವಾತಂತ್ರ್ಯ ಸಿಕ್ಕಿ ಇಷ್ಟು ಸಮಯ ಕಳೆದ ಮೇಲೆ ಈ ವರ್ಷ ಭಾರತ ದೇಶದ ಶಿರ ಸ್ಥಾನದಲ್ಲಿರುವ ಕಾಶ್ಮೀರದಲ್ಲಿ ದೇಶದ ಧ್ವಜ ಹಾರುವಂತಗಿರುವುದರಿಂದ ಸ್ವಾತಂತ್ರ್ಯೋತ್ಸವಕ್ಕೆ ನಿಜವಾದ ಅರ್ಥ ಬಂದಂತಾಗಿದೆ ಎಂದು ಶುಭ ಸಂದೇಶ ನೀಡಿದರು.
ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ಮಾಜಿ ಶಾಸಕ ಯು.ಆರ್. ಸಭಾಪತಿ ,ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಉಪಸ್ಥಿತರಿದ್ದರು.
ಬಾಲ ನ್ಯಾಯ ಮಂಡಳಿ ನಿಟ್ಟೂರು ಇದರ ಅಧ್ಯಕ್ಷೆ ,ಹಿರಿಯ ಸಿವಿಲ್ ನ್ಯಾಯಧೀಶರು ಲಾವಣ್ಯ ಎಚ್.ಎನ್.
ಸರ್ಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ್ ನಾಯಕ್, ಬಾಲ ನ್ಯಾಯ ಮಂಡಳಿ ಸದಸ್ಯರಾದ ರಾಜೇಶ,ಅಮೃತ, ಕಾನೂನು ಉಚಿತ ಸಲಹೆಗಾರರಾದ ಜಯಲಕ್ಷ್ಮೀ, ಸಿಲೋನ್ ಪುಷ್ಪ,ಸದಾನಂದ ಅಡಿಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್ಯ ಉಪಸ್ಥಿತರಿದ್ದರು.
ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ 73ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಡಾ. ತ್ರಿವೇಣಿ ವೇಣುಗೋಪಾಲ್ ನೇರವೆರಿಸಿದರು.
ವಿದ್ಯಾರ್ಥಿಗಳಾದ ಸಮರ್ಥ್ ಸಿ.ಎಸ್., ಲವೀಶ್, ಶಾಲಾ ನಾಯಕ ಮನ್ವಿತ್, ಅನುಷಾ ಉಪಸ್ಥಿತರಿದ್ದರು.
ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಕಾಪು ಪೊಲಿಪು ಖುವ್ವತುಲ್ ಇಸ್ಲಾಮ್ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿಯಿಂದ ಸ್ವಾತಂತ್ರೋತ್ಸವ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಒಳ ಹಾಗೂ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಮಧುಸೂದನ್ ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಆಸ್ಪತ್ರೆಯ ಸುಮಾರು 200ಕ್ಕೂ ಅಧಿಕ ಮಂದಿ ಒಳ ಹಾಗೂ ಹೊರರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಅಕ್ರಂ ಗುಡ್‌ವಿಲ್, ಸಂಘಟನಾ ಕಾರ್ಯದರ್ಶಿ ಆರೀಫ್ ಕಲ್ಯ, ಎಚ್.ಮುಹಮ್ಮದ್ ಹುಸೇನಾರ್, ಮೊದಿನಬ್ಬ, ಆಸೀಫ್, ಬಾಸೀತ್ ಮೊದಲಾದವರು ಉಪಸ್ಥಿತರಿದ್ದರು.
ನಿಟ್ಟೂರು ಪ್ರೌಢಶಾಲೆಯಲ್ಲಿ 73 ನೇ ಸ್ವಾತಂತ್ರ ದಿನಾಚರಣೆ
ಉಡುಪಿ : ಶಾಲೆಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು. ಮುಕ್ತಾ ಟಿ.ವಿ. ವಾಹಿನಿಯ ಶ್ರೀ ಶ್ರೀಕಾಂತ ಶೆಟ್ಟಿ ಧ್ವಜಾರೋಹಣ ನೇರವೇರಿಸಿ, ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಮಹಾನ್ ದೇಶಭಕ್ತರ ಜೀವನಗಾಥೆಗಳನ್ನು ಅನಾವರಣಗೊಳಿಸುತ್ತಾ ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನದೊಂದಿಗೆ ಸದಾ ಕರ್ತವ್ಯ ಪ್ರಜ್ಞೆಯಿಂದ ಬದುಕುವುದೇ ದೇಶಕ್ಕೆ ನೀಡುವ ಅಮೂಲ್ಯ ಕೊಡುಗೆಯಾಗಿದೆ ಎನ್ನುತ್ತಾ, ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮದ ಜಾಗೃತಿ ಮೂಡಿಸಿದರು. ಶಾಲಾ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಲ್ಲಿಕಾ ಉಡುಪ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಶ್ಚಿತಾ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಗ್ರೀಷ್ಮಾ ಕೆ. ವಂದಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನೇರವೇರಿದವು.
ಉಡುಪಿ ಸಿಟಿ ಸೆಂಟರ್ ಮಾಲ್‌ನಲ್ಲಿ ಸ್ವಾತಂತ್ರೋತ್ಸವ ದಿನಾಚರಣೆಯ ಆಚರಿಸಲಾಯಿತು. ಧ್ವಜಾರೋಹಣವನ್ನು ಬಿ.ಎಮ್ ಅಬ್ಬಾಸ್ ನೇರವೆಸಿದರು, ಈ ಸಂದರ್ಭ ಮಾಲಕರಾದ ಜಮಾಲುದ್ದೀನ್ ಉಪಸ್ಥಿತರಿದ್ದರು.