ಅಂಬಲಪಾಡಿ: ‘ಡಾ.ಅನು ಡೆಂಟಲ್ ಕೇರ್’ನ 2ನೇ ಕ್ಲಿನಿಕ್ ಶುಭಾರಂಭ
ಉಡುಪಿ ಎ.19(ಉಡುಪಿ ಟೈಮ್ಸ್ ವರದಿ): ನಗರದ ಪ್ರಸಿದ್ಧ “ಡಾ.ಅನು ಡೆಂಟಲ್ ಕೇರ್” ನ 2ನೇ ನೂತನ ಶಾಖೆ ಅಂಬಲಪಾಡಿಯ ಮೆಂಡನ್ಸ್ ಗಿರಿಜಾ ಕಟ್ಟಡದಲ್ಲಿ ಎ.18 ರಂದು ಶುಭಾರಂಭಗೊಂಡಿತು.
ಅಂಬಲಪಾಡಿ ಶ್ರೀ ಮಹಾಕಾಳಿ ಜನಾರ್ಧನ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳ್ ಅವರು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಕ್ಲಿನಿಕ್ ಶುಭಾರಂಭಕ್ಕೆ ಚಾಲನೆ ನೀಡಿದರು. ಬಳಿಕ ಆಶೀರ್ವಚನ ನೀಡಿದ ಅವರು, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಲ್ಲುಗಳು ಆರೋಗ್ಯವಾಗಿದ್ದರೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರ ವಿರಬಹುದು.
ಅಲ್ಲದೆ ಹಲ್ಲುಗಳ ಆರೋಗ್ಯ ಕಾಪಾಡಿಕೊಂಡಾಗ ವ್ಯಕ್ತಿಗಳ ಸೌಂದರ್ಯವೂ ವೃದ್ಧಿಸುತ್ತದೆ. ನಮ್ಮಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಜೊತೆಗೆ ಆಹಾರ ಪದ್ದತಿಯಲ್ಲಿ ಉಂಟಾಗಿರುವ ಬದಲಾವಣೆಯಿಂದ ಇತರ ಆರೋಗ್ಯದ ಸಮಸ್ಯೆಯ ಜೊತೆಗೆ ಹಲ್ಲುಗಳ ಆರೋಗ್ಯದ ನಮಸ್ಯೆಗಳು ಹೆಚ್ಚಾಗಿವೆ.
ದಂತ ಚಿಕಿತ್ಸಾಲಯಗಳು ಜನರಿಗೆ ಉತ್ತಮ ಸೇವೆಯನ್ನು ಸಲ್ಲಿಸುವುದರ ಜೊತೆಗೆ ಆರೋಗ್ಯದ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಡಾ. ಅನು ಡೆಂಟಲ್ ಕೇರ್ ಉಡುಪಿಯಲ್ಲಿ ಕಳೆದ 10 ವರ್ಷಗಳಿಂದ ಜನರಿಗೆ ಉತ್ತಮ ಸೇವೆ ನೀಡುತ್ತಾ ಬರುತ್ತಿದೆ. ಅದರಂತೆ ಇವರ ನೂತನ ಶಾಖೆಯಲ್ಲಿ ಸೇವೆಗಳು ಕೇವಲ ದಂತ ಚಿಕಿತ್ಸೆಗೆ ಮಾತ್ರ ಸೀಮಿತವಾಗಿರದೆ ಮುಂದಿನ ದಿನಗಳಲ್ಲಿ ವಿವಿಧ ಸೇವೆಗಳೂ ಮತ್ತಷ್ಟು ಉತ್ತಮ ಗುಣಮಟ್ಟದಲ್ಲಿ ಸಿಗುವಂತಾಗಿ ಈ ಸಂಸ್ಥೆ ಒಂದು ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಸುನೀಲ್ ಸಾಲ್ಯಾನ್ ಅವರು ಮಾತನಾಡಿ, ಡಾ.ಅನು ಡೆಂಟಲ್ ಕೇರ್ ರೋಗಿಗಳ ಅತ್ಯುತ್ತಮ ಆರೈಕೆ ಮತ್ತು ಉತ್ತಮ ಸೇವೆ ನೀಡುವಲ್ಲಿ ಈಗಾಗಲೇ ಹೆಸರುವಾಸಿಯಾಗಿದೆ. ಇಲ್ಲಿ ಪರಿಣಿತ ವೈದ್ಯರ ತಂಡ ಇದ್ದು ದಂತ ಪರೀಕ್ಷೆ ಸೇರಿದಂತೆ ವಿವಿಧ ಬಗೆಯ ವೈದ್ಯಕೀಯ ಸೇವೆಯನ್ನು ನೀಡಲಿದ್ದಾರೆ ಎಂದು ತಿಳಿಸಿದರು.
ಕ್ಲಿನಿಕ್‍ನ ಡೆಂಟಲ್ ಯುನಿಟ್ ನ್ನು ಕಾರ್ತಿಕ್ ಗ್ರೂಪ್ ನ ಆಡಳಿತ ನಿರ್ದೇಶಕ ಹರಿಯಪ್ಪ ಕೋಟ್ಯಾನ್ ಉದ್ಘಾಟಿಸಿದರು. ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳಾಗಿ ಅಂಬಲಪಾಡಿ ವಾರ್ಡ್ ನಗರಸಭಾ ಸದಸ್ಯ ಹರೀಶ್ ಶೆಟ್ಟಿ , ಮಲ್ಪೆ ಆಳಸಮುದ್ರ ಬೋಟ್ ಮಾಲಕರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಎಂ. ಕೋಟ್ಯಾನ್, ಡಾ. ಅಶೋಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಾಲಕಿ, ವೈದ್ಯೆ ಡಾ. ಅನುಪಮಾ ಸುನಿಲ್ ವಂದಿಸಿ, ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.