ಸಾಕ್ಷಿಗಳನ್ನು ಮುಚ್ಚಲು ನಡೆಸಿದ ಕೊಲೆಯೇ?- ವೆಲ್ಫೇರ್ ಪಾರ್ಟಿ ಅಫ್ ಇಂಡಿಯಾ
ಉಡುಪಿ: ಕರ್ನಾಟಕದ ಬಿಜೆಪಿ ಸರಕಾರದ ಭ್ರಷ್ಟಾಚಾರ ಹಗರಣದ ಬಗ್ಗೆ ಆರಂಭದಿಂದಲೂ ಸುದ್ದಿ ಹರಿದಾಡುತ್ತಿತ್ತು ಈ ಕಾರಣದಿಂದಲೇ ಇತಿಹಾಸ ಕಂಡಿಲ್ಲದ ಈ ಭ್ರಷ್ಟಾಚಾರ, ಸರಕಾರದ ಆಡಳಿತ ಅಸಮರ್ಥತೆ ಮತ್ತು ಅಭಿವೃದ್ಧಿ ಯಲ್ಲಿ ಹಿನ್ನಡೆಯನ್ನು ಮುಚ್ಚಿಹಾಕಲಿಕ್ಕಾಗಿ ಹಿಜಾಬ್-ಜಟ್ಕಾ, ಮುಸ್ಲಿಮರಿಗೆ ವ್ಯಾಪಾರ ನಿಷೇಧ ಮುಂತಾದ ಭಾವನಾತ್ಮಕ ವಿಷಯಗಳನ್ನು ಮುನ್ನಲೆಗೆ ತಂದು ಮಾಧ್ಯಮಗಳಲ್ಲಿ ಬಿಜೆಪಿ ಮತ್ತು ಅದರ ಸಹವರ್ತಿಗಳು ಹರಿಬಿಟ್ಟಿರು.
ಆದರೆ ಇಂದು ಉಡುಪಿಯಲ್ಲಿ ಕರ್ನಾಟಕ ಸರಕಾರದ ಗ್ರಾಮೀಣಾಭಿವ್ರಧ್ದಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪನವರ ಮೇಲೆ 40% ಲಂಚದ ಆರೋಪ ಹೊರಿಸಿದ್ದಲ್ಲದೆ ಆ ಆರೋಪಕ್ಕೆ ಸಾಕ್ಷಿಯಾಗಿದ್ದ ಬೆಳಗಾವಿಯ ಸಂತೋಷ್ ಪಾಟೀಲ್ ಜೀವ ಕಳಕೊಳ್ಳುವದರೊಂದಿಗೆ ಸರಕಾರದ ಹೂರಣ ಬಯಲಾಗಿದೆ. ಈ ಮೃತ್ಯುವಿನ ಬಗ್ಗೆ ಪರಸ್ಪರ ವಿರೋಧಾಭಾಸಗಳಿಂದ ಕೂಡಿದ ಸುದ್ದಿಗಳು ರಾಜ್ಯಾದ್ಯಂತ ಹರಿದಾಡಿದೆ. ನಿಜವಾಗಿಯೂ ಇದು ಆತ್ಮಹತ್ಯೆಯೇ ಅಥವಾ ಸಾಕ್ಷಿಗಳನ್ನು ಮುಚ್ಚಿಹಾಕಲಿಕ್ಕಾಗಿ ನಡೆಸಿದ ಕೊಲೆಯೇ ಎಂಬುದರ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತ್ರತ್ವದಲ್ಲಿ ತನಿಖೆ ನಡೆಸಬೇಕು, ಅಲ್ಲಿಯ ತನಕ ಸಚಿವ ಈಶ್ವರಪ್ಪನವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ.