ರಾಜ್ಯದಲ್ಲಿ 36 ಹೊಸ ಪ್ರಕರಣ ದೃಢ, ಒಟ್ಟು ಸೋಂಕಿತರು 789ಕ್ಕೆ ಏರಿಕೆ: 376 ಜನರು ಗುಣಮುಖ
ಬೆಂಗಳೂರು: ಮೇ 9 ಮಧ್ಯಾಹ್ನ 12 ಗಂಟೆವರೆಗೂ ರಾಜ್ಯದಲ್ಲಿ 36 ಹೊಸ ಕೋವಿಡ್–19 ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 789ಕ್ಕೆ ಏರಿಕೆಯಾಗಿದೆ. ಪ್ರಸ್ತುತ 379 ಜನರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ತಿಳಿಸಿದೆ.
ಒಟ್ಟು ಪ್ರಕರಣಗಳ ಪೈಕಿ 30 ಮಂದಿ ಸಾವಿಗೀಡಾಗಿದ್ದು, 376 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 7, ದಾವಣಗೆರೆಯಲ್ಲಿ 6, ಬೆಂಗಳೂರು ನಗರದಲ್ಲಿ 12, ಚಿತ್ರದುರ್ಗದಲ್ಲಿ 3, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ 3, ಬೀದರ್‌ನಲ್ಲಿ 3, ತುಮಕೂರು ಹಾಗೂ ವಿಜಯ ಪುರದಲ್ಲಿ ತಲಾ 1 ಪ್ರಕರಣಗಳು ಸೇರಿ ಶನಿವಾರ ಒಟ್ಟು 36 ಪ್ರಕರಣಗಳು ದೃಢಪಟ್ಟಿವೆ.