ಯುವಕ ಸೇರಿದಂತೆ ಜಿಲ್ಲೆಯಲ್ಲಿ 3 ನಾಪತ್ತೆ ಪ್ರಕರಣ ದಾಖಲು


ಉಡುಪಿ : ಯುವಕ ಸೇರಿದಂತೆ ಉಡುಪಿ ಜಿಲ್ಲೆಯ ವಿವಿದೆಡೆ ನಾಪತ್ತೆ ಪ್ರಕರಣಗಳು ದಾಖಲಾಗಿದೆ

ಮಣಿಪಾಲದ ನಿವಾಸಿ ಅರವಿಂದ್ ರಾವ್ (29) ಎಂಬುವವರು ಅಕ್ಟೋಬರ್ 14 ರಂದು ಮನೆಯಿಂದ ಹೋದವರು ಈ ತನಕ ಮನೆಗೆ ವಾಪಸು ಬಾರದೆ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದು, 5 ಅಡಿ 7 ಇಂಚು ಎತ್ತರವಿದ್ದು, ಸಪೂರ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ, ತುಳು, ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದು, ಇವರ ಪತ್ತೆಯಾದಲ್ಲಿ ಮಣಿಪಾಲ ಠಾಣೆ ದೂ.ಸಂಖ್ಯೆ: 0820-2570328, ಪೊಲೀಸ್ ನಿರೀಕ್ಷಕರು, ಮಣಿಪಾಲ ಠಾಣೆ ಮೊ.ಸಂಖ್ಯೆ: 9480805448, ಪೊಲೀಸ್ ಉಪ ನಿರೀಕ್ಷಕರು, ಮಣಿಪಾಲ ಠಾಣೆ ಮೊ.ನಂ: 9480805475 ಗೆ ಮಾಹಿತಿ ನೀಡುವಂತೆ ಮಣಿಪಾಲ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಯುವಕ ನಾಪತ್ತೆ
ಉಡುಪಿ, ಅಲೆವೂರು ಗುಡ್ಡೆಯಂಗಡಿ ನಿವಾಸಿ ನಿತೇಶ್ (19) ಎಂಬುವವರು ಅಕ್ಟೋಬರ್ 11 ರಂದು ಕುಕ್ಕಿಕಟ್ಟೆಗೆ ಔಷಧಿ ತರಲು ಹೋಗಿ ಬರುವುದಾಗಿ ಹೇಳಿ ಹೋದವರು ಈತನಕ ಮನೆಗೆ ವಾಪಸು ಬಾರದೆ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದು, 5 ಅಡಿ 6 ಇಂಚು ಎತ್ತರವಿದ್ದು, ಸಪೂರ ಶರೀರ ಹೊಂದಿದ್ದು, ಕನ್ನಡ, ತುಳು ಭಾಷೆ ಬಲ್ಲವರಾಗಿದ್ದು, ಇವರ ಪತ್ತೆಯಾದಲ್ಲಿ ಮಣಿಪಾಲ ಠಾಣೆ ದೂ.ಸಂಖ್ಯೆ: 0820-2570328, ಪೊಲೀಸ್ ನಿರೀಕ್ಷಕರು, ಮಣಿಪಾಲ ಠಾಣೆ ಮೊ.ಸಂಖ್ಯೆ: 9480805448, ಪೊಲೀಸ್ ಉಪ ನಿರೀಕ್ಷಕರು, ಮಣಿಪಾಲ ಠಾಣೆ ಮೊ.ನಂ: 9480805475 ಗೆ ಮಾಹಿತಿ ನೀಡುವಂತೆ ಮಣಿಪಾಲ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ವ್ಯಕ್ತಿ ನಾಪತ್ತೆ

ಕುಂದಾಪುರ ತಾಲೂಕು ಕೂರ್ಗಿ ಗ್ರಾಮದ ದಡ್ಡ ನರಿಕಲ್ಲು ನಿವಾಸಿ ಗಣೇಶ್ ಆಚಾರಿ (40) ಎಂಬುವವರು ಮರಕೆಲಸ ಮಾಡಿಕೊಂಡಿದ್ದು, ಸೆಪ್ಟಂಬರ್ 27 ರಂದು ಕೆಲಸದ ನಿಮಿತ್ತ ಕೋಟೇಶ್ವರಕ್ಕೆ ಹೋಗುವುದಾಗಿ ಮನೆಯಿಂದ ಹೋದವರು ಈತನಕ ಮನೆಗೆ ವಾಪಸು ಬಾರದೆ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದು, 5 ಅಡಿ ಎತ್ತರವಿದ್ದು, ಗೋಧಿ ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಭಾಷೆ ಬಲ್ಲವರಾಗಿದ್ದು, ಇವರ ಪತ್ತೆಯಾದಲ್ಲಿ ಪೊಲೀಸ್ ಉಪ ನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ, ದೂ.ಸಂಖ್ಯೆ: 08254-237100, ಪೊಲೀಸ್ ವೃತ್ತ ನಿರೀಕ್ಷಕರು, ಕುಂದಾಪುರ ವೃತ್ತ, ದೂ.ಸಂಖ್ಯೆ:08254-230880, ಉಡುಪಿ ಕಂಟ್ರೋಲ್ ರೂಂ: 0820-2526444 ಗೆ ಮಾಹಿತಿ ನೀಡುವಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!