ಅದೃಷ್ಟ ಕೂಪನ್ ಹೆಸರಲ್ಲಿ ಗೃಹಿಣಿ ಗೆ 3.5 ಲಕ್ಷ ವಂಚನೆ
ಉಡುಪಿ: ಅದ್ರಷ್ಟ ಕೂಪನ್ ಗೆದ್ದೀರಿ ಎಂದು ಹೇಳಿ ಗ್ರಹಿಣಿಗೆ 3.5 ಲಕ್ಷ ವಂಚನೆ.ಕಳೆದ ಎಪ್ರಿಲ್ ರಂದು, ನೀಲಾವರ ನಿವಾಸಿ ಪಲ್ಲವಿ (29) ಎಂಬವರಿಗೆ ಕರೆ ಮಾಡಿದ NAAPTOL ಕಂಪೆನಿಯಿಂದ Scratch Win ಕೂಪನ್ ನಲ್ಲಿ ರೂಪಾಯಿ 12 ಲಕ್ಷ ರೂ ನಗದು ಗೆದ್ದೀರಿ ಹೇಳಿದ್ದ ಪತ್ರ ಬಂದಿದ್ದು ,ಅದನ್ನು ನಂಬಿದ ಪಲ್ಲವಿ ಅದರಲ್ಲಿದ್ದ ಮೊಬೈಲ್ ನಂಬರ್ ಗೆ ಸಂಪರ್ಕಿಸಿದರು.
ಅಶ್ವಿನ್ ಕುಮಾರ್ NAAPTOL ಕಂಪೆನಿಯವರು ನೀವು 12 ಲಕ್ಷ ಗೆದ್ದಿದ್ದು , ಇದನ್ನು ಪಡೆಯಲು ಸರ್ವಿಸ್ ಚಾರ್ಜ್, ಸರ್ಕಾರಿ ಚಾರ್ಜ್, NOC & LOC ಚಾರ್ಜ್, ಸೆಕ್ಯೂರಿಟಿ ಡೆಪೋಸಿಟ್, GST & Central Tax, ಹಾಗೂ ಇತರೇ ಖರ್ಚುಗಳಿಗಾಗಿ ಒಟ್ಟು ರೂಪಾಯಿ 3,55,800/ ನೀಡಬೇಕು ಎಂದಿದ್ದರು. ಇದನ್ನು ನಂಬಿದ ಈಕೆ- ಅಶ್ವಿನ್ ಕುಮಾರ್ ಸಹಿತ ಇನ್ನೋರ್ವ ಆರೋಪಿ ಅಜಯ್ ಕುಮಾರ್ ಅವರ ಬೇರೆ ಬೇರೆ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದ್ದರು. ನಂತರ ಆರೋಪಿಗಳು, ವಿಜೇತವಾಗಿರುವ ಹಣವನ್ನು ನೀಡದೇ ಕಟ್ಟಿದ ಹಣವನ್ನು ವಾಪಾಸು ನೀಡದೇ ನಂಬಿಸಿ, ಮೋಸ ಮಾಡಿರುವುದಾಗಿ ಪಲ್ಲವಿ ಸೆನ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ.