ಉಡುಪಿ: 237 ಮಂದಿಯಲ್ಲಿ ಸೋಂಕು ದೃಢ, 5361 ಆಸ್ಪತ್ರೆಯಿಂದ ಬಿಡುಗಡೆ
ಉಡುಪಿ(ಉಡುಪಿ ಟೈಮ್ಸ್ ವರದಿ) : ರವಿವಾರ ಜಿಲ್ಲೆಯಲ್ಲಿ 237 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ ಉಡುಪಿ ತಾಲ್ಲೂಕಿನ 122 ಕುಂದಾಪುರದ 100 ಹಾಗೂ ಕಾರ್ಕಳದ 14 ಹಾಗೂ ಬೇರೆ ಜಿಲ್ಲೆಯ ಓರ್ವವರು ಇದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 7,968ಕ್ಕೇರಿದೆ.
ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಐಎಲ್ಐ ಲಕ್ಷಣಗಳಿದ್ದ 569 ಜನರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು.
ರವಿವಾರ 260 ರೋಗಿಗಳು ಗುಣಮುಖರಾಗಿದ್ದು, ಇದುವರೆಗೂ 5361 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 2,537 ಸಕ್ರಿಯ ಸೋಂಕಿತ ಪ್ರಕರಣಗಳಿವೆ.